ದೆಹಲಿ: ಶನಿವಾರ ರಾತ್ರಿ ನವದೆಹಲಿ ರೈಲ್ವೇ ನಿಲ್ದಾಣದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತ ಪ್ರಕರಣದಲ್ಲಿ 15 ಮಂದಿ ಸಾವನ್ನಪ್ಪಿದ್ದು, 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಲೋಕ್ ನಾರಾಯಣ ಜೈ ಪ್ರಕಾಶ್ (LNJP) ಆಸ್ಪತ್ರೆಯ ಮೂಲಗಳು ತಿಳಿಸಿವೆ. ಮೃತಪಟ್ಟವರಲ್ಲಿ ಇಬ್ಬರು ಮಕ್ಕಳು ಇದ್ದಾರೆ ಎಂದು ವರದಿಯಾಗಿವೆ. ಇವರೆಲ್ಲರೂ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಐತಿಹಾಸಿಕ ಕುಂಭ ಮೇಳಕ್ಕೆ ಹೋಗಲು ನಿಲ್ದಾಣದಲ್ಲಿ ಸೇರಿದ್ದರು ಎಂದು ಪ್ರಾಥಮಿಕ ವರದಿಗಳು ಹೇಳಿವೆ. ಕಾಲ್ತುಳಿತದಲ್ಲಿ 10 ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದಂತೆ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಹಾಗೂ 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ಲಾಟ್ಫಾರ್ಮ್ 13 ಮತ್ತು 14ರಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮಹಾ ಕುಂಭ ಮೇಳಕ್ಕೆ ಹೋಗಿದ್ದ ಸಾವಿರಾರು ಭಕ್ತರು ತಮ್ಮ ಊರಿಗೆ ತೆರಳುವ ರೈಲುಗಳನ್ನು ಹತ್ತಲು ಜಮಾಯಿಸಿದ್ದರಿಂದ ದುರ್ಘಟನೆ ಸಂಭವಿಸಿದೆ. ಭೀಕರ ಘಟನೆಗೆ ಸಾಕ್ಷಿಯಾಗಿರುವ ಹಲವು ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇದರಲ್ಲಿ ಮಕ್ಕಳು ಪೋಷರಕರು ತಮ್ಮ ಸಾಮಾಗ್ರಿಗಳನ್ನು ಎಳೆದುಕೊಂಡು ಹೋಗುತ್ತಿರುವ ದೃಶ್ಯಗಳು ದಾಖಲಾಗಿವೆ. ಆರಂಭಿಕ ವರದಿಗಳ ಪ್ರಕಾರ, ಭಾರಿ ಜನಸಂದಣಿಯಿಂದ ಉಸಿರಾಟದ ತೊಂದರೆ ಉಂಟಾಗಿ ನಾಲ್ಕು ಮಹಿಳೆಯರು ಪ್ರಜ್ಞಾಹೀನರಾಗಿದ್ದರು. ನಂತರ ಉಂಟಾದ ದೊಬಿಯಿಂದ ಹಲವರು ಮೃತಪಟ್ಟಿದ್ದಾರೆ. ಏನಿದು ಘಟನೆ:ಪ್ರಯಾಗರಾಜ್ ಎಕ್ಸ್ಪ್ರೆಸ್ ರೈಲು ನಿಲ್ದಾಣದ 14ನೇ ಪ್ಲ್ಯಾಟ್ಫಾರ್ಮ್ನಲ್ಲಿ ನಿಲ್ಲಿಸಿದ ವೇಳೆ ಭಾರಿ ಪ್ರಮಾಣದ ಪ್ರಯಾಣಿಕರು ಹತ್ತಲು ಮುಂದಾದಾಗ ಘಟನೆ ಸಂಭವಿಸಿದೆ. ಸ್ವಾತಂತ್ರ್ಯ ಸೇನಾನಿ ಎಕ್ಸ್ಪ್ರೆಸ್ ಮತ್ತು ಭುವನೇಶ್ವರ ರಾಜಧಾನಿ ರೈಲುಗಳು ತಡವಾಗಿರುವುದು ಕೂಡ ಇದಕ್ಕೆ ಕಾರಣ. ಪ್ರಯಾಣಿಕರು ಪ್ಲ್ಯಾಟ್ಫಾರ್ಮ್ 12, 13, 14ರಲ್ಲಿಏಕಾಏಕಿ ಜಮಾಯಿಸಿದ್ದರು. ಅಧಿಕೃತ ಮೂಲಗಳ ಪ್ರಾ 1500 ಜನರಲ್ ಟಿಕೆಟ್ಗಳು ಮಾರಾಟವಾಗಿದ್ದವು, ಇದರಿಂದ ಜನಸಂದಣಿ ಅತಿಯಾಗಿ ಹೆಚ್ಚಾಗಿ ನಿಯಂತ್ರಣ ತಪ್ಪಿತು ಎಂದು ರೈಲ್ವೆ ಪೊಲೀಸ್ ಉಪ ಆಯುಕ್ತ (DCP) ಕೆ.ಪಿ.ಎಸ್. ಮಲ್ಹೋತ್ರಾ ಚತಿಳಿಸಿದ್ದಾರೆ.