ಸಂಗೀತ ನಿರ್ದೇಶಕ ಇಳಯರಾಜಾಗೆ ದೇಗುಲ ಪ್ರವೇಶಕ್ಕೆ ತಡೆ: ಆಗಮ ತಜ್ಞರ ವಿವರಣೆಯೇನು?
ಮುಖ್ಯ ಗರ್ಭಗುಡಿಗೆ ಸಮೀಪದಲ್ಲಿರುವ 'ಅರ್ಥಮಂಟಪಂ' ಗರ್ಭಗುಡಿಗೆ ಪ್ರವೇಶಿಸಲು ಇಳಯರಾಜಾ ಪ್ರಯತ್ನಿಸಿದಾಗ, ದೇವಾಲಯದ ಅರ್ಚಕರು ದೇವಾಲಯದ ಶಿಷ್ಚಾಚಾರದ ಹೆಸರಿನಲ್ಲಿ ಪ್ರವೇಶ ನಿರಾಕರಿಸಿದರು.
ಖ್ಯಾತ ಸಂಗೀತ ಸಂಯೋಜಕ ಇಳಯರಾಜಾ ಅವರು ಭಾನುವಾರ (ಡಿಸೆಂಬರ್ 15) ತಮ್ಮ ಸಂಯೋಜನೆಯ 'ದಿವ್ಯಾ ಪಶುರಂ' ಬಿಡುಗಡೆಗೆ ಮುಂಚಿತವಾಗಿ ತಮಿಳುನಾಡಿನ ಶ್ರೀವಿಲ್ಲಿಪುತೂರ್ ಆಂಡಾಳ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರನ್ನು ಅರ್ಧದಲ್ಲೇ ಅಲ್ಲಿನ ಅರ್ಚಕರು ತಡೆದಿರುವುದು ವಿವಾದಕ್ಕೆ ಕಾರಣವಾಗಿದೆ.
ಮುಖ್ಯ ಗರ್ಭಗುಡಿಗೆ ಸಮೀಪದಲ್ಲಿರುವ 'ಅರ್ಥಮಂಟಪಂ' ಗರ್ಭಗುಡಿಗೆ ಪ್ರವೇಶಿಸಲು ಇಳಯರಾಜಾ ಪ್ರಯತ್ನಿಸಿದಾಗ, ದೇವಾಲಯದ ಅರ್ಚಕರು ದೇವಾಲಯದ ಶಿ್ಷ್ಚಾಚಾರದ ಹೆಸರಿನಲ್ಲಿ ಪ್ರವೇಶ ನಿರಾಕರಿಸಿದರು. ಅರ್ಥಮಂಟಪದಲ್ಲಿ ಇಳಯರಾಜಾ ಅವರಿಗೆ ಪ್ರವೇಶ ನಿರಾಕರಿಸುವುದು ದೇವಾಲಯದ ಯಾವುದೇ ಸ್ಥಾಪಿತ ಶಿಷ್ಟಾಚಾರ ಉಲ್ಲಂಘಿಸುವುದಿಲ್ಲ ಎಂದು ವೈಷ್ಣವ ತಜ್ಞರು ಮತ್ತು ಆಗಮ ವಿದ್ವಾಂಸರು ಹೇಳಿದ್ದಾರೆ. ಆದಾಗ್ಯೂ ಅಲ್ಲಿನ ಅರ್ಚಕರ ನಡೆ ಅಚ್ಚರಿ ಮೂಡಿಸಿದೆ.
ದೇವಾಲಯದ ಅಧಿಕಾರಿಗಳು ಮತ್ತು ಶ್ರೀ ಶತಕೋಪ ರಾಮಾನುಜ ಜೀಯರ್ ಮತ್ತು ಶ್ರೀ ಆಂಡಾಳ್ ಜೀಯರ್ ಮಠದ ಶ್ರೀ ತ್ರಿದಂಡಿ ಶ್ರೀಮನ್ನಾರಾಯಣ ರಾಮಾನುಜ ಚಿನ್ನ ಜೀಯರ್ ಸ್ವಾಮಿಗಳೊಂದಿಗೆ ಇಳಯರಾಜಾ ಅವರು ಪ್ರಾರ್ಥನೆ ಸಲ್ಲಿಸಲು ದೇವಾಲಯಕ್ಕೆ ಪ್ರವೇಶಿಸಿದ್ದರು. ಈ ವೇಳೆ ಇಳಯರಾಜಾ ಅರ್ಥಮಂಟಪ ಪ್ರವೇಶಿಸಲು ಪ್ರಯತ್ನಿಸಿದಾಗ, ಭಕ್ತರಿಗೆ ಅಲ್ಲಿಗೆ ಪ್ರವೇಶಿಸಲು ಅವಕಾಶವಿಲ್ಲ. ವಸಂತಮಂಟಪದಿಂದ ಪ್ರಾರ್ಥನೆ ಸಲ್ಲಿಸಬೇಕು ಎಂದು ಹೇಳಲಾಯಿತು.
