ಪಾಕಿಸ್ತಾನದ ಮೊದಲ 'ಚೀಫ್ ಆಫ್ ಡಿಫೆನ್ಸ್ ಫೋರ್ಸಸ್' ಆಗಿ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ನೇಮಕ

ಅಸಿಮ್ ಮುನೀರ್ ಅವರು ಮುಂದಿನ ಐದು ವರ್ಷಗಳ ಕಾಲ ಈ ಹುದ್ದೆಯನ್ನು ಅಲಂಕರಿಸಲಿದ್ದಾರೆ. ಈ ಹೊಸ ಹುದ್ದೆಯ ಸೃಷ್ಟಿಯೊಂದಿಗೆ, ಈ ಹಿಂದೆ ಇದ್ದ 'ಜಾಯಿಂಟ್ ಚೀಫ್ಸ್ ಆಫ್ ಸ್ಟಾಫ್ ಕಮಿಟಿ' ಅಧ್ಯಕ್ಷರ ಹುದ್ದೆಯನ್ನು ರದ್ದುಗೊಳಿಸಲಾಗಿದೆ