ಜಲಗಾಂವ್‌: ಲಖಪತಿ ದೀದಿಯರಿಗೆ ಪ್ರಧಾನಿ ಅವರಿಂದ 25ರಂದು ಸನ್ಮಾನ

4.3 ಲಕ್ಷ ಸ್ವಸಹಾಯ ಗುಂಪುಗಳ ಸುಮಾರು 48 ಲಕ್ಷ ಸದಸ್ಯರಿಗೆ ಪ್ರಯೋಜನವಾಗಲಿರುವ 2,500 ಕೋಟಿ ರೂ.ಗಳ ಆವರ್ತ ನಿಧಿಯನ್ನೂ ಮೋದಿ ಅವರು ಬಿಡುಗಡೆ ಮಾಡಲಿದ್ದಾರೆ.

Update: 2024-08-24 12:30 GMT

ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ಜಲಗಾಂವ್‌ ನಲ್ಲಿ 11 ಲಕ್ಷ ಹೊಸ 'ಲಖಪತಿ ದೀದಿʼಯರನ್ನು ಭಾನುವಾರ (ಆಗಸ್ಟ್ 25) ಸನ್ಮಾನಿಸಲಿದ್ದಾರೆ. 

4.3 ಲಕ್ಷ ಸ್ವಸಹಾಯ ಗುಂಪು (ಎಸ್‌ಎಚ್‌ಜಿ)ಗಳ ಸುಮಾರು 48 ಲಕ್ಷ ಸದಸ್ಯರಿಗೆ ಅನುಕೂಲವಾಗಲಿರುವ 2,500 ಕೋಟಿ ರೂ.ಗಳ ಆವರ್ತ ನಿಧಿಯನ್ನು ಅವರು ಬಿಡುಗಡೆ ಮಾಡಲಿದ್ದಾರೆ. 5,000 ಕೋಟಿ ರೂ. ಬ್ಯಾಂಕ್ ಸಾಲ ವಿತರಿಸಲಿದ್ದು, ಇದರಿಂದ 2.35 ಲಕ್ಷ ಸ್ವಸಹಾಯ ಗುಂಪುಗಳ 25.8 ಲಕ್ಷ ಸದಸ್ಯರಿಗೆ ಪ್ರಯೋಜನ ಆಗಲಿದೆ ಎಂದು ಪ್ರಕಟಣೆ ತಿಳಿಸಿದೆ. 

ವಾರ್ಷಿಕ 1 ಲಕ್ಷ ರೂ.ಗಳಿಸುವ ಸ್ವಸಹಾಯ ಗುಂಪಿನ ಮಹಿಳಾ ಸದಸ್ಯೆಯರನ್ನು 'ಲಖಪತಿ ದೀದಿʼ ಮಾಡುವ ಯೋಜನೆ ಆರಂಭವಾದ ಬಳಿಕ ಒಂದು ಕೋಟಿ ಮಹಿಳೆಯರು ಈ ಶ್ರೇಣಿಗೆ ಸೇರಿದ್ದಾರೆ. ಸರ್ಕಾರ ಮೂರು ಕೋಟಿ ಲಖಪತಿ ದೀದಿಯರನ್ನು ಸೃಷ್ಟಿಸುವ ಗುರಿ ಹೊಂದಿದೆ. 

ರಾಜಸ್ಥಾನ ಭೇಟಿ:  ಆನಂತರ ಪ್ರಧಾನಿ ರಾಜಸ್ಥಾನಕ್ಕೆ ಭೇಟಿ ನೀಡುವರು. ಜೋಧ್‌ಪುರದ ಹೈಕೋರ್ಟ್ ಕ್ಯಾಂಪಸ್‌ನಲ್ಲಿ ನಡೆಯಲಿರುವ ರಾಜಸ್ಥಾನ ಹೈಕೋರ್ಟ್‌ನ ಪ್ಲಾಟಿನಂ ಜ್ಯೂಬಿಲಿ ಆಚರಣೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಹೈಕೋರ್ಟ್ ಮ್ಯೂಸಿಯಂ ಉದ್ಘಾಟನೆ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Tags:    

Similar News