ಇಳಯರಾಜಾ ಅವರಿಗೆ ಅರ್ಥಮಂಟಪಕ್ಕೆ ಪ್ರವೇಶ ನಿರಾಕರಿಸಿದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಇಳಯರಾಜಾ ಅವರನ್ನು ದೇವಾಲಯದ ಅಧಿಕಾರಿಗಳು ವಸಂತಮಂಟಪಕ್ಕೆ ಕರೆದೊಯ್ಯುವ ದೃಶ್ಯಗಳನ್ನು ಟಿವಿ ಚಾನೆಲ್ಗಳು ಪ್ರಸಾರ ಮಾಡಿದ್ದವು. . ಇಳಯರಾಜಾ ಅವರ ದಲಿತ ಹಿನ್ನೆಲೆಯಿಂದಾಗಿ ಪ್ರವೇಶವನ್ನು ನಿರಾಕರಿಸಲಾಗಿದೆ ಎಂದು ಹಲವರು ಊಹಿಸಿದರೆ, ನಿರ್ಬಂಧಗಳು ಶಿಷ್ಟಾಚಾರಕ್ಕೆ ಅನುಗುಣವಾಗಿವೆ. ಎಲ್ಲಾ ಭಕ್ತರಿಗೆ ಅನ್ವಯಿಸುತ್ತವೆ ಎಂದು ದೇವಾಲಯದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಚೆನ್ನೈನಿಂದ 500 ಕಿ.ಮೀ ದೂರದಲ್ಲಿರುವ ವಿರುಧುನಗರ ಜಿಲ್ಲೆಯಲ್ಲಿರುವ ಶ್ರೀವಿಲ್ಲಿಪುತೂರ್ ಆಂಡಾಳ್ ದೇವಾಲಯವು ವಿಷ್ಣುವಿಗೆ ಸಮರ್ಪಿತವಾದ 108 ದಿವ್ಯ ದೇವಾಲಯಗಳಲ್ಲಿ ಒಂದಾಗಿದೆ. ಇದು ಪ್ರಮುಖ ಯಾತ್ರಾ ಸ್ಥಳವಾಗಿದೆ. ಸಾಹಿತ್ಯದ ಮೂಲಕ ವೈಷ್ಣವ ಧರ್ಮವನ್ನು ಹರಡಿದ 12 ಆಳ್ವಾರರಲ್ಲಿ ಒಬ್ಬರಾದ ಆಂಡಾಳ್ ಅವರ ಜನ್ಮಸ್ಥಳವೆಂದು ನಂಬಲಾಗಿದೆ. ಇಲ್ಲಿನ ದೇವರು ಪೆರುಮಾಳ್ ಸ್ತುತಿಸುವ 30 ತಮಿಳು ಭಕ್ತಿಗೀತೆಗಳ ಗುಚ್ಛ ''ತಿರುಪ್ಪವೈ'' ಅನ್ನು ಶುಭ ಮಾರ್ಗಝಿ ತಿಂಗಳಲ್ಲಿ (ಡಿಸೆಂಬರ್ 16 ರಿಂದ ಜನವರಿ 13 ರವರೆಗೆ) ಹಾಡಲಾಗುತ್ತದೆ. ಅಂತೆಯೇ, ಇಳಯರಾಜಾ ಅವರ 'ದಿವ್ಯ ಪಶುರಾಮ್'' ಆಲ್ಬಂ ಶ್ರೀಕೃಷ್ಣನ ಸೌಂದರ್ಯ, ಶೌರ್ಯ ಮತ್ತು ಆಳ್ವಾರರ ಭಕ್ತಿಯನ್ನು ವಿವರಿಸುವ ಆಯ್ದ ಹಾಡುಗಳನ್ನು ಒಳಗೊಂಡಿದೆ.
