ಅಕ್ರಮವಾಗಿ ತಿರುಪ್ಪೂರ್‌ಗೆ ಪ್ರವೇಶಿಸಿದ ಆರು ಬಾಂಗ್ಲಾ ಪ್ರಜೆಗಳ ಬಂಧನ
ತಮಿಳುನಾಡಿನ ತಿರುಪ್ಪೂರ್‌ಗೆ ಪ್ರವೇಶಿಸಿದ ಆರು ಬಾಂಗ್ಲಾದೇಶಿ ಯುವಕರು ಪಲ್ಲಡಂಗೆ ಬಸ್ ಹತ್ತಲು ಹೊರಟಿದ್ದಾಗ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.;
ಅಕ್ರಮವಾಗಿ ತಮಿಳುನಾಡಿನ ತಿರುಪ್ಪೂರ್‌ಗೆ ಪ್ರವೇಶಿಸಿದ ಆರು ಬಾಂಗ್ಲಾದೇಶಿ ಯುವಕರು ಪಲ್ಲಡಂಗೆ ಬಸ್ ಹತ್ತಲು ಹೊರಟಿದ್ದಾಗ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಅನುಮಾನದ ಮೇರೆಗೆ ಕ್ಷಿಪ್ರ ಕಾರ್ಯಾಚರಣೆ ಪಡೆಯ ಸಿಬ್ಬಂದಿಯನ್ನು ಒಳಗೊಂಡ ಪೊಲೀಸ್ ತಂಡವು ಯುವಕರನ್ನು ತಡೆದು ಆಧಾರ್ ಸೇರಿದಂತೆ ಅವರ ದಾಖಲೆಗಳನ್ನು ಪರಿಶೀಲಿಸಲು ಮುಂದಾಗಿದ್ದಾರೆ. ಆದರೆ ಅವರು ತಮ್ಮ ದಾಖಲೆಗಳನ್ನು ನೀಡಲು ವಿಫಲರಾಗಿದ್ದಾರೆ.
ಈ ಆರು ಮಂದಿ ಹದಿನೈದು ದಿನಗಳ ಹಿಂದೆ ಬಾಂಗ್ಲಾದೇಶದಿಂದ ಬಂದಿದ್ದು, ಮುದಲಿಪಾಳ್ಯಂನಲ್ಲಿರುವ ನಿಟ್‌ವೇರ್ ಕಂಪನಿಯಿಂದ ಹಿಂತಿರುಗಿದ್ದಾರೆ ಎಂದು ಪೊಲೀಸ್ ತಂಡಕ್ಕೆ ತಿಳಿದುಬಂದಿದೆ. ಇನ್ನೊಂದು ನಿಟ್‌ವೇರ್ ಘಟಕದಲ್ಲಿ ಉದ್ಯೋಗ ಪಡೆಯುವ ಸಲುವಾಗಿ ಇಲ್ಲಿಂದ ಪಲ್ಲಡಂಗೆ ಬಸ್ ಹತ್ತಲು ಮುಂದಾಗಿದ್ದರು. ಆದರೆ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಬಂಧಿತರನ್ನು ಬಾಂಗ್ಲಾದೇಶದ ನಾರಾಯಣಗಂಜ್‌ಗೆ ಸೇರಿದ ತನ್ವಿರ್ (39), ರಶೀಬ್ ಗಾವುನ್ (43), ಮೊಹಮ್ಮದ್ ಅಸ್ಲಾಂ (40), ಮೊಹಮ್ಮದ್ ಅಲ್ ಇಸ್ಲಾಂ (37), ಮೊಹಮ್ಮದ್ ರಾಹುಲ್ ಅಮೀನ್ (30) ಮತ್ತು ಶಾಮುನ್ ಶೇಕ್ (38) ಎಂದು ಗುರುತಿಸಲಾಗಿದೆ. ತನಿಖೆ ಮುಂದುವರೆಯುತ್ತಿದೆ.