ನಕಲಿ ಎನ್‌ಸಿಸಿ ಕ್ಯಾಂಪ್​​ನಲ್ಲಿ ಲೈಂಗಿಕ ದೌರ್ಜನ್ಯ: ಪ್ರಕರಣದ ಪ್ರಮುಖ ಆರೋಪಿ ಆತ್ಮಹತ್ಯೆ

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಕಲಿ ಎನ್‌ಸಿಸಿ ಶಿಬಿರದಲ್ಲಿ ಕೆಲವು ಶಾಲಾ ಬಾಲಕಿಯರ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧಿತನಾಗಿದ್ದ ವ್ಯಕ್ತಿ ಶುಕ್ರವಾರ ಮುಂಜಾನೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.;

Update: 2024-08-23 14:36 GMT
ನಕಲಿ ಎನ್‌ಸಿಸಿ ಕ್ಯಾಂಪ್ ಅತ್ಯಾಚಾರ ಆರೋಪಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಕಲಿ ಎನ್‌ಸಿಸಿ ಶಿಬಿರದಲ್ಲಿ ಕೆಲವು ಶಾಲಾ ಬಾಲಕಿಯರ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧಿತನಾಗಿದ್ದ ವ್ಯಕ್ತಿ ಶುಕ್ರವಾರ (ಆಗಸ್ಟ್ 23) ಮುಂಜಾನೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

 ಆರೋಪಿ ಶಿವರಾಮ್‌ನನ್ನು  ಪೊಲೀಸರು ಬಂಧಿಸುವ ಮೊದಲುವ ಇಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಆತನನ್ನು ಚಿಕಿತ್ಸೆಗಾಗಿ ಸೇಲಂ ಸರ್ಕಾರಿ ಮೋಹನ್ ಕುಮಾರಮಂಗಲಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು  ಕೃಷ್ಣಗಿರಿ ಜಿಲ್ಲಾ ಎಸ್ಪಿ ಪಿ ತಂಗದುರೈ ಹೇಳಿದ್ದಾರೆ.

ಶಿವರಾಮನ್ ನಕಲಿ ಎನ್‌ಸಿಸಿ ಶಿಬಿರವನ್ನು ಆಯೋಜಿಸಿದ್ದು, ಅಲ್ಲಿ ಎಂಟನೇ ತರಗತಿಯ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಯಿತು. ಇತರ ಹುಡುಗಿಯರ ಮೇಲೆ ದೌರ್ಜನ್ಯ ಎಸಗಲಾಗಿದೆ. ಶಿಬಿರದಲ್ಲಿ 17 ಬಾಲಕಿಯರು ಸೇರಿದಂತೆ ಸುಮಾರು 41 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಾಲಕಿಯು ತನಗಾದ ಆಘಾತವನ್ನು ಪೋಷಕರಿಗೆ ತಿಳಿಸಿದಾಗ, ಅವರು ಪೊಲೀಸರಿಗೆ ದೂರು ನೀಡಿದ ನಂತರ ದೌರ್ಜನ್ಯ ನಡೆದಿರುವುದು ಬಯಲಾಗಿದೆ.

ಕೃಷ್ಣಗಿರಿಯ ಈ ಖಾಸಗಿ ಶಾಲೆಯಲ್ಲಿ ಯಾವುದೇ ಅಧಿಕೃತ ಎನ್‌ಸಿಸಿ ಶಿಬಿರ ನಡೆಸಿಲ್ಲ ಎಂದು ತಮಿಳುನಾಡು, ಪುದುಚೇರಿ ಮತ್ತು ಅಂಡಮಾನ್‌ನ ಎನ್‌ಸಿಸಿ ನಿರ್ದೇಶನಾಲಯದ ಉಪ ಮಹಾನಿರ್ದೇಶಕ ಕಮೋಡೋರ್ ಎಸ್ ರಾಘವ್ ಸೋಮವಾರ ಹೇಳಿಕೆ ನೀಡಿದ್ದರು. ಶಿಬಿರವು ಅನಧಿಕೃತ ಮತ್ತು ಮೋಸದಿಂದ ಕೂಡಿದ್ದು, ಶಾಲೆಯು ಎನ್‌ಸಿಸಿಯಲ್ಲಿ ನೋಂದಾಯಿಸಲ್ಪಟ್ಟಿಲ್ಲ ಅಥವಾ ಸಂಯೋಜಿತವಾಗಿಲ್ಲ ಎಂದು ಅವರು ಹೇಳಿದರು. 16 ಬಾಲಕಿಯರು ಸೇರಿದಂತೆ 41 ವಿದ್ಯಾರ್ಥಿಗಳನ್ನು ಒಳಗೊಂಡ ನಕಲಿ ಎನ್‌ಸಿಸಿ ಶಿಬಿರವನ್ನು ಶಾಲೆಯ ಆವರಣದಲ್ಲಿ ಆಗಸ್ಟ್ 5 ರಿಂದ 9 ರವರೆಗೆ ಆಯೋಜಿಸಲಾಗಿತ್ತು. 

ಘಟನೆಯನ್ನು ಮುಚ್ಚಿಹಾಕಲು ಯತ್ನಿಸಿದ ಆರೋಪದ ಮೇಲೆ ಶಾಲೆಯ ಪ್ರಾಂಶುಪಾಲರು ಸೇರಿದಂತೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.  ಪ್ರಮುಖ ಆರೋಪಿ ಶಿವರಾಮನ್ ಆರಂಭದಲ್ಲಿ ಬಂಧನದಿಂದ ತಪ್ಪಿಸಿಕೊಂಡಿದ್ದ. ಅಂತಿಮವಾಗಿ ಕೊಯಮತ್ತೂರಿನಲ್ಲಿ ಭಾನುವಾರ ತಡರಾತ್ರಿ ಶಿವರಾಮನ್ ಅವರನ್ನು ಬಂಧಿಸಲಾಯಿತು.   ಈ ವೇಳೆ ಆತ  ವಿಶೇಷ ಪೊಲೀಸ್ ತಂಡದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ ಅವರ ಬಲಗಾಲು ಮೂಳೆ ಮುರಿತಕ್ಕೆ ಒಳಗಾಗಿತ್ತು ಬಳಿಕ ಅವರನ್ನು ಕೃಷ್ಣಗಿರಿ ಜಿಲ್ಲಾ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು. 

Tags:    

Similar News