ಪಯಣ ವಸ್ತುಸಂಗ್ರಹಾಲಯ: ಎತ್ತಿನ ಗಾಡಿಯಿಂದ ಕಾರುಗಳವರೆಗೆ ʻಪ್ರಯಾಣʼ

ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಸಂಗ್ರಹಿಸಿರುವ ವಾಹನಗಳ ಸಂಗ್ರಹದಲ್ಲಿ ಎತ್ತಿನ ಗಾಡಿ, 2ನೇ ಮಹಾಯುದ್ಧದಲ್ಲಿ ಬಳಸಿ ಜೀಪ್‌ಗಳು, ಮಹಾತ್ಮಾ ಗಾಂಧಿ ಅವರು ಬಳಸಿದ ಸ್ಟುಡ್‌ಬೇಕರ್ ಪ್ರೆಸಿಡೆಂಟ್‌ ಮತ್ತು ಸಾಹಸಸಿಂಹ ವಿಷ್ಣುವರ್ಧನ್ ಅವರ ಡ್ಯಾಟ್ಸನ್ ಕಾರನ್ನು ಒಳಗೊಂಡಿದೆ.

Update: 2024-06-29 12:06 GMT

ಶ್ರೀರಂಗಪಟ್ಟಣ-ಮೈಸೂರು ರಸ್ತೆಯಲ್ಲಿ ಮೈಸೂರಿಗೆ ಕೇವಲ 12 ಕಿಮೀ ಮೊದಲು ಟೈರ್‌ನ ವಿನೂತನ ಮುಂಭಾಗವೊಂದು ಗೋಚರಿಸಿತು. ಇದು 23 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ʻಪಯಣʼ ಕಾರ್ ಮ್ಯೂಸಿಯಂನ ಸ್ವಾಗತ ದ್ವಾರ. 'ಪಯಣ ' ಅಂದರೆ 'ಪ್ರಯಾಣ' ಎಂದರ್ಥ. ಈ ವಸ್ತುಸಂಗ್ರಹಾಲಯವು ವಾಹನಗಳ ಶ್ರೀಮಂತ ಇತಿಹಾಸಕ್ಕೆ ಸಾಕ್ಷಿಯಾಗಿದೆ: 'ಸಂರಕ್ಷಣೆಯ ಕಲೆ, ಭೂತಕಾಲದ ಸೌಂದರ್ಯದ ಭಾವಗೀತೆ ಮತ್ತು ನಾವೀನ್ಯತೆಯ ಭವಿಷ್ಯಕ್ಕೆ ಸೇತುವೆ ಯಾಗಿದೆ.ʼ 

ಕಾರ್ ಮ್ಯೂಸಿಯಂನಲ್ಲಿ ಪ್ರದರ್ಶಿಸಿದ ಐಕಾನಿಕ್ ಹಳೆಯ ಕಾರುಗಳನ್ನು ವೀಕ್ಷಿಸಲು ಮುಂದಾದೆ. ವಿಶಾಲವಾದ ಗ್ಯಾಲರಿಗಳಲ್ಲಿ ಅಡ್ಡಾಡಿ ದಾಗ, ಆಟೋಮೊಬೈಲ್ ಗಳ ಇತಿಹಾಸ ನನ್ನ ಮುಂದೆ ತೆರೆದುಕೊಂಡಿತು. ಇಂಥ ಇತಿಹಾಸದ ಪರಿಚಯವಿಲ್ಲದ ನನ್ನಂತಹ ಅನನುಭವಿಗಳಿಗೆ ಚಕ್ರದ ವಿಕಸನ, ಆಟೋಮೊಬೈಲ್ ಉದ್ಯಮದ ವಿವರ ಮತ್ತು ಪ್ರದರ್ಶನದಲ್ಲಿರುವ ಪ್ರತಿಯೊಂದು ವಾಹನಗಳ ವಿವರಣೆಗಳು ಜ್ಞಾನೋದಯದ ಅನುಭವ ನೀಡಿತು.

