Suresh Gopi: 'ಮೇಲ್ಜಾತಿ'ಗೆ ಬುಡಕಟ್ಟು ವ್ಯವಹಾರಗಳ ಖಾತೆ ನೀಡಿ: ಸಚಿವ ಸುರೇಶ್ ಗೋಪಿ ವಿವಾದಾತ್ಮಕ ಹೇಳಿಕೆ

Suresh Gopi :ನವದೆಹಲಿಯಲ್ಲಿ ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ' ಖಾತೆಯನ್ನು ಮೇಲ್ಜಾತಿಯವರು ವಹಿಸಿದರೆ ಮಾತ್ರ ಬುಡಕಟ್ಟಿನ ಕಲ್ಯಾಣದಲ್ಲಿ ನಿಜವಾದ ಪ್ರಗತಿ ಸಾಧ್ಯ' ಎಂದು ಹೇಳಿಕೆ ನೀಡಿದ್ದಾರೆ.;

Update: 2025-02-02 13:12 GMT
ಸುರೇಶ್‌ ಗೋಪಿ.

'ಬುಡಕಟ್ಟು ವ್ಯವಹಾರಗಳ ಖಾತೆಯನ್ನು ಮೇಲ್ಜಾತಿಯವರಿಗೆ ನೀಡಿದರೆ ಉತ್ತಮ' ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಖಾತೆ ಸಚಿವ, ನಟ ಸುರೇಶ್ ಗೋಪಿ ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

ನವದೆಹಲಿಯಲ್ಲಿ ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ' ಖಾತೆಯನ್ನು ಮೇಲ್ಜಾತಿಯವರು ವಹಿಸಿದರೆ ಮಾತ್ರ ಬುಡಕಟ್ಟಿನ ಕಲ್ಯಾಣದಲ್ಲಿ ನಿಜವಾದ ಪ್ರಗತಿ ಸಾಧ್ಯ' ಎಂದು ಹೇಳಿಕೆ ನೀಡಿದ್ದಾರೆ.

'ಬುಡಕಟ್ಟು ವ್ಯವಹಾರಗಳ ಸಚಿವರನ್ನಾಗಿ ಬುಡಕಟ್ಟು ಸಮುದಾಯದ ವ್ಯಕ್ತಿಯನ್ನು ಮಾತ್ರ ಆಯ್ಕೆ ಮಾಡುವುದು ನಮ್ಮ ಸಮಸ್ಯೆ ' ಎಂಬುದಾಗಿಯೂ ಹೇಳಿದ್ದಾರೆ.

'ಬುಡಕಟ್ಟು ಸಮುದಾಯದ ಕಲ್ಯಾಣಕ್ಕಾಗಿ ಹೊರಗಿನವರನ್ನು ನೇಮಿಸಬೇಕು ಎಂಬುದು ನನ್ನ ಆಕಾಂಕ್ಷೆ. ಅದನ್ನು ಬ್ರಾಹ್ಮಣ ಅಥವಾ ನಾಯ್ದು ನಿಭಾಯಿಸಲಿ. ಆಗ ಮಾತ್ರ ಗಮನಾರ್ಹ ಬದಲಾವಣೆ ಸಾಧ್ಯ. ಮುಂದುವರಿದ ಸಮುದಾಯಗಳ ಖಾತೆಗಳನ್ನು ಬುಡಕಟ್ಟು ಜನಾಂಗದವರಿಗೆ ನೀಡಬೇಕು. ಪ್ರಜಾಪ್ರಭುತ್ವದಲ್ಲಿ ಅಂತಹ ಬದಲಾವಣೆ ಆಗಬೇಕು' ಎಂದು ಅವರು ಹೇಳಿದ್ದಾರೆ.

'ಬುಡಕಟ್ಟು ವ್ಯವಹಾರಗಳ ಖಾತೆ ನನಗೆ ನೀಡಬೇಕು ಎಂದು ಪ್ರಧಾನಿ ಅವರಿಗೆ ಮನವಿ ಮಾಡಿದ್ದೇನೆ. ಆದರೆ ಖಾತೆ ಹಂಚಿಕೆಗಳಿಗೆ ಕೆಲವೊಂದು ರೂಢಿಗಳಿವೆ' ಎಂದು ತ್ರಿಶೂರ್‌ನ ಸಂಸದರಾಗಿರುವ ಸುರೇಶ್ ಗೋಪಿ ಹೇಳಿದ್ದಾರೆ.

    

ಸಂಸದರ ಹೇಳಿಕೆ ವಿರುದ್ಧ ಕೇರಳದ ಎಡಪಕ್ಷಗಳ ನಾಯಕರಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. 'ಜಾತಿ ವ್ಯವಸ್ಥೆ'ಯ ನಾಯಕನನ್ನು ಕೂಡಲೇ ಸಂಪುಟದಿಂದ ಕೆಳಗಿಳಿಸಬೇಕು ಎಂದು ಬೇಡಿಕೆಯಿಟ್ಟಿದ್ದಾರೆ.  

Tags:    

Similar News