T20: ಸೂರ್ಯಕುಮಾರ್ ನಾಯಕ, ಶುಭಮನ್ ಗಿಲ್ ಉಪನಾಯಕ

ರೋಹಿತ್ ಶರ್ಮಾ ಏಕ ದಿನ ಪಂದ್ಯಗಳ ನಾಯಕತ್ವ ವಹಿಸಲಿದ್ದಾರೆ. ವಿರಾಟ್ ಕೊಹ್ಲಿ ಶ್ರೀಲಂಕಾ ಸರಣಿಯಲ್ಲಿ ಆಡಲಿದ್ದಾರೆ.;

Update: 2024-07-19 06:32 GMT

ಜುಲೈ 27 ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಸರಣಿಗೆ ಸೂರ್ಯಕುಮಾರ್ ಯಾದವ್ ಅವರನ್ನು ಟಿ20 ತಂಡದ ನಾಯಕರಾಗಿ ಆಯ್ಕೆ ಮಾಡಲಾಗಿದೆ. 50 ಓವರ್‌ಗಳ ಪಂದ್ಯಗಳಿಗೆ ರೋಹಿತ್ ಶರ್ಮಾ ನಾಯಕರಾಗಿರುತ್ತಾರೆ.

ಶುಬ್ಮನ್ ಗಿಲ್ ಅವರು ಎರಡೂ ಮಾದರಿಯ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಹಾರ್ದಿಕ್ ಪಾಂಡ್ಯ 2024 ರ ಟಿ20 ವಿಶ್ವಕಪ್‌ನಲ್ಲಿ ಉಪನಾಯಕರಾಗಿದ್ದರು. ರೋಹಿತ್ ನಾಯಕತ್ವ ವಹಿಸಿದ್ದು,ತಂಡ ವಿಶ್ವ ಕಪ್‌ ಗೆದ್ದಿತು. ಈಗ ಹಾರ್ದಿಕ್ ಅವರನ್ನು ಟಿ20 ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಆದರೆ, ಏಕ ದಿನ ಪಂದ್ಯದಲ್ಲಿ ಅವರಿಗೆ ಸ್ಥಾನ ನೀಡಿಲ್ಲ. 

ವಿಜಯ್ ಹಜಾರೆ ಟ್ರೋಫಿಯಲ್ಲಿ ಏಳು ಅರ್ಧ ಶತಕ ಸಿಡಿಸಿರುವ ರಿಯಾನ್ ಪರಾಗ್ ಮತ್ತು ದೆಹಲಿ ವೇಗಿ ಹರ್ಷಿತ್ ರಾಣಾ ಏಕದಿನ ತಂಡದಲ್ಲಿ ಸೇರ್ಪಡೆಯಾದ ಎರಡು ಹೊಸ ಮುಖಗಳಾಗಿವೆ.

ಶ್ರೀಲಂಕಾ ಪ್ರವಾಸವು ಹೊಸ ಮುಖ್ಯ ಕೋಚ್ ಗೌತಮ್ ಗಂಭೀರ್‌ ಅವರ ಮೊದಲ ಪ್ರವಾಸವಾಗಿದೆ. ಗಂಭೀರ್‌ ಅವರು ರಾಹುಲ್ ದ್ರಾವಿಡ್‌ ಅವರಿಂದ ಅಧಿಕಾರ ವಹಿಸಿಕೊಂಡರು. ದ್ರಾವಿಡ್‌ ಅಧಿಕಾರಾವಧಿ ಅಮೆರಿಕದ 2024 ರ ಟಿ20 ವಿಶ್ವಕಪ್‌ನೊಂದಿಗೆ ಕೊನೆಗೊಂಡಿತು.

ಜುಲೈ 27,28 ಹಾಗೂ 30ರಂದು ಟಿ 20 ಪಂದ್ಯಗಳು ಹಾಗೂ ಆಗಸ್ಟ್‌ 2,4, 7ರಂದು ಏಕ ದಿನ ಪಂದ್ಯಗಳು ನಡೆಯಲಿವೆ.

ಟಿ 20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಭ್ ಪಂತ್/ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಶಿವಂ‌ ದುಬೆ, ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್‌, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಖಲೀಲ್ ಅಹ್ಮದ್, ಮೊಹಮ್ಮದ್. ಸಿರಾಜ್.

ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್/ ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲದೀಪ್ ಯಾದವ್, ಮೊಹಮ್ಮದ್. ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ.

Tags:    

Similar News