ಏಪ್ರಿಲ್‌ನಲ್ಲಿ ಸಾರ್ವಜನಿಕರಿಗೆ ಮುಕ್ತಗೊಂಡಿರುವ ಈ ವಸ್ತುಸಂಗ್ರಹಾಲಯದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಮತ್ತು ರಾಜ್ಯಸಭೆ ಸದಸ್ಯ ಡಿ.ವೀರೇಂದ್ರ ಹೆಗ್ಗಡೆ ಅವರು ಕಳೆದ ಐದು ದಶಕಗಳಿಂದ ಸಂಗ್ರಹಿಸಿರುವ ವಿಂಟೇಜ್ ವಾಹನಗಳು ಇವೆ. ಇದು ಧರ್ಮಸ್ಥಳದಲ್ಲಿರುವ ಪ್ರಖ್ಯಾತ 'ಮಂಜೂಷಾ ಕಾರ್ ಮ್ಯೂಸಿಯಂ'ನ ವಿಸ್ತರಣೆಯಾಗಿದೆ. ಹೆಗ್ಗಡೆ ಅವರು ಚಿಕ್ಕ ವಯಸ್ಸಿನಿಂದಲೂ ಕಾರಿನ ಇಂಜಿನ್‌ನ ಮೂಲಭೂತ ಅಂಶ ಗಳು ಮತ್ತು ಕಾಲಕ್ರಮೇಣ ನಡೆದ ತಾಂತ್ರಿಕ ಬೆಳವಣಿಗೆಗಳಿಂದ ಆಕರ್ಷಿತರಾಗಿದ್ದರು. ಕಾರುಗಳ ಮೇಲಿನ ಅವರ ಪ್ರೀತಿ ಮತ್ತು ಕಾಳಜಿ ಮತ್ತು ವಿಂಟೇಜ್ ಸುಂದರಿಯರನ್ನು ಸಂರಕ್ಷಿಸುವ ಮತ್ತು ಮುಂದಿನ ಪೀಳಿಗೆಗೆ ಉಳಿಸುವ ಕಾಳಜಿಗಳು ಅವುಗಳನ್ನು ಸಂಗ್ರಹಿಸಲು ಪ್ರೇರೇಪಿಸಿತು.

ಗಾಂಧೀಜಿ ಬಳಸುತ್ತಿದ್ದ ಸ್ಟುಡ್‌ಬೇಕರ್ ಪ್ರೆಸಿಡೆಂಟ್: ನೀವು ಆಟೋಮೊಬೈಲ್‌ಗಳ ಬಗ್ಗೆ‌ ಮತ್ತು ಅವುಗಳ ಇತಿಹಾಸದ ಬಗ್ಗೆ ಒಲವು ಹೊಂದಿದ್ದರೆ, ಈ ಕಾರ್ ಮ್ಯೂಸಿಯಂ ನಿಜವಾದ ಸ್ವರ್ಗ. ನಾನು ಆಟೋಮೊಬೈಲ್ ಬಗ್ಗೆ ಅತ್ಯಾಸಕ್ತಿ ಇರುವವಳಲ್ಲ. ಆದರೆ, ಆಟೋಮೊ ಬೈಲ್ ಉದ್ಯಮದ ತಾಂತ್ರಿಕ ರೂಪಾಂತರವನ್ನು ತೋರಿಸುವ 60ಕ್ಕೂ ಅಧಿಕ ಕಾರುಗಳನ್ನು ವೀಕ್ಷಿಸುವುದರಲ್ಲಿ ಮುಳುಗಿದೆ. ಮ್ಯೂಸಿಯಂ ನಲ್ಲಿರುವ ಪ್ರತಿಯೊಂದು ವಾಹನವೂ ಆಟೋಮೊಬೈಲ್ ಗಳ ಇತಿಹಾಸದ ಶ್ರೀಮಂತ ನೋಟವನ್ನು ನೀಡುತ್ತದೆ.

