ಟಾಟಾ ಗ್ರೂಪ್ ಗೌರವಾಧ್ಯಕ್ಷ ರತನ್ ಟಾಟಾ ಇನ್ನಿಲ್ಲ
ಇತ್ತೀಚೆಗೆ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾಧ್ಯಮ ಹೇಳಿಕೆ ನೀಡಿರುವ ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರು ರತನ್ ಟಾಟಾ ನಿಧನವನ್ನು ಘೋಷಿಸಿದರು
ಹಿರಿಯ ಕೈಗಾರಿಕೋದ್ಯಮಿ ಮತ್ತು ಟಾಟಾ ಸನ್ಸ್ ಗೌರಾವಾಧ್ಯಕ್ಷ ರತನ್ ಟಾಟಾ (86) ಬುಧವಾರ ರಾತ್ರಿ (ಅಕ್ಟೋಬರ್ 9) ಮುಂಬೈ ಆಸ್ಪತ್ರೆಯಲ್ಲಿ ನಿಧನರಾದರು.
ಇತ್ತೀಚೆಗೆ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾಧ್ಯಮ ಹೇಳಿಕೆ ನೀಡಿರುವ ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರು ರತನ್ ಟಾಟಾ ನಿಧನವನ್ನು ಘೋಷಿಸಿದರು, ರತನ್ ಟಾಟಾ ಅವರ ಕೊಡುಗೆಗಳು ಭಾರತದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದವರು ಹೇಳಿದ್ದಾರೆ.
"ನಾವು ಶ್ರೀ ರತನ್ ನೇವಲ್ ಟಾಟಾ ಅವರಿಗೆ ವಿದಾಯ ಹೇಳುತ್ತೇವೆ, ಅವರ ಅಪಾರ ಕೊಡುಗೆಗಳು ಟಾಟಾ ಗ್ರೂಪ್ ಅನ್ನು ಮಾತ್ರವಲ್ಲದೆ ನಮ್ಮ ರಾಷ್ಟ್ರದ ಅಭಿವೃದ್ಧಿಯಲ್ಲಿ ಪಾತ್ರ ವಹಿಸಿವೆ. ಟಾಟಾ ಅವರ ಉಸ್ತುವಾರಿಯಲ್ಲಿ ಟಾಟಾ ಗ್ರೂಪ್ ತನ್ನ ಜಾಗತಿಕ ಹೆಜ್ಜೆಗುರುತನ್ನು ವಿಸ್ತರಿಸಿದೆ . ಟಾಟಾ ಗ್ರೂಪ್‌ಗೆ, ಟಾಟಾ ಅವರು ಅಧ್ಯಕ್ಷರಿಗಿಂತ ಹೆಚ್ಚು. ನನಗೆ ಅವರು ಮಾರ್ಗದರ್ಶಕ, ಮಾರ್ಗದರ್ಶಕ ಮತ್ತು ಸ್ನೇಹಿತರಾಗಿದ್ದರು. ಅವರು. ಶ್ರೇಷ್ಠತೆ, ಸಮಗ್ರತೆ ಮತ್ತು ನಾವೀನ್ಯತೆಗೆ ಅಚಲವಾದ ಬದ್ಧತೆಗೆ ಹೆಸರಾಗಿದ್ದರು. ಅವರ ಉಸ್ತುವಾರಿಯಲ್ಲಿ ಟಾಟಾ ಗ್ರೂಪ್ ಜಾಗತಿಕ ಹೆಜ್ಜೆಗುರುತನ್ನು ವಿಸ್ತರಿಸಿದೆ," ಎಂದು " ಎಂದು ಚಂದ್ರಶೇಖರನ್ ಹೇಳಿದರು.
ಟಾಟಾ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರು ಶೋಕ ವ್ಯಕ್ತಪಡಿಸಿದ್ದಾರೆ.