Priyanka Gandhi : 'ಮೋದಾನಿ' ಬಳಿಕ 'ಪ್ಯಾಲೆಸ್ತೀನ್''​ ಬ್ಯಾಗ್​ ಹಿಡಿದು ಸಂಸತ್​ಗೆ ಬಂದ ಪ್ರಿಯಾಂಕ

ಪ್ರಿಯಾಂಕ ಅವರು ಕೆಲವು ದಿನಗಳ ಹಿಂದೆ ತಮ್ಮ ಪಕ್ಷ ಆರೋಪಿಸುವ, ಉದ್ಯಮಿ ಅದಾನಿ ಮತ್ತು ಪ್ರಧಾನಿ ಮೋದಿ ನಡುವಿನ ದೋಸ್ತಿಯನ್ನು ಲೇವಡಿ ಮಾಡುವ ''ಮೋ-ದಾನಿ' ಬ್ಯಾಗ್ ಹಿಡಿದುಕೊಂಡು ಬಂದಿದ್ದರು.

Update: 2024-12-16 14:34 GMT
ಪ್ರಿಯಾಂಕ ಗಾಂಧಿ ಬ್ಯಾಗ್​

ಸಂಸತ್​ ಅಧಿವೇಶನ ನಡೆಯುವ ಮಹಿಳಾ ಸಂಸದರ ಬ್ಯಾಗ್​ ಸ್ವಲ್ಪ ಸದ್ದು ಮಾಡುತ್ತದೆ. ಈ ಬಾರಿ ವಯನಾಡ್​ ಕ್ಷೇತ್ರದ ಮೂಲಕ ಚೊಚ್ಚಲ ಬಾರಿಗೆ ಸಂಸತ್​ ಪ್ರವೇಶಿರುವ ಗಾಂಧಿ ಕುಟುಂಬದ ಕುಡಿ ಪ್ರಿಯಾಂಕ ಅವರು ತಮ್ಮ ಬ್ಯಾಗ್​ ಮೂಲಕ ಆಡಳಿತ ಪಕ್ಷದ ವಿರುದ್ಧ ಸಮರ ಸಾರಿದ್ದಾರೆ. ಕೆಲವು ದಿನಗಳ ಹಿಂದೆ ತಮ್ಮ ಪಕ್ಷ ಆರೋಪಿಸುವ, ಉದ್ಯಮಿ ಅದಾನಿ ಮತ್ತು ಪ್ರಧಾನಿ ಮೋದಿ ನಡುವಿನ ಸಂಬಂಧವನ್ನುಲೇವಡಿ ಮಾಡುವ ''ಮೋ-ದಾನಿ' ಬ್ಯಾಗ್ ಹಿಡಿದುಕೊಂಡು ಬಂದಿದ್ದರು. ಸೋಮವಾರ ಅವರು 'ಪ್ಯಾಲೆಸ್ತೀನ್'' ಎಂದು ಬರೆದಿದ್ದ ಬ್ಯಾಗ್ ಹಾಕಿಕೊಂಡು ಬಂದು ಮತ್ತೆ ಸುದ್ದಿಗೆ ಗ್ರಾಸವಾದರು.​


ಕಳೆದ ಬಾರಿ ಸದ್ದು ಮಾಡಿರುವುದು ಐಷಾರಾಮಿ ಲೂಯಿ ವಿಟಾನ್ ಬ್ಯಾಗ್​ . ಪಶ್ಚಿಮ ಬಂಗಾಳದ ಸಂಸದೆ ಮಹುವಾ ಮೊಯಿತ್ರಾ ಅವರಿಗೆ ಸೇರಿದ್ದು. ಸಂಸತ್ತಿನಲ್ಲಿ ಬೆಲೆ ಏರಿಕೆ ಕುರಿತ ಚರ್ಚೆಯ ಸಂದರ್ಭದಲ್ಲಿ ಮೊಯಿತ್ರಾ ಅವರ ಲೂಯಿಸ್ ವಿಟಾನ್ ಬ್ಯಾಗ್ ಅಡಗಿಸಲು ಯತ್ನಿಸಿ ಟೀಕೆಗೆ ಒಳಗಾಗಿದ್ದರು. ಯಾಕೆಂದರೆ ಅವರ ವಿಟಾನ್ ಬ್ಯಾಗ್ ಬೆಲೆ 2 ಲಕ್ಷ ರೂಪಾಯಿ. ಬೆಲೆ ಏರಿಕೆ ಬಗ್ಗೆ ಪ್ರಶ್ನಿಸುವಾಗ ಅವರ ಆ ದುಬಾರಿ ಬ್ಯಾಗ್ ಅಣಕವಾಡಿತ್ತು.​