ಗ್ಯಾಲರಿಯ ಪ್ರವೇಶದ್ವಾರದಲ್ಲಿ ಡಿ.ವೀರೇಂದ್ರ ಹೆಗ್ಗಡೆಯವರು ತಮ್ಮ ಯೌವನದಲ್ಲಿ ಬಳಸುತ್ತಿದ್ದ ಸ್ಟ್ಯಾಂಡರ್ಡ್ ಹೆರಾಲ್ಡ್ ಮತ್ತು ಆ ಕಾರಿನ ಜೊತೆಗೆ ಅವರ ಪೋಸ್ಟರ್ ವೀಕ್ಷಕರನ್ನು ಸ್ವಾಗತಿಸುತ್ತದೆ. 1959 ರಲ್ಲಿ ಲಂಡನ್‌ನ ರಾಯಲ್ ಆಲ್ಬರ್ಟ್ ಹಾಲ್‌ನಲ್ಲಿ ಅನಾವರಣಗೊಂಡ ಸ್ಟ್ಯಾಂಡರ್ಡ್ ಹೆರಾಲ್ಡ್ ಬೆಲೆ 1962 ರಲ್ಲಿ 12,500 ರೂ. ಇದರ ಬಳಿಕ ಚಕ್ರಗಳ ವಿಕಸನ, ಆಂತರಿಕ ದಹನ ಎಂಜಿನ್ ಮತ್ತು ಅದರ ಸಂಬಂಧಿಸಿದ ಭಾಗಗಳ ಪ್ರದರ್ಶನವಿದೆ. ಆನಂತರ ಕಾರುಗಳ ಪ್ರದರ್ಶನ ಆರಂಭವಾಗುತ್ತದೆ.

ಎತ್ತಿನ ಗಾಡಿಗಳಿಂದ ಹಿಡಿದು 2ನೇ ಮಹಾ ಯುದ್ದದಲ್ಲಿ ಬಳಸಿದ ಜೀಪ್‌ಗಳು, ಎಲ್ಲಾ ಉದ್ದೇಶಕ್ಕೂ ಬಳಸಬಹುದಾದ ವಾಹನಗಳು ಮತ್ತು ನವಿರಾದ ಕಾರುಗಳಿಂದ ಹಿಡಿದು ಗಟ್ಟಿಮುಟ್ಟಾದ ಟ್ರಕ್‌ಗಳು ಇದ್ದು, ಪ್ರತಿಯೊಂದು ತನ್ನದೇ ನಾವೀನ್ಯತೆಯ ಮತ್ತು ಕರಕೌಶಲದ ಕಥೆ ಯನ್ನು ಹೇಳುತ್ತವೆ. ಈ ವಸ್ತುಸಂಗ್ರಹಾಲಯ ಏಕೆ ಗಮನಾರ್ಹವಾದುದು ಎಂದರೆ ಹಲವು ವಿಂಟೇಜ್ ಕಾರು ಉತ್ಸಾಹಿಗಳು ತಮ್ಮ ಅಮೂ ಲ್ಯವಾದ ಆಸ್ತಿಯನ್ನು ಸಾರ್ವಜನಿಕರೊಂದಿಗೆ ಹಂಚಿಕೊಂಡಿದ್ದಾರೆ. ಮೈಸೂರು ಮಹಾರಾಜ 4ನೇ ಜಯಚಾಮರಾಜೇಂದ್ರ ಒಡೆಯರ್ ಅವರು ತಮ್ಮ 1949 ರ ಡೈಮ್ಲರ್ ಡಿಇ 36 ಕಾರನ್ನು ಕೊಡುಗೆಯಾಗಿ ನೀಡಿದ್ದಾರೆ. ರೋಲ್ಸ್ ರಾಯ್ಸ್ ಫ್ಯಾಂಟಮ್ ಹೊರತುಪಡಿಸಿ ದರೆ, ಇದು ಅತಿ ದೊಡ್ಡ ಮತ್ತು ಅತ್ಯಂತ ದುಬಾರಿ ಕಾರು ಆಗಿತ್ತು.

