ಜು.27 ರಂದು ಪ್ರಧಾನಿಯಿಂದ ರಾಜೇಂದ್ರ ಚೋಳರ ನಾಣ್ಯ ಬಿಡುಗಡೆ
ಸಂಗೀತ ಸಂಯೋಜಕ ಇಳಯರಾಜ ಅವರು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಬೃಹದೀಶ್ವರ ದೇವಾಲಯದಲ್ಲಿ ಪ್ರಧಾನಿ ಮೋದಿ ಅವರ ಸಮ್ಮುಖದಲ್ಲಿ 20 ನಿಮಿಷಗಳ ವಿಶೇಷ ಸಂಗೀತ ಕಛೇರಿ ನೀಡಲಿದ್ದಾರೆ.;
ಪ್ರಧಾನಿ ಮೋದಿ ತಂಜಾವೂರಿನ ಬೃಹದೀಶ್ವರ ದೇವಸ್ಥಾನಕ್ಕೂ ಭೇಟಿ ನೀಡುವ ನಿರೀಕ್ಷೆಯಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 27 ರಂದು ತಮಿಳುನಾಡಿನ ಅರಿಯಲೂರು ಜಿಲ್ಲೆಯ ಗಂಗೈಕೊಂಡ ಚೋಳಪುರಂಗೆ ಭೇಟಿ ನೀಡಲಿದ್ದು, ಚಕ್ರವರ್ತಿ ರಾಜೇಂದ್ರ ಚೋಳ-I ಗೌರವ ಸ್ಮರಣಾರ್ಥ ನಾಣ್ಯ ಬಿಡುಗಡೆ ಮಾಡಲಿದ್ದಾರೆ.
ನಾಣ್ಯ ಸಂಗೀತ ಸಂಯೋಜಕ ಇಳಯರಾಜ ಅವರು ಇದೇ ವೇಳೆ ಯುನೆಸ್ಕೋ ವಿಶ್ವ ಪರಂಪರೆಯ ತಾಣ ಬೃಹದೀಶ್ವರ ದೇವಾಲಯದಲ್ಲಿ ಪ್ರಧಾನಿ ಮೋದಿ ಸಮ್ಮುಖದಲ್ಲಿ 20 ನಿಮಿಷಗಳ ವಿಶೇಷ ಸಂಗೀತ ಕಛೇರಿ ನಡೆಸಿಕೊಡಲಿದ್ದಾರೆ.
ಚೋಳರ ರಾಜಧಾನಿ ಗಂಗೈಕೊಂಡ ಚೋಳಪುರಂ
ಸುಮಾರು 250 ವರ್ಷಗಳಿಗೂ ಹೆಚ್ಚು ಕಾಲ ಚೋಳ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಗಂಗೈಕೊಂಡ ಚೋಳಪುರವನ್ನು ಕ್ರಿ.ಶ. 1022 ರ ಸುಮಾರಿಗೆ ರಾಜ ರಾಜ ಚೋಳನ ಪುತ್ರ ರಾಜೇಂದ್ರ ಚೋಳ I ತನ್ನ ಮಿಲಿಟರಿ ವಿಜಯಗಳ ಸ್ಮರಣಾರ್ಥ ಸ್ಥಾಪಿಸಿದರು. ಅವರ ವಿಜಯಗಳು ದಕ್ಷಿಣ ಮತ್ತು ಆಗ್ನೇಯ ಏಷ್ಯಾದಾದ್ಯಂತ ಚೋಳ ಸಾಮ್ರಾಜ್ಯದ ಪ್ರಭಾವ ವಿಸ್ತರಿಸಿದವು.