ಇಳಯರಾಜಾ ಅವರಿಗೆ ಪ್ರವೇಶ ನಿರಾಕರಿಸಿರುವುದು ವಿವಾದವನ್ನು ಹುಟ್ಟುಹಾಕಿದೆ. ಆಗಮ ತಜ್ಞ ಸತ್ಯವೇಲ್ ಮುರುಗನಾರ್ ಅವರನ್ನು, 'ದ ಫೆಡರಲ್ ಸಂಪರ್ಕಿಸಿ ಮಾತನಾಡಿಸಿದ್ದು, ಅವರು ಈ ತಡೆ ಅನಗತ್ಯ ಎಂದು ಹೇಳಿದ್ದಾರೆ.
"ಅರ್ಥಮಂಟಪ ದೇವರನ್ನು ಇರಿಸಲಾಗಿರುವ ಮುಖ್ಯ ಗರ್ಭಗುಡಿಗೆ ಹತ್ತಿರವಿರುವ ಸ್ಥಳ. ಪುರೋಹಿತರನ್ನು ಹೊರತುಪಡಿಸಿ ಬೇರೆ ಯಾರೂ ಗರ್ಭಗುಡಿ ಪ್ರವೇಶಿಸುವುದಿಲ್ಲ. ಆದರೆ ವಿಐಪಿಗಳಿಗೆ ಅರ್ಥಮಂಟಪದಿಂದ ಪ್ರಾರ್ಥಿಸಲು ಅವಕಾಶವಿದೆ. ಇದು ಹೊಸದೇನೂ ಅಲ್ಲ . ಇಳಯರಾಜಾ ಅವರಿಗೆ ಅರ್ಥಮಂಟಪಕ್ಕೆ ಪ್ರವೇಶವನ್ನು ಏಕೆ ನಿರಾಕರಿಸಲಾಯಿತು ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ದೇವಾಲಯದ ಅರ್ಥ ಮಂಟಪ ಪ್ರವೇಶಕ್ಕೆ ನಿರಾಕರಿಸಿದ ಕ್ರಮಕ್ಕೆ, ಸಾಹಿತ್ಯ ಅಥವಾ ಆಗಮಗಳಿಂದ ಯಾವುದೇ ಪುರಾವೆಗಳನ್ನು ಒದಗಿಸಲು ಸಾಧ್ಯವಿಲ್ಲ. ಶ್ರೀ ವೈಷ್ಣವ ಸಂಪ್ರದಾಯದ ಪ್ರಮುಖ ವ್ಯಕ್ತಿಯಾದ ಸಂತ ರಾಮಾನುಜರು ಶ್ರೀರಂಗಂ ದೇವಾಲಯದಂತಹ ಆಚರಣೆಗಳಲ್ಲಿ ಸುಧಾರಣೆಗಳನ್ನು ಪರಿಚಯಿಸಿದ್ದರು. . ಪೆರುಮಾಳ್ ಬಗ್ಗೆ ಆಂಡಾಳ್ ಅವರ ಭಕ್ತಿ ಮತ್ತು ಪ್ರೀತಿಗೆ ಹೆಸರುವಾಸಿಯಾದ ಶತಮಾನಗಳಷ್ಟು ಹಳೆಯದಾದ ಆಂಡಾಳ್ ದೇವಾಲಯಕ್ಕೆ ಇಳಯರಾಜಾ ಅವರಿಗೆ ಪ್ರವೇಶವನ್ನು ಏಕೆ ನಿರಾಕರಿಸಲಾಯಿತು ಎಂಬುದು ಆಶ್ಚರ್ಯಕರ" ಎಂದು ಅವರು ಹೇಳಿದ್ದಾರೆ.
ಮದ್ರಾಸ್ ವಿಶ್ವವಿದ್ಯಾಲಯದ ವೈಷ್ಣವ ವಿಭಾಗದ ಮುಖ್ಯಸ್ಥ ಕೆ.ದಯಾನಿಧಿ ಮಾತನಾಡಿ, ತಮಿಳುನಾಡಿನ ವೈಷ್ಣವ ದೇವಾಲಯಗಳಲ್ಲಿ ಅರ್ಥಮಂಟಪಕ್ಕೆ ಪ್ರವೇಶ ಮಾಡಬಹುದಾಗಿದೆ ಎಂದು ಹೇಳಿದರು.