ಸೆಲೆಬ್ರಿಟಿಗಳ ಒಡೆತನದ, ಬಳಸಿದ ಮತ್ತು ಕಾಣಿಕೆಯಾಗಿ ನೀಡಿದ ವಾಹನಗಳ ಮೇಲೆ ಕಣ್ಣಾಡಿಸಿದೆ. 1929 ರ ಮಾದರಿ ಸ್ಟುಡ್‌ಬೇಕರ್ ಪ್ರೆಸಿಡೆಂಟ್‌ ಕಾರನ್ನು ಗಾಂಧೀಜಿ ಅವರು ಕರ್ನಾಟಕ ಮತ್ತು ತಮಿಳುನಾಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಳಸಿದ್ದರು. ನನ್ನ ಗಮನ ಸೆಳೆದ ಮತ್ತೊಂದು ಕಾರು- 1947 ರ ಸ್ಟುಡ್‌ಬೇಕರ್ ಚಾಂಪಿಯನ್. ಇದನ್ನು ಹೆಸರಾಂತ ಭೌತಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಸರ್ ಚಂದ್ರಶೇಖರ ವೆಂಕಟರಾಮನ್ (ಸಿ.ವಿ. ರಾಮನ್ ) ಬಳಸುತ್ತಿದ್ದರು.

ಕಾರುಗಳೊಡನೆ ಸಿನಿ ತಾರೆಯರ ನಂಟು ನನ್ನನ್ನು ಆಕರ್ಷಿಸಿತು. ಡ್ಯಾಟ್ಸನ್‌ ಬ್ಲೂ ಬರ್ಡ್‌ 1.8 ಜಿಎಲ್‌, ಆರನೇ ತಲೆಮಾರಿನ ಬ್ಲೂಬರ್ಡ್‌ನಂತೆ ತಯಾರಿಸಿದ ನಿಸ್ಸಾನ್‌ ಕಂಪನಿಯ ಡ್ಯಾಟ್ಸನ್‌ ಶ್ರೇಣಿಯ ಮಧ್ಯಮ ಗಾತ್ರದ ಸೆಡಾನ್. ಇದು ಕನ್ನಡ ಚಿತ್ರರಂಗದ 'ಆಂಗ್ರಿ ಯಂಗ್ ಮ್ಯಾನ್' ದಿವಂಗತ ವಿಷ್ಣುವರ್ಧನ್ ಅವರದ್ದು.

