Parliament Session | ಸಂಸತ್​ ಹೊರಗಡೆ ಮುಂದುವರಿದ ಇಂಡಿಯಾ ಒಕ್ಕೂಟದ ಪ್ರತಿಭಟನೆ

ಸಂಸತ್ ಭವನದ ಬಿಲ್ಡಿಂಗ್ ಗೇಟ್​ಗಳಲ್ಲಿ ಯಾವುದೇ ರಾಜಕೀಯ ಪಕ್ಷ, ಸಂಸತ್ ಸದಸ್ಯರು ಅಥವಾ ಸದಸ್ಯರ ಗುಂಪುಗಳು ಯಾವುದೇ ಧರಣಿ ಮತ್ತು ಪ್ರದರ್ಶನ ನಡೆಸಬಾರದು ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.;

Update: 2024-12-20 05:53 GMT
ಸಂಸತ್​ ಹೊರಗಡೆ ಪ್ರತಿಭಟನೆ ನಡೆಯುತ್ತಿರುವುದು.

ಪ್ರತಿಪಕ್ಷಗಳು ಹಾಗೂ ಆಡಳಿತ ಪಕ್ಷಗಳ ಪ್ರತಿಭಟನೆಗಳು ಕಳಪೆ ಮಟ್ಟಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಗುರುವಾರ (ಡಿಸೆಂಬರ್ 20) ಸಂಸತ್ತಿನ ಯಾವುದೇ ದ್ವಾರಗಳಲ್ಲಿ ಸಂಸದರು ಮತ್ತು ರಾಜಕೀಯ ಪಕ್ಷಗಳ ಪ್ರತಿಭಟನಾ ಮೆರವಣಿಗೆ ಮಾಡುವುದನ್ನು ನಿಷೇಧಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

"ಸಂಸತ್ ಭವನದ ಬಿಲ್ಡಿಂಗ್ ಗೇಟ್​ಗಳಲ್ಲಿ ಯಾವುದೇ ರಾಜಕೀಯ ಪಕ್ಷ, ಸಂಸತ್ ಸದಸ್ಯರು ಅಥವಾ ಸದಸ್ಯರ ಗುಂಪುಗಳು ಯಾವುದೇ ಧರಣಿ ಮತ್ತು ಪ್ರದರ್ಶನ ನಡೆಸಬಾರದು ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ" ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.

ಡಾ.ಬಿ.ಆರ್.ಅಂಬೇಡ್ಕರ್ ಗೆ ಅಮಿತ್​ಶಾ ಅಪಮಾನ ಮಾಡಿದ್ದಾರೆ ಎಂಬ ವಿಷಯ ಪ್ರತಿಪಕ್ಷಗಳ ಪ್ರತಿಭಟನೆಗೆ ಪ್ರೇರಣೆ ನೀಡಿದರೆ. ಆಡಳಿತ ಪಕ್ಷಗಳು ತಿರುಗಿ ಬಿದ್ದಿದ್ದವು. ಅದು ಕ್ಷಣದಲ್ಲೇ ಜಗಳಕ್ಕೆ ತಿರುಗಿತ್ತು. ಘಟನೆಯಲ್ಲಿ ಇಬ್ಬರು ಸಂಸದರು ಗಾಯಗೊಂಡಿದ್ದಾರೆ. ಅದೇರ ಈತಿ ಮಹಿಳಾ ಸಂಸದರೊಬ್ಬರು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಹುಲ್ ವಿರುದ್ಧ ಎಫ್​ಐಆರ್ ದಾಖಲು

ಬಿಜೆಪಿ ನಾಯಕರು ಪೊಲೀಸರಿಗೆ ದೂರು ನೀಡಿದ ನಂತರ ದೆಹಲಿ ಪೊಲೀಸರು ರಾಹುಲ್ ವಿರುದ್ಧ ವಿವಿಧ ವಿಭಾಗಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 117 (ಸ್ವಯಂಪ್ರೇರಿತವಾಗಿ ತೀವ್ರ ಗಾಯ ಉಂಟುಮಾಡುವುದು) ಹೊರತುಪಡಿಸಿ ಎಫ್ಐಆರ್ನಲ್ಲಿರುವ ಎಲ್ಲಾ ವಿಭಾಗಗಳು ಜಾಮೀನು ನೀಡಬಹುದಾದವು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಜೆಪಿ ಸಂಸದರು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಎಲ್ಒಪಿ ರಾಹುಲ್ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕೂಡ ಪೊಲೀಸರಿಗೆ ದೂರು ನೀಡಿದೆ.

ಹಿಂಸಾಚಾರಕ್ಕೆ ತಿರುಗಿದ್ದ ಪ್ರತಿಭಟನೆ

ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ಮತ್ತು ವಿರೋಧ ಪಕ್ಷದ ಸಂಸದರು ಬೆಳಿಗ್ಗೆ ಪರಸ್ಪರ ಮೆರವಣಿಗೆ ನಡೆಸಿದಾಗ ಗದ್ದಲ ಪ್ರಾರಂಭವಾಗಿತ್ತು. ಎರಡು ಗುಂಪುಗಳು ಹತ್ತಿರವಾಗುತ್ತಿದ್ದಂತೆ ಮಾತಿನ ಮೇಲಾಟ ನಡೆಯಿತು.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅವರನ್ನು ತಳ್ಳಿದ ಕಾರಣ ಸಮತೋಲನ ಕಳೆದುಕೊಂಡು ಕುಳಿತುಕೊಂಡರು ಎಂದು ಕಾಂಗ್ರೆಸ್ ಆರೋಪಿಸಿದೆ.

ಬಿಜೆಪಿಯ ಬಾಲಸೋರ್ ಸಂಸದ ಪ್ರತಾಪ್ ಸಾರಂಗಿ (69) ಅವರಿಗೆ ಗಾಯಗಳಾಗಿದ್ದು ತಲೆಗೆ ಹೊಲಿಗೆ ಹಾಕಬೇಕಾಯಿತು. ಅವರ ಸಹೋದ್ಯೋಗಿ ಮುಖೇಶ್ ರಜಪೂತ್ ಅವರ ತಲೆಗೆ ಗಾಯವಾಗಿದೆ.

ಬಿಜೆಪಿ ಸಂಸದರು ನನಗೆ ಬೆದರಿಕೆ ಹಾಕಿದ್ದಾರೆ: ರಾಹುಲ್ ಗಾಂಧಿ

ಆರೋಪಗಳನ್ನು ಕಾಂಗ್ರೆಸ್ ತೀವ್ರವಾಗಿ ನಿರಾಕರಿಸಿದೆ. ರಾಹುಲ್ ಗಾಂಧಿ ಮತ್ತು ಇತರರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಬಿಜೆಪಿ ಸಂಸದರು ಕೋಲುಗಳನ್ನು ಹಿಡಿದು ಸಂಸತ್ತಿಗೆ ಪ್ರವೇಶಿಸದಂತೆ ತಡೆದರು ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ. 

Tags:    

Similar News