ಅರ್ಥಮಂಟಪವು ಮುಖ್ಯ ಗರ್ಭಗುಡಿ ಪಕ್ಕದಲ್ಲಿರುವುದರಿಂದ, ಭಕ್ತರಿಗೆ ಆ ಸ್ಥಳದಿಂದ ಪ್ರಾರ್ಥಿಸಲು ಅವಕಾಶವಿದೆ. ಚೆನ್ನೈನ ಶ್ರೀ ಪಾರ್ಥಸಾರಥಿ ದೇವಸ್ಥಾನದಲ್ಲಿ, ಭಕ್ತರು ಪ್ರತಿದಿನ ಪ್ರಾರ್ಥನೆ ಸಲ್ಲಿಸಲು ಅರ್ಥಮಂಟಪಕ್ಕೆ ಪ್ರವೇಶಿಸುತ್ತಾರೆ" ಎಂದು ದಯಾನಿಧಿ ಹೇಳಿದ್ದಾರೆ.
ಇಳಯರಾಜಾ ಅವರ ನಿರ್ಬಂಧಕ್ಕೆ ಆ ದಿನದ ಭದ್ರತೆ ಅಥವಾ ವಿಶೇಷ ಶಿಷ್ಟಾಚಾರದ ನಿರ್ದಿಷ್ಟ ಕಾರಣಗಳು ಇರಬಹುದು ಎಂದು ಅವರು ಹೇಳಿದ್ದಾರೆ.
ಆಂಡಾಳ್ ದೇವಾಲಯದ ಅಧಿಕಾರಿಗಳು, ಅರ್ಥಮಂಟಪಕ್ಕೆ ಪ್ರವೇಶವನ್ನು ಇಳಯರಾಜಾ ಮಾತ್ರವಲ್ಲ, ಎಲ್ಲಾ ಭಕ್ತರಿಗೆ ನಿರ್ಬಂಧಿಸಲಾಗಿದೆ ಎಂದು ಸಮರ್ಥಿಸಿಕೊಂಡರು. ಇಳಯರಾಜಾ ಅವರನ್ನು ಸೂಕ್ತ ಗೌರವದಿಂದ ಬರಮಾಡಿಕೊಳ್ಳಲಾಗಿದೆ. ದೇವರು ಅರ್ಪಿಸಿದ ಹೂವುಗಳಿಂದ ಹಾರ ಹಾಕಲಾಗಿದೆ. ಶಿಷ್ಟಾಚಾರದಂತೆ ರೇಷ್ಮೆ ಬಟ್ಟೆಗಳಿಂದ ಸನ್ಮಾನಿಸಲಾಗಿದೆ ಎಂದು ಹೇಳಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿ
ದೇವಾಲಯಕ್ಕೆ ಭೇಟಿ ನೀಡಿದ ನಂತರ, ಇಳಯರಾಜಾ ಆದಿ ಪೂರಂ ಕೊಟ್ಟಗೈನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಅಲ್ಲಿ ಅವರು ''ದಿವ್ಯ ಪಶುರಾಮ್' ಆಲ್ಬಂನಿಂದ ಆಂಡಾಳ್ ಅವರ ಪಶುರಂಗಳನ್ನು ಹಾಡಿದರು. ನಂತರ ಭರತನಾಟ್ಯ ಪ್ರದರ್ಶನ ನಡೆಯಿತು. ಈ ತಿಂಗಳಲ್ಲಿ ದೇವಸ್ಥಾನಕ್ಕೆ ಭಾರತ ಮತ್ತು ವಿದೇಶಗಳಿಂದ ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ.
ಪ್ರಧಾನ ಅರ್ಚಕರಲ್ಲಿ ಒಬ್ಬರಾದ ಶ್ರೀ ಸಡಗೋಪ ರಾಮಾನುಜ ಜೀಯರ್ ಸ್ವಾಮಿಗಳು ಮಾಧ್ಯಮಗಳಿಗೆ ಮಾತನಾಡಿ, ಇಳಯರಾಜಾ ಅವರಿಗೆ ಅಗೌರವ ತೋರಿಲ್ಲ. "ದೇವಾಲಯದ ಆಡಳಿತವು ಅವರಿಗೆ ಸಂಪೂರ್ಣ ಗೌರವ ನೀಡಿದೆ" ಎಂದು ಅವರು ಹೇಳಿದ್ದಾರೆ.