ಪ್ರತಿಪಕ್ಷಗಳ ಗದ್ದಲದ ಮಧ್ಯೆ ಸಂಸತ್ತಿನಲ್ಲಿ 26 ಮಸೂದೆ ಅಂಗೀಕಾರ
ವಿರೋಧ ಪಕ್ಷಗಳ ಅಸಹಕಾರ ವರ್ತನೆಯಿಂದಾಗಿ ಪ್ರಮುಖ ಶಾಸನಗಳ ಬಗ್ಗೆ ಚರ್ಚಿಸಲು ಅವಕಾಶಗಳು ತಪ್ಪಿಹೋದವು.;
ನಿರ್ಮಲಾ ಸೀತಾರಾಮನ್
ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಲೋಕಸಭೆಯಲ್ಲಿ ಹನ್ನೆರಡು ಮಸೂದೆಗಳು ಮತ್ತು ರಾಜ್ಯಸಭೆಯಲ್ಲಿ 14 ಮಸೂದೆಗಳನ್ನು ಅಂಗೀಕರಿಸಲಾಗಿದೆ. ಜುಲೈ 21 ರಂದು ಪ್ರಾರಂಭವಾದ ಸಂಸತ್ ಅಧಿವೇಶನವು ಇಂದು (ಆ.21) ಮುಕ್ತಾಯವಾಗಲಿದೆ.
ಲೋಕಸಭೆಯಲ್ಲಿ ಅಂಗೀಕರಿಸಲಾದ ಮಸೂದೆಗಳು
ಉಭಯ ಸದನಗಳಲ್ಲಿ 'ಆಪರೇಷನ್ ಸಿಂಧೂರ್' ಕುರಿತ ಸೂಕ್ತ ಚರ್ಚೆಗೆ ಅವಕಾಶ ಸಿಗದ ಕಾರಣ ಯಾವುದೇ ವಿಷಯಗಳ ರಚನಾತ್ಮಕ ಚರ್ಚೆ ನಡೆಯಯಲಿಲ್ಲ. ವಿರೋಧ ಪಕ್ಷದವರು ಆಪರೇಷನ್ ಸಿಂಧೂರ್ ಕುರಿತು ಚರ್ಚೆಗೆ ಪಟ್ಟು ಹಿಡಿದಿದ್ದರು. ಜತೆಗೆ, ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಚರ್ಚೆಯೂ ಸರಿಯಾಗಿ ನಡೆಯಲಿಲ್ಲ.
ಈ ಮಧ್ಯೆ, ಲೋಕಸಭೆಯಲ್ಲಿ ಅಂಗೀಕಾರವಾದ ಮಸೂದೆಗಳಲ್ಲಿ ಗೋವಾ ರಾಜ್ಯದ ವಿಧಾನಸಭಾ ಕ್ಷೇತ್ರಗಳಲ್ಲಿ ಪರಿಶಿಷ್ಟ ಪಂಗಡಗಳ ಪ್ರಾತಿನಿಧ್ಯದ ಮರು ಹೊಂದಾಣಿಕೆ ಮಸೂದೆ -2025, ವ್ಯಾಪಾರಿ ಸಾಗಣೆ ಮಸೂದೆ -2025, ಮಣಿಪುರ ಸರಕು ಮತ್ತು ಸೇವಾ ತೆರಿಗೆ (ತಿದ್ದುಪಡಿ) ಮಸೂದೆ-2025, ಮಣಿಪುರ ಹಂಚಿಕೆ (ಸಂ.2) ಮಸೂದೆ-2025, ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ-2025, ರಾಷ್ಟ್ರೀಯ ಡೋಪಿಂಗ್ ವಿರೋಧಿ (ತಿದ್ದುಪಡಿ) ಮಸೂದೆ-2025 ಮಂಡಿಸಲಾಗಿದೆ.
ಲೋಕಸಭೆಯು ಅಂಗೀಕರಿಸಿದ ಇತರ ಮಸೂದೆಗಳೆಂದರೆ ಆದಾಯ ತೆರಿಗೆ ಮಸೂದೆ -2025, ತೆರಿಗೆ ಕಾನೂನುಗಳು (ತಿದ್ದುಪಡಿ) ಮಸೂದೆ -2025, ಭಾರತೀಯ ಬಂದರು ಮಸೂದೆ -2025, ಗಣಿ ಮತ್ತು ಖನಿಜಗಳು (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ -2025, ಭಾರತೀಯ ನಿರ್ವಹಣಾ ಸಂಸ್ಥೆಗಳ (ತಿದ್ದುಪಡಿ) ಮಸೂದೆ -2025, ಮತ್ತು ಆನ್‌ಲೈನ್ ಗೇಮಿಂಗ್‌ನ ಪ್ರಚಾರ ಮತ್ತು ನಿಯಂತ್ರಣ ಮಸೂದೆ -2025 ಮಸೂದೆಗಳನ್ನು ಮಂಡಿಸಲಾಗಿದೆ.
ರಾಜ್ಯಸಭೆಯಲ್ಲಿ ಅಂಗೀಕರಿಸಲಾದ ಮಸೂದೆಗಳು
ರಾಜ್ಯಸಭೆಯು ಸರಕು ಸಾಗಣೆ ಮಸೂದೆ-2025, ಸಮುದ್ರದ ಮೂಲಕ ಸರಕುಗಳ ಸಾಗಣೆ ಮಸೂದೆ -2025, ಕರಾವಳಿ ಸಾಗಣೆ ಮಸೂದೆ -2025, ಮಣಿಪುರ ಸರಕು ಮತ್ತು ಸೇವಾ ತೆರಿಗೆ (ತಿದ್ದುಪಡಿ) ಮಸೂದೆ -2025, ಮಣಿಪುರ ಹಂಚಿಕೆ (ಸಂ.2) ಮಸೂದೆ -2025, ವ್ಯಾಪಾರಿ ಸಾಗಣೆ ಮಸೂದೆ -2025, ಗೋವಾ ರಾಜ್ಯದ ವಿಧಾನಸಭಾ ಕ್ಷೇತ್ರಗಳಲ್ಲಿ ಪರಿಶಿಷ್ಟ ಪಂಗಡಗಳ ಪ್ರಾತಿನಿಧ್ಯದ ಮರು ಹೊಂದಾಣಿಕೆ ಮಸೂದೆ -2025 ಅಂಗೀಕರಿಸಲಾಯಿತು.
ರಾಜ್ಯಸಭೆಯು ಅಂಗೀಕರಿಸಿದ ಇತರ ಮಸೂದೆಗಳೆಂದರೆ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ-2025, ರಾಷ್ಟ್ರೀಯ ಡೋಪಿಂಗ್ ವಿರೋಧಿ (ತಿದ್ದುಪಡಿ) ಮಸೂದೆ -2025, ಆದಾಯ ತೆರಿಗೆ ಮಸೂದೆ -2025, ತೆರಿಗೆ ಕಾನೂನುಗಳು (ತಿದ್ದುಪಡಿ) ಮಸೂದೆ-2025, ಭಾರತೀಯ ಬಂದರು ಮಸೂದೆ -2025, ಗಣಿ ಮತ್ತು ಖನಿಜಗಳು (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ -2025, ಮತ್ತು ಭಾರತೀಯ ನಿರ್ವಹಣಾ ಸಂಸ್ಥೆಗಳ (ತಿದ್ದುಪಡಿ) ಮಸೂದೆ -2025 ಮಸೂದೆಯನ್ನು ಮಂಡಿಸಲಾಗಿದೆ.
ಕಲಾಪದಲ್ಲಿ ಗದ್ದಲದ ವಾತಾವರಣ ನಿರ್ಮಾಣ
ವಿರೋಧ ಪಕ್ಷಗಳ ಅಸಹಕಾರ ವರ್ತನೆಯಿಂದಾಗಿ ಪ್ರಮುಖ ಶಾಸನಗಳ ಬಗ್ಗೆ ಚರ್ಚಿಸಲು ಅವಕಾಶಗಳು ತಪ್ಪಿದವು. ಇಡೀ ಕಲಾಪದಲ್ಲಿ ಗದ್ದಲ ನಿರ್ಮಾಣವಾಯಿತು.
ಮುಂಗಾರು ಅಧಿವೇಶನದ ಮೊದಲ ದಿನ ಯಾವುದೇ ಅಡೆತಡೆಯಿಲ್ಲದೆ ಅಂಗೀಕರಿಸಲ್ಪಟ್ಟ 2025 ರ ಸರಕು ಸಾಗಣೆ ಮಸೂದೆ ಹೊರತುಪಡಿಸಿ ರಾಜ್ಯಸಭೆಯಲ್ಲಿನ ಎಲ್ಲಾ ಇತರ ಮಸೂದೆಗಳನ್ನು ಗದ್ದಲದ ನಡುವೆ ಅಥವಾ ವಿರೋಧ ಪಕ್ಷಗಳು ಸಭಾತ್ಯಾಗ ಮಾಡಿದ ನಂತರವೇ ಅಂಗೀಕರಿಸಲಾಯಿತು.