ಐತಿಹಾಸಿಕ ಕಾರು, ಟ್ರ್ಯಾಕ್ಟರ್‌ ಮತ್ತು ದ್ವಿಚಕ್ರ ವಾಹನ: ಮತ್ತೊಂದು ಗಮನ ಸೆಳೆಯುವ ಕಾರು, 1965 ರ ಷೆವ್ರೊಲೆಟ್ ಇಂಪಾಲಾ. ಇದು ಅಮೆರಿಕದ ಕ್ಲಾಸಿಕ್ ಮತ್ತು ಚಲನಚಿತ್ರಗಳಲ್ಲಿ ಹೆಚ್ಚು ಬಳಕೆಯಾದ ಜನಪ್ರಿಯ ಕಾರು. ಲಾಂಛನವಾಗಿ ಬಳಸಿರುವ ಆಫ್ರಿಕದ ಜಿಂಕೆಯಿಂದ ಕಾರಿಗೆ ಇಂಪಾಲಾ ಎಂದು ಹೆಸರಿಸಲಾಯಿತು. 1965 ರಲ್ಲಿ ಅಮೆರಿಕದಲ್ಲಿ ಒಂದು ದಶ ಲಕ್ಷ ಇಂಪಾಲಾ ಕಾರುಗಳು ಮಾರಾಟವಾಗಿ ದಾಖಲೆ ನಿರ್ಮಿಸಿತ್ತು. ಗಂಟೆಗೆ 96 ಮೈಲು ಅಥವಾ 154 ಕಿಮೀ ಗರಿಷ್ಠ ವೇಗ ಗಳಿಸುತ್ತಿದ್ದ ಈ ಕಾರಿನ ಬೆಲೆ 1965 ರಲ್ಲಿ 2,700 ಡಾಲರ್. ಚಲನಚಿತ್ರ ಗಳಲ್ಲಿ ಅತಿ ಹೆಚ್ಚು ಬಳಕೆಯಾದ ಚೆವಿ ಮಾದರಿಗಳ ಬಾನೆಟ್‌ ಮೇಲೆ ಹಲವು ತಾರೆಯರು ರೊಮಾನ್ಸ್ ಮಾಡಿದ್ದಾರೆ. ಹಿಂದಿಯ ಯಶಸ್ವಿ ಚಿತ್ರ, ಜ್ಯುವೆಲ್ ಥೀಫ್ (1967) ನಲ್ಲಿ ದೇವ್ ಆನಂದ್ 'ಯೇ ದಿಲ್ ನ ಹೋತಾ ಬೇಚಾರಾ ' ಹಾಡನ್ನು ಯಾರೂ ಮರೆಯುವುದಿಲ್ಲ.

ವಸ್ತುಸಂಗ್ರಹಾಲಯದಲ್ಲಿ ಹಲವು ಐತಿಹಾಸಿಕ ಕಾರುಗಳು, ಟ್ರ್ಯಾಕ್ಟರ್‌ಗಳು ಮತ್ತು ದ್ವಿಚಕ್ರ ವಾಹನಗಳನ್ನು ನೋಡಿದೆ. ಬಿಎಂಡಬ್ಲ್ಯು, ಬೆನ್ಞ್‌, ಬ್ಯೂಕ್‌, ಒಪೆಲ್‌, ಡ್ಯಾಟ್ಸನ್‌, ಮಾಝ್ಡಾ, ಫೋರ್ಡ್‌, ಸಿಟ್ರಿಯಾನ್‌, ಡೈಮ್ಲರ್‌, ವಿಲ್ಲೈಸ್‌ ಜೀಪ್, ಟ್ರಕ್‌ ಗಳು, ಹಿಲ್‌ ಮನ್‌, ಸ್ಟುಡ್‌ ಬೇಕರ್‌ ನೋಡಿ ಆಶ್ಚರ್ಯಗೊಂಡೆ. ಇಟಲಿಯ ಫಿಯಟ್‌ 1925, ಜರ್ಮನಿಯ 1926ರ ಮರ್ಸಿಡಿಸ್ ಬೆಂಜ್, ಇಂಗ್ಲೆಂಡ್‌ನ ಮೋರಿಸ್ 15/6 ಮತ್ತು ಅಮೆರಿಕದ 1967 ರ ಷೆವರ್ಲೆ ಇಂಪಾಲಾ, ಇಂಗ್ಲೆಂಡಿನ ಆಸ್ಟಿನ್ ಎ 40 ಫರೀನಾ ಮತ್ತು ಇಂಗ್ಲೆಂಡ್‌ನ ಮಾರಿಸ್‌ನಂತಹ ವೈವಿಧ್ಯಮಯ ಕಾರು ಗಳನ್ನು ನೋಡಿದೆ.

