ಟಿ20 ವಿಶ್ವಕಪ್| ವಿಜೇತ ಭಾರತ ಕ್ರಿಕೆಟ್ ತಂಡದೊಡನೆ ಉಪಾಹಾರ ಸೇವಿಸಿದ ಪ್ರಧಾನಿ

ಪ್ರಧಾನಿಯವರ 7, ಲೋಕ ಕಲ್ಯಾಣ್ ಮಾರ್ಗ್ ನಿವಾಸದಲ್ಲಿ ತಂಡ ಎರಡು ಗಂಟೆ ಕಾಲ ಕಳೆಯಿತು. ಪ್ರಧಾನಿ ಯವರೊಂದಿಗೆ ಸಂವಾದ ನಡೆಸಿತು.

Update: 2024-07-04 08:46 GMT

ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯ ತಮ್ಮ ನಿವಾಸದಲ್ಲಿ ಟಿ20 ವಿಶ್ವಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ಉಪಹಾರ ಸೇವಿಸಿದರು.

ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಜೂನ್ 29ರ ಶನಿವಾರ ನಡೆದ ಪಂದ್ಯದಲ್ಲಿ 2024 ರ ಟಿ20 ವಿಶ್ವಕಪ್ ಅನ್ನು ಗೆದ್ದುಕೊಂಡಿತು. ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆದ ಪಂದ್ಯದ ಕೊನೆಯ ಓವರ್‌ನಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು ಏಳು ರನ್‌ಗಳಿಂದ ಸೋಲಿಸಿತು. 

ಬೆರಿಲ್ ಚಂಡಮಾರುತದಿಂದ ಐದು ದಿನ ಬಾರ್ಬಡೋಸ್‌ನಲ್ಲಿ ಉಳಿದುಕೊಂಡಿದ್ದ ಭಾರತ ತಂಡ, ಗುರುವಾರ ಬೆಳಗ್ಗೆ ನವದೆಹಲಿಗೆ ಆಗಮಿಸಿತು. ವಿಮಾನ ನಿಲ್ದಾಣದಲ್ಲಿ ನೂರಾರು ಅಭಿಮಾನಿಗಳು ತಂಡವನ್ನು ಸ್ವಾಗತಿಸಿದರು. 

ಪ್ರಧಾನಿ ಅವರೊಂದಿಗಿನ ಭೇಟಿ ಸಂದರ್ಭದಲ್ಲಿ ಆಟಗಾರರು ಮೋದಿ ಅವರೊಂದಿಗೆ ಸಂವಾದ ನಡೆಸಿದರು. ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಟ್ರೋಫಿಯನ್ನು ಮೋದಿ ಅವರಿಗೆ ಹಸ್ತಾಂತರಿಸಿದರು. ತಂಡವು ಪ್ರಧಾನಿ ಅವರೊಂದಿಗೆ ಛಾಯಾಚಿತ್ರಗಳಿಗೆ ಪೋಸ್ ನೀಡಿತು. ತಂಡ ಹೋಟೆಲಿಗೆ ಹಿಂತಿರುಗುವ ಮೊದಲು ಪ್ರಧಾನಿಯವರ 7, ಲೋಕ ಕಲ್ಯಾಣ್ ಮಾರ್ಗ್ ನಿವಾಸದಲ್ಲಿ ಎರಡು ಗಂಟೆಗಳ ಕಾಲ ಕಳೆಯಿತು. 

ತಂಡ ತನ್ನ ಎರಡನೇ ಟಿ20 ವಿಶ್ವ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಐಸಿಸಿ ಟ್ರೋಫಿಗಾಗಿ 11 ವರ್ಷಗಳ ಕಾಯುವಿಕೆಯನ್ನು ಶನಿವಾರ ಕೊನೆಗೊಳಿಸಿತು. 

ಆಟಗಾರರು ಮಧ್ಯಾಹ್ನ 2 ಗಂಟೆಗೆ ಮುಂಬೈಗೆ ತೆರಳಲಿದ್ದಾರೆ. ಸಂಜೆ 5 ಗಂಟೆಗೆ ತೆರೆದ ಬಸ್ ನಲ್ಲಿ ವಿಜಯೋತ್ಸವದ ಮೆರವಣಿಗೆ, ಆನಂತರ ವಾಂಖೇಡೆ ಕ್ರೀಡಾಂಗಣದಲ್ಲಿ ಅಭಿನಂದನೆ ಸಮಾರಂಭ ನಡೆಯಲಿದೆ.

ಮುಂಬೈ ವಾಸಿ ಮತ್ತು ನಗರದಲ್ಲಿ ಅಪಾರ ಅಭಿಮಾನಿಗಳಿರುವ ರೋಹಿತ್‌ಗೆ ಇದು ವಿಶೇಷ ಕ್ಷಣವಾಗಿದೆ.

17 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕದಲ್ಲಿ ನಡೆದ 2007 ರ ವಿಶ್ವ ಟಿ 20 ನ ಫೈನಲ್‌ನಲ್ಲಿ ಧೋನಿ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿದಾಗ, ಮುಂಬೈನಲ್ಲಿ ಇದೇ ರೀತಿಯ ರೋಡ್ ಶೋ ನಡೆದಿತ್ತು.

Tags:    

Similar News