ನಾಳೆ ಅರವಿಂದ ಕೇಜ್ರಿವಾಲ್ ʼಸತ್ಯ ಬಹಿರಂಗʼ
ದೆಹಲಿ ಮುಖ್ಯಮಂತ್ರಿಯನ್ನು ಮಾ. 21 ರಂದು ಬಂಧಿಸಿರುವ ಇಡಿ, ಮಾರ್ಚ್ 28 ರವರೆಗೆ ಕಸ್ಟಡಿಗೆ ಪಡೆದುಕೊಂಡಿದೆ. ʻಮಾರ್ಚ್ 28 ರಂದು ತಮ್ಮ ಪತಿ ಸತ್ಯವನ್ನು ಬಹಿರಂಗಪಡಿಸುತ್ತಾರೆ ಮತ್ತು ಸಾಕ್ಷ್ಯವನ್ನು ಸಹ ಪ್ರಸ್ತುತಪಡಿಸುತ್ತಾರೆʼ ಎಂದು ಸುನೀತಾ ಕೇಜ್ರಿವಾಲ್ ಹೇಳಿದ್ದಾರೆ.;
ಅನೇಕ ಬಾರಿ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ್ದರೂ, ಯಾವುದೇ ಹಣ ಪತ್ತೆಯಾಗಿಲ್ಲ ಎಂದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ, ಅರವಿಂದ್ ಮಾರ್ಚ್ 28 ರಂದು ನ್ಯಾಯಾಲಯದಲ್ಲಿ ಅಬಕಾರಿ ನೀತಿ ಹಗರಣದ ಕುರಿತು ʻಭಾರಿ ಸತ್ಯʼವನ್ನು ಬಹಿರಂಗಪಡಿಸಲಿದ್ದಾರೆ ಎಂದು ಹೇಳಿದರು.
ದೆಹಲಿ ಮುಖ್ಯಮಂತ್ರಿಯನ್ನು ಮಾ. 21 ರಂದು ಬಂಧಿಸಿರುವ ಇಡಿ, ಮಾರ್ಚ್ 28 ರವರೆಗೆ ಕಸ್ಟಡಿಗೆ ಪಡೆದುಕೊಂಡಿದೆ. ʻಮಾರ್ಚ್ 28 ರಂದು ತಮ್ಮ ಪತಿ ಸತ್ಯವನ್ನು ಬಹಿರಂಗಪಡಿಸುತ್ತಾರೆ ಮತ್ತು ಸಾಕ್ಷ್ಯವನ್ನು ಸಹ ಪ್ರಸ್ತುತಪಡಿಸುತ್ತಾರೆʼ ಎಂದು ಸುನೀತಾ ಕೇಜ್ರಿವಾಲ್ ಹೇಳಿದ್ದಾರೆ.
‘ಒಂದು ಪೈಸೆಯಷ್ಟು ಸಾಕ್ಷ್ಯ ಸಿಕ್ಕಿಲ್ಲ’: ʻಎರಡು ವರ್ಷ ತನಿಖೆ ನಡೆಸಿದರೂ, ಇಡಿಗೆ ಒಂದು ಪೈಸೆಯಷ್ಟು ಸಾಕ್ಷ್ಯ ಸಿಕ್ಕಿಲ್ಲ.ಅವರು ಮುಖ್ಯಮಂತ್ರಿ ನಿವಾಸದ ಮೇಲೆ ದಾಳಿ ಮಾಡಿದರು. ಆದರೆ, ಸಿಕ್ಕಿದ್ದು 73,000 ರೂ. ಮಾತ್ರʼ ಎಂದು ಹೇಳಿದರು.
ʻಪತಿ ಕಸ್ಟಡಿಯಲ್ಲಿದ್ದಾಗ ಜಲ ಸಚಿವೆ ಅತಿಶಿ ಅವರಿಗೆ ನಿರ್ದೇಶನಗಳನ್ನು ನೀಡಿದರು. ಕೇಂದ್ರಕ್ಕೆ ಅದು ಸಮಸ್ಯೆ ಆಯಿತು. ಅವರು ದೆಹಲಿಯನ್ನು ಹಾಳುಮಾಡಲು ಬಯಸುತ್ತಾರೆಯೇ? ಈ ಬಗ್ಗೆ ಅರವಿಂದ್ ಬೇಸರಗೊಂಡಿದ್ದಾರೆʼ ಎಂದು ಸುನೀತಾ ಹೇಳಿದರು. ಕೇಜ್ರಿವಾಲ್ ಒಬ್ಬ ಧೈರ್ಯಶಾಲಿ. ಅವರ ಸಂಕಲ್ಪ ದೃಢವಾಗಿದೆ ಎಂದು ಹೇಳಿದರು.