1990 ಟೊಯೊಟಾ ಕೊರೊಲ್ಲಾ 1.6 ಜಿಎಲ್‌ ಮತ್ತು ಜಪಾನ್‌ನ 1967 ಮಾಜ್ಡಾ ಲೂಸ್ 1500 ಎಸ್‌ಎಸ್‌ ಕೂಡ ಇಲ್ಲಿದೆ. ಉಕ್ರೇನಿನ 2000 ಡೇವೂ ಮಟಿಜ್ ಮತ್ತು ಕೆಆರ್‌ ಝಡ್-260 ಮಿಲಿಟರಿ ಟ್ರಕ್‌‌ ಇಲ್ಲಿದೆ.

ಆಂತರಿಕ ಮೌಲ್ಯವಿರುವ ಸಾಂಸ್ಕೃತಿಕ ಕಲಾಕೃತಿಗಳು: ಸ್ಟ್ಯಾಂಡರ್ಡ್ 2000, ಕಂಟೆಸ್ಸಾ, ಹಿಂದೂಸ್ತಾನ್ ಲ್ಯಾಂಡ್‌ಮಾಸ್ಟರ್, ಅಂಬಾಸಡರ್, ಮಾರುತಿ ಝೆನ್, ಫಿಯೆಟ್ ಪಾಲಿಯೋ, ಎಲೆಕ್ಟ್ರಿಕ್ ರೇವಾ, ಮಟಿಜ್, ಡಾಲ್ಫಿನ್‌ ಮತ್ತಿತರ ಭಾರತೀಯ ಕಾರುಗಳನ್ನು ಗಮನಿಸುವುದು ಆಸಕ್ತಿದಾಯಕವಾಗಿತ್ತು.ಇವು ದೇಶದ ರಸ್ತೆಗಳಲ್ಲಿ ಆಟೋಮೊಬೈಲ್‌ನ ಪ್ರಗತಿಯನ್ನು ದಾಖಲಿಸುತ್ತವೆ. ಡೆನ್ಮಾರ್ಕ್‌ನ ರಾಣಿ ಅಲೆಕ್ಸಾಂಡ್ರಾ ಅವರು ಫಿಯಟ್‌ 501ರ ಮಾಲೀಕರಲ್ಲಿ ಒಬ್ಬರು. ಎರ್ಲ್ಸ್ ಕೋರ್ಟ್‌ನಲ್ಲಿ ನಡೆದ ಯುದ್ಧಾನಂತರದ ಮೊದಲ ಬ್ರಿಟಿಷ್ ಮೋಟಾರು ಪ್ರದರ್ಶನದಲ್ಲಿ ಪದಾರ್ಪಣೆ ಮಾಡಿದ ಫ್ಯಾಮಿಲಿ ಸೆಡಾನ್ ಹಿಂದೂಸ್ತಾನ್ 14, ಇಲ್ಲಿ ಪ್ರದರ್ಶನಗೊಂಡಿದೆ. ಹುಂಡೈ ವೆರ್ನಾ ಮತ್ತು ಗಟ್ಟಿಮುಟ್ಟಾದ ಹಳೆಯ ಹ್ಯುಂಡೈ ಸೊನಾಟಾವನ್ನೂ ನೋಡಿದೆ.

ಮುಂಬೈನ ಐಕಾನಿಕ್ ಡಬಲ್ ಡೆಕ್ಕರ್ ಬಸ್ ಮತ್ತು ಬಳಕೆಯಲ್ಲಿಲ್ಲದ 'ಕಾಲಿ ಪೀಲಿ' ಟ್ಯಾಕ್ಸಿಗಳಂತಹ ಪಾರಂಪರಿಕ ವಾಹನಗಳನ್ನು ನೋಡದೆ ಇರುವುದು ಸಾಧ್ಯವಿಲ್ಲ. ಮತ್ತೊಂದು ಆಕರ್ಷಣೆ- ಉಗಿ ಚಾಲಿತ ರಸ್ತೆ ರೋಲರ್. ಈ ಅಮೋಘ ಸಂಗ್ರಹಕ್ಕೆ ಇನ್ನು ಕೆಲವು ಕಾರುಗಳು ಸೇರ್ಪಡೆ ಯಾಗಲಿವೆ. ವಾಪಸಾಗುವಾಗ ನಾನು ಈ ಎಲ್ಲಾ ಉತ್ತಮ ಆವಿಷ್ಕಾರಗಳ ಬಗ್ಗೆ ಯೋಚಿಸಿದೆ. ಇವು ಇತಿಹಾಸವನ್ನು ಸೃಷ್ಟಿಸಿದವು ಮತ್ತು ಆಟೋಮೊಬೈಲ್‌ಗಳ ಅಭಿವೃದ್ಧಿಯಲ್ಲಿ ಅಳಿಸಲಾಗದ ಗುರುತು ಮೂಡಿಸಿದವು.