ಪೊನ್ನೇರಿ: ಪುನಶ್ಚೇತನದ ಅಗತ್ಯ
ಗಂಗೈಕೊಂಡ ಚೋಳಪುರಂನಲ್ಲಿರುವ ಐತಿಹಾಸಿಕ ಬೃಹದೀಶ್ವರ ದೇವಾಲಯದ ಸಮೀಪ ಸ್ಥಳೀಯವಾಗಿ ಪೊನ್ನೇರಿ ಎಂದು ಕರೆಯಲ್ಪಡುವ 17 ಕಿ.ಮೀ. ಉದ್ದದ ಭವ್ಯವಾದ ಕೆರೆ, ಚೋಳ ರಾಜವಂಶದ ಎಂಜಿನಿಯರಿಂಗ್ ಕೌಶಲ್ಯಕ್ಕೆ ಸಾಕ್ಷಿಯಾಗಿದೆ. ಇದನ್ನು "ಚೋಳ ಗಂಗಂ" ಎಂದೂ ಕರೆಯುತ್ತಾರೆ. ಈ ಸ್ಮಾರಕ ಜಲಾಶಯವನ್ನು ರಾಜೇಂದ್ರ ಚೋಳನು ತನ್ನ ಉತ್ತರ ದಿಕ್ಕಿನ ವಿಜಯಶಾಲಿ ಮಿಲಿಟರಿ ಕಾರ್ಯಾಚರಣೆ ನೆನಪಿಗೆ ನಿರ್ಮಿಸಿದ. ಆದರೆ, ಈಗ ಈ ಕೆರೆ ಶಿಥಿಲಗೊಂಡಿದೆ.
ನಾಣ್ಯ ಬಿಡುಗಡೆ ಮತ್ತು ಕೆರೆಯ ಪುನರುಜ್ಜೀವನ
ರಾಜೇಂದ್ರ ಚೋಳರ ಸ್ಮರಣಾರ್ಥ ನಾಣ್ಯ ಬಿಡುಗಡೆ ಮಾಡುವಂತೆ ಗಂಗೈಕೊಂಡ ಚೋಳಪುರಂ ಅಭಿವೃದ್ಧಿ ಮಂಡಳಿ ಟ್ರಸ್ಟ್ ಅಧ್ಯಕ್ಷ, ಸ್ಥಳೀಯ ಇತಿಹಾಸಕಾರ ಆರ್. ಕೊಮಗನ್ ಅವರು ವಿನಂತಿಸಿದ್ದರು. ಪ್ರಧಾನಮಂತ್ರಿಯವರ ಭೇಟಿಯು ಚೋಳ ಗಂಗಂ ಕೆರೆಯನ್ನು ಪುನಃಸ್ಥಾಪನೆ ಆಗಲಿದೆ ಎಂದು ಹೇಳಲಾಗಿದೆ.
ರಾಜೇಂದ್ರ ಚೋಳರ ಜನ್ಮ ವಾರ್ಷಿಕೋತ್ಸವವನ್ನು ಆದಿ ತಿರುಪತಿರೈ ಉತ್ಸವದೊಂದಿಗೆ ನಡೆಸುವುದರಿಂದ ಆಧ್ಯಾತ್ಮಿಕ ಮಹತ್ವ ಪಡೆದಿದೆ. ಜುಲೈ 23 ರಿಂದ 27 ರವರೆಗೆ ಬೃಹದೀಶ್ವರ ದೇವಾಲಯದಲ್ಲಿ ನಡೆಯುವ ಪ್ರದರ್ಶನದಲ್ಲಿ ರಾಜೇಂದ್ರರ ವಿಜಯಗಳು, ಯುದ್ಧ ಟ್ರೋಫಿಗಳು ಮತ್ತು ಚಿಕ್ಕ ಶೈವ ಸಂತ ಶಿಲ್ಪಗಳನ್ನು ಪ್ರದರ್ಶಿಸಲಾಗುತ್ತದೆ. ಇದು ಸಂದರ್ಶಕರಿಗೆ ಚೋಳ ಸಾಮ್ರಾಜ್ಯದ ಭವ್ಯತೆಯ ಒಂದು ನೋಟ ಒದಗಿಸಲಿದೆ.