ಮೊಯಿತ್ರಾ ಅವರ ವೀಡಿಯೊ ವೈರಲ್ ಆಗಿತ್ತು. ಅನೇಕರು ಮೊಯಿತ್ರಾ ಅವರನ್ನು 'ಮೇರಿ ಆಂಟಿಯೋನೆಟ್ ಮೊಯಿತ್ರಾ' ಎಂದು ಕರೆದಿದ್ದರು. ಅವರ "ಬೂಟಾಟಿಕೆ" ಎಂದು ಗೇಲಿ ಮಾಡಿದ್ದರು. ಆ ಬಳಿಕ ಅವರು ಸಂಸತ್​​ಗೆ ದುಬಾರಿ ಹಾಕಿಕೊಂಡು ಬಂದಿರಲಿಲ್ಲ.

ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ದುಬಾರಿ ಉಡುಗೊರೆಗಳನ್ನು ತೆಗೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಾಗ, ಮೂರು ಬ್ಯಾಗ್ ಸಮೇತ ವಿಚಾರಣೆಗೆ ಹಾಜರಾಗಿದ್ದರು.

ಪ್ರಿಯಾಂಕ ಬೇರೆ ಕಾರಣಕ್ಕೆ ಸುದ್ಧಿಯಲ್ಲಿ

ಸಂಸತ್ತಿಗೆ ಪಾದಾರ್ಪಣೆ ಮಾಡಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಒಂದು ವಾರ 'ಮೊದಾನಿ' (ಅದಾನಿ-ಮೋದಿ ಭಾಯ್ ಭಾಯ್) ಚೀಲಗಳನ್ನು ಹಾಕಿಕೊಂಡು ಬರುತ್ತಿದ್ದರು. ಸೋಮವಾರ ಅವರು ಪ್ಯಾಲೆಸ್ತೀನ್​ ಲಾಂಛನ ಹಾಕಿಕೊಂಡು ಬಂದಿದ್ದರು.

ಈ ಆಕರ್ಷಕ ಬ್ಯಾಗ್ ಕಲ್ಲಂಗಡಿ ಸೇರಿದಂತೆ ಪ್ಯಾಲೆಸ್ತೀನ್​ ಒಗ್ಗಟ್ಟು ಪ್ರದರ್ಶಿಸುವ ಲಾಂಛನಗಳನ್ನು ಹೊಂದಿತ್ತು. ಇದು ಗಾಜಾ ಪಟ್ಟಿಯಲ್ಲಿ ದೀರ್ಘಕಾಲದಿಂದ ಗುರುತಿಸಲ್ಪಟ್ಟ ಪ್ರತಿರೋಧದ ಸಂಕೇತ.

ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ ಸೇರಿದಂತೆ ಭಾರತ ಯಾವಾಗಲೂ ಅಂತರರಾಷ್ಟ್ರೀಯ ವೇದಿಕೆಯಲ್ಲಿ 'ನ್ಯಾಯದ' ಪರ ನಿಂತಿದೆ ಎಂದು ತಮ್ಮ ಬ್ಯಾಗ್​ ಕುರಿತು ಸಮರ್ಥನೆ ಮಾಡಿಕೊಂಡಿದ್ದಾರೆ.

'ಬ್ಯಾಗ್' ಪ್ರತಿಭಟನೆಗೆ ಬಿಜೆಪಿ ಖಂಡನೆ

ಪ್ರತಿಭಟನೆ ದಾಖಲಿಸಲು ಮತ್ತು ರಾಜಕೀಯ ಸಂದೇಶ ರವಾನಿಸಲು ಡಿಸೈನರ್ ಬ್ಯಾಗ್​ಗಳನ್ನು ಬಳಸುವ ಪ್ರಿಯಾಂಕ ಅವರ ಪ್ರಯತ್ನಗಳನ್ನು ಬಿಜೆಪಿ ಅಪಹಾಸ್ಯ ಮಾಡಿದೆ.

"ಗಾಂಧಿ ಕುಟುಂಬವು ಯಾವಾಗಲೂ ತುಷ್ಟೀಕರಣದ ಚೀಲವನ್ನು ಹೊತ್ತಿದೆ. ಚುನಾವಣೆಯಲ್ಲಿ ಅವರ ಸೋಲಿಗೆ ತುಷ್ಟೀಕರಣದ ಚೀಲವೇ ಕಾರಣ" ಎಂದು ಬಿಜೆಪಿ ಹೇಳಿದೆ. 

Tags:    

Similar News