Parliament Session : ಸಂಸತ್ ಅಧಿವೇಶನದ 2ನೇ ಭಾಗ ಆರಂಭ; ವಕ್ಫ್, ಎನ್ಇಪಿ, ಕ್ಷೇತ್ರ ಮರುವಿಂಗಡಣೆ ಗಲಾಟೆ ಸಾಧ್ಯತೆ
Parliament Session: ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ, ವಿಶೇಷವಾಗಿ ತ್ರಿಭಾಷಾ ನೀತಿ, ತಮಿಳುನಾಡಿನಲ್ಲಿ ವಿವಾದವಾಗಿ ಮಾರ್ಪಟ್ಟಿದೆ. ಈ ನೀತಿಯನ್ನು ತಮಿಳುನಾಡು ಸರ್ಕಾರ ಸ್ವೀಕರಿಸಲು ನಿರಾಕರಿಸಿದೆ.;
ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ಭಾಗ ಇಂದು (ಮಾರ್ಚ್ 10) ಪ್ರಾರಂಭವಾಗಿದೆ. ಈ ಅಧಿವೇಶನದಲ್ಲಿ ಸರ್ಕಾರ ಹಣಕಾಸು ಮಸೂದೆಗಳನ್ನು (Finance Bills) ಅಂಗೀಕರಿಸುವ ನಿರೀಕ್ಷೆಯಿದೆ. ಆದರೆ, ವಿರೋಧ ಪಕ್ಷಗಳು ವಕ್ಫ್ ಮಸೂದೆ, ರಾಷ್ಟ್ರೀಯ ಶಿಕ್ಷಣ ನೀತಿ (NEP), ಕ್ಷೇತ್ರ ಮರುವಿಗಂಡಣೆ Delimitation), ಮತ್ತು ಅಮೆರಿಕದ ಸುಂಕಗಳು (US Tariffs) ಸೇರಿದಂತೆ ಹಲವಾರು ವಿವಾದಾತ್ಮಕ ವಿಷಯಗಳ ಮೇಲೆ ಸರ್ಕಾರವನ್ನು ಎದುರಿಸಲು ಸಜ್ಜಾಗಿದೆ. ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಮಣಿಪುರದ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. ಇದೇ ವೇಳೆ ಮಣಿಪುರ ರಾಷ್ಟ್ರಪತಿ ಆಳ್ವಿಕೆ ಹೇರಿರುವ ವಿಚಾರವೂ ಗಲಾಟೆಗೆ ಕಾರಣವಾಗಲಿದೆ.
ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ, ವಿಶೇಷವಾಗಿ ತ್ರಿಭಾಷಾ ನೀತಿ, ತಮಿಳುನಾಡಿನಲ್ಲಿ ವಿವಾದವಾಗಿ ಮಾರ್ಪಟ್ಟಿದೆ. ಈ ನೀತಿಯನ್ನು ತಮಿಳುನಾಡು ಸರ್ಕಾರ ಸ್ವೀಕರಿಸಲು ನಿರಾಕರಿಸಿದೆ. ವಿರೋಧ ಪಕ್ಷಗಳು ಈ ನೀತಿಯನ್ನು ಕಟುವಾಗಿ ಟೀಕಿಸಲು ಸಜ್ಜಾಗಿವೆ. ಮುಂದಿನ ವರ್ಷ ಜಾರಿಗೆ ಬರಲಿರುವ ಲೋಕಸಭಾ ಕ್ಷೇತ್ರ ಮರುವಿಂಗಡಣೆ ವಿವಾದಾತ್ಮಕ ವಿಷಯವಾಗಿದೆ. ಇದು ರಾಜ್ಯಗಳ ಚುನಾವಣಾ ಪ್ರಾತಿನಿಧ್ಯದ ಮೇಲೆ ಪರಿಣಾಮ ಬೀರಬಹುದು ಎಂದು. ವಿರೋಧ ಪಕ್ಷಗಳು ಆರೋಪಿಸಿವೆ.
ವಕ್ಫ್ ತಿದ್ದುಪಡಿ
ಕ್ಯಾಬಿನೆಟ್ ಅನುಮೋದಿಸಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ಈ ಅಧಿವೇಶನದಲ್ಲಿ ಮಂಡಿಸಲು ನಿಗದಿಪಡಿಸಲಾಗಿದೆ. ವಿರೋಧ ಪಕ್ಷಗಳು ಈ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಲು ತಯಾರಾಗಿವೆ. ಮತದಾರರ ಗುರುತಿನ ಕಾರ್ಡ್‌ಗಳಲ್ಲಿ (EPIC) ನಕಲಿ ಸಂಖ್ಯೆಗಳ ಸಮಸ್ಯೆಯನ್ನು ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಚರ್ಚೆಗೆ ತರಲು ಅಪೇಕ್ಷಿಸಿವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ನೀತಿ ಮತ್ತು ಅಕ್ರಮ ವಲಸೆಗಾರರನ್ನು ಕೈಕೋಳ ಹಾಕಿ ಹಿಂದಕ್ಕೆ ಕಳುಹಿಸಿದ ವಿಷಯವನ್ನು ಸಹ ವಿರೋಧ ಪಕ್ಷಗಳು ಪ್ರಸ್ತಾಪಿಸಲಿವೆ.
ಮಣಿಪುರ ರಾಜ್ಯವು ಪ್ರಸ್ತುತ ರಾಷ್ಟ್ರಪತಿ ಆಡಳಿತದಲ್ಲಿದೆ. ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಮಣಿಪುರದ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. ವಿರೋಧ ಪಕ್ಷಗಳು ಈ ಅಧಿವೇಶನದಲ್ಲಿ ಸರ್ಕಾರದ ಈ ನೀತಿಗಳನ್ನು ಕಟುವಾಗಿ ಟೀಕಿಸಲು ಸಿದ್ಧವಾಗಿವೆ.
ಈ ಅಧಿವೇಶನದಲ್ಲಿ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ಗಲಾಟೆ ನಡೆಯಲಿವೆ ಎಂದು ನಿರೀಕ್ಷಿಸಲಾಗಿದೆ. ಹಣಕಾಸು ಮಸೂದೆಗಳ ಅಂಗೀಕಾರ ಮತ್ತು ವಿವಾದಾತ್ಮಕ ವಿಷಯಗಳ ಮೇಲೆ ಚರ್ಚೆಗಳು ಈ ಅಧಿವೇಶನದ ಪ್ರಮುಖ ಆಕರ್ಷಣೆಯಾಗಿವೆ.