ಆನಂತರ ಅದೇ ಕಟ್ಟಡದಲ್ಲಿರುವ ಮಂಜೂಷಾ ಮ್ಯೂಸಿಯಂಗೆ ಹೆಜ್ಜೆ ಹಾಕಿದೆ. ಹೆಗ್ಗಡೆಯವರ ಸಂಗ್ರಹವು ಸ್ವಾಭಾವಿಕ ಮೌಲ್ಯದ ಸಾಂಸ್ಕೃ ತಿಕ ಕಲಾಕೃತಿಗಳನ್ನು ಸಂರಕ್ಷಿಸುವ ಅವರ ಉತ್ಸಾಹವನ್ನು ಪ್ರತಿಬಿಂಬಿಸುತ್ತದೆ. ಪಿನ್‌ಹೋಲ್ ಕ್ಯಾಮೆರಾಗಳಿಂದ ಡಿಜಿಟಲ್ ಕ್ಯಾಮೆರಾಗಳ ವರೆಗೆ ನೀವು ಎಲ್ಲವನ್ನೂ ಕಾಣಬಹುದು. ಪೆನ್ನುಗಳು, ನಾಣ್ಯಗಳು, ನೋಟುಗಳು, ಅಂಚೆಚೀಟಿಗಳು, ಟೈಪ್‌ರೈಟರ್‌ಗಳು, ಬಂದೂಕುಗಳು, ಕತ್ತಿಗಳು, ಲ್ಯಾಂಟರ್ನ್‌ಗಳು, ದೀಪಗಳು, ಹಳೆಯ ಅಡುಗೆ ಪಾತ್ರೆಗಳು, ಪೂಜಾ ಪಾತ್ರೆಗಳು ಮತ್ತು ಮುದ್ರಣ ಯಂತ್ರಗಳ ಸಂಗ್ರಹ ಇಲ್ಲಿದೆ. ಸಂಗೀತ ವಾದ್ಯಗಳಲ್ಲಿ ಪುರಾತನ ರೇಡಿಯೋ, ಗ್ರಾಮಾಫೋನ್ ಹಾಗೂ ಮೈಸೂರು ವರ್ಣಚಿತ್ರಗಳು ಇತ್ಯಾದಿ ಇವೆ.

ವಸ್ತುಸಂಗ್ರಹಾಲಯದಲ್ಲಿರುವ ಬಯಲು ರಂಗಮಂದಿರ, ಫುಡ್ ಕೋರ್ಟ್ ಮತ್ತು ಆಟದ ಪ್ರದೇಶವು ಸಂದರ್ಶಕರ ಅನುಭವವನ್ನು ಹೆಚ್ಚಿ ಸುತ್ತವೆ. ಬಯಲು ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆಯಿದ್ದು, ವಸ್ತುಸಂಗ್ರಹಾಲಯವು ಶೀಘ್ರದಲ್ಲೇ ಸಮುದಾಯದ ಪಾಲ್ಗೊಳ್ಳುವಿಕೆ ಮತ್ತು ಸಂಭ್ರಮಾಚರಣೆಯ ಕೇಂದ್ರವಾಗಲಿದೆ.

Tags:    

Similar News