ಕದನ ವಿರಾಮ ಉಲ್ಲಂಘಿಸಿ ಗಡಿ ದಾಟಿ ಬಂದ ಪಾಕ್ ಸೇನೆ: ಭಾರತದ ದಾಳಿಗೆ 5 ಸಾವು

ಏಪ್ರಿಲ್ 1ರಂದು, ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೇನೆ ಹಾಗೂ ಉಗ್ರರು ಒಳ ನುಸುಳಿದ್ದರು. ಪರಿಣಾಮವಾಗಿ ಕೃಷ್ಣ ಘಾಟಿ ಸೆಕ್ಟರ್‌ನಲ್ಲಿ ಲ್ಯಾಂಡ್​ ಬಾಂಬ್​ ಸ್ಫೋಟವೊಂದು ಸಂಭವಿಸಿತ್ತು. ನಂತರ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ ಸೇನೆಯು ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು;

Update: 2025-04-02 09:49 GMT

ಮಹತ್ವದ ಬೆಳವಣಿಗೆಯೊಂದರಲ್ಲಿ, ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೇನೆಯು ಕದನ ವಿರಾಮ ಉಲ್ಲಂಘಿಸಿದ್ದು, ಮಂಗಳವಾರ ಏಕಾಏಕಿ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಗೆ ನುಸುಳಿದೆ. ತಕ್ಷಣ ಭಾರತ ಪ್ರತಿದಾಳಿ ನಡೆಸಿದ್ದು. ನಾಲ್ವರಿಂದ ಐವರು ಸೈನಿಕರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.

ಏಪ್ರಿಲ್ 1ರಂದು, ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೇನೆ ಹಾಗೂ ಉಗ್ರರು ಒಳ ನುಸುಳಿದ್ದರು. ಪರಿಣಾಮವಾಗಿ ಕೃಷ್ಣ ಘಾಟಿ ಸೆಕ್ಟರ್‌ನಲ್ಲಿ ಲ್ಯಾಂಡ್​ ಬಾಂಬ್​ ಸ್ಫೋಟವೊಂದು ಸಂಭವಿಸಿತ್ತು. ನಂತರ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ ಸೇನೆಯು ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು. ತಕ್ಷಣವೇ ನಮ್ಮ ಪಡೆಗಳು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಿದವು. ಪಾಕ್ ಸೇನೆಯ ದಾಳಿಗೆ ಪ್ರತ್ಯುತ್ತರ ನೀಡಿದವು. ಈ ಚಕಮಕಿಯಲ್ಲಿ 4ರಿಂದ5 ಪಾಕ್ ಸೈನಿಕರನ್ನು ಹತ್ಯೆಗೈಯ್ಯಲಾಯಿತು. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದೆ ಎಂದೂ ಸೇನಾ ಮೂಲಗಳು ತಿಳಿಸಿವೆ.

ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಶಾಂತಿ ಕಾಪಾಡಿಕೊಳ್ಳುವ ಉದ್ದೇಶದಿಂದ ಉಭಯ ದೇಶಗಳ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರ ನಡುವಿನ ಒಪ್ಪಂದವನ್ನು ಎತ್ತಿಹಿಡಿಯಬೇಕಾದ್ದು ಎರಡೂ ದೇಶಗಳ ಕರ್ತವ್ಯವಾಗಿದೆ ಎಂದು ಭಾರತೀಯ ಸೇನೆ ಹೇಳಿದೆ.

2021ರಲ್ಲಿ ನಡೆದಿದ್ದ ಉಭಯ ದೇಶಗಳ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರ ಸಭೆಯಲ್ಲಿ, ಎರಡೂ ಕಡೆಯ ಉನ್ನತ ಅಧಿಕಾರಿಗಳು ಹಿಂಸಾಚಾರಕ್ಕೆ ಕಾರಣವಾಗಬಹುದಾದ ಅಂಶಗಳ ಬಗ್ಗೆ ಚರ್ಚಿಸಿ, ಅವುಗಳನ್ನು ಪರಿಹರಿಸುವ ಕುರಿತು ಪರಸ್ಪರ ಒಪ್ಪಿಕೊಂಡಿದ್ದರು. ನಿಯಂತ್ರಣ ರೇಖೆಯುದ್ದಕ್ಕೂ ಕದನ ವಿರಾಮಕ್ಕೆ ಎರಡೂ ಕಡೆಯವರು ಒಪ್ಪಿಗೆ ಸೂಚಿಸಿದ್ದರು.

ಕಳೆದ 2 ತಿಂಗಳಿಂದ ಗಡಿಯಲ್ಲಿ ಗುಂಡಿನ ದಾಳಿ ಹೆಚ್ಚಳವಾಗಿದ್ದು, ಪಾಕಿಸ್ತಾನ ಸೇನೆಯು ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿದೆ. ಆದರೆ ಪ್ರತಿ ಬಾರಿಯೂ ಭಾರತೀಯ ಪಡೆಯು ತಕ್ಕ ಪ್ರತ್ಯುತ್ತರ ನೀಡುವ ಮೂಲಕ ಪಾಕ್ ಸೇನೆಯ ನುಸುಳುವಿಕೆ ಪ್ರಯತ್ನವನ್ನು ತಡೆದಿದೆ.

Tags:    

Similar News