ಸಂಶೋಧನೆ ಅನುದಾನಕ್ಕೆ ಜಿಎಸ್‌ಟಿ ವಿನಾಯಿತಿ

Update: 2024-09-10 06:26 GMT

ಜಿಎಸ್‌ಟಿ ಮಂಡಳಿಯು ಸಂಶೋಧನಾ ಅನುದಾನಕ್ಕೆ ಜಿಎಸ್‌ಟಿ ಯಿಂದ ವಿನಾಯಿತಿ ನೀಡಲು ನಿರ್ಧರಿಸಿದೆ. ಇದು ಇಡೀ ರಾಷ್ಟ್ರಕ್ಕೆ ಸಂದ ವಿಜಯ ಎಂದು ದೆಹಲಿ ಹಣಕಾಸು ಸಚಿವೆ ಅತಿಶಿ ಹೇಳಿದ್ದಾರೆ. 

ಡಿಜಿಟಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅತಿಶಿ, ಐಐಟಿ-ದೆಹಲಿ ಮತ್ತು ಪಂಜಾಬ್ ವಿಶ್ವವಿದ್ಯಾನಿಲಯ ಸೇರಿದಂತೆ ಆರು ಶಿಕ್ಷಣ ಸಂಸ್ಥೆಗಳಿಗೆ ಸಂಶೋಧನಾ ಅನುದಾನದ ಕುರಿತು ಕಳೆದ ತಿಂಗಳು ಕಾರಣ ಕೇಳಿ ನೋಟಿಸ್ ಕಳುಹಿಸಲಾಗಿದೆ ಎಂದು ಹೇಳಿದರು. 

ʻಸಂಶೋಧನೆ ಅನುದಾನದ ಮೇಲೆ ಜಿಎಸ್‌ಟಿ ಹೇರಿಕೆಯನ್ನು ಎಎಪಿ ವಿರೋಧಿಸಿದೆ. ಜಿಎಸ್‌ಟಿ ಮಂಡಳಿಯ 54ನೇ ಸಭೆಯಲ್ಲಿ ಪಂಜಾಬ್ ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ಮತ್ತು ನಾನು ಅದನ್ನು ವಿರೋಧಿಸಿದೆವು. ಜಿಎಸ್‌ಟಿ ಮಂಡಳಿ ಸಂಶೋಧನೆ ಅನುದಾನಕ್ಕೆ ಜಿಎಸ್‌ಟಿ ವಿನಾಯಿತಿ ನೀಡಲು ನಿರ್ಧರಿಸಿರುವುದು ಒಳ್ಳೆಯ ಸುದ್ದಿ. ಆಪ್‌ ಸಂಶೋಧನೆ ಅನುದಾನದ ಮೇಲೆ ಜಿಎಸ್‌ಟಿಯನ್ನುತೆರಿಗೆ ಭಯೋತ್ಪಾದನೆ ಎಂದು ಕರೆದಿದೆ,ʼ ಎಂದು ಹೇಳಿದರು.

ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ,ʻಆಮ್ ಆದ್ಮಿ ಪಕ್ಷವು ಸಂಶೋಧನಾ ಅನುದಾನದ ಮೇಲಿನ ಜಿಎಸ್‌ಟಿಯನ್ನು ವಿರೋಧಿಸಿದೆ. ಜಿಎಸ್‌ಟಿ ಮಂಡಳಿ ಸಭೆಯಲ್ಲಿ ದೆಹಲಿ ಮತ್ತು ಪಂಜಾಬ್ ಸರ್ಕಾರಗಳು ಶಿಕ್ಷಣ ಸಂಸ್ಥೆಗಳು ಪಡೆಯುವ ಸಂಶೋಧನೆ ಅನುದಾನದ ಮೇಲೆ ಜಿಎಸ್‌ಟಿ ವಿಧಿಸಬಾರದು ಎಂದು ಪ್ರಸ್ತಾಪಿಸಿದವು. ಜಿಎಸ್‌ಟಿ ವಿನಾಯಿತಿಯು ದೇಶದ ಅಭಿವೃದ್ಧಿಗೆ ನೆರವಾಗಲಿದೆ,ʼ ಎಂದು ಬರೆದಿದ್ದಾರೆ. 

Tags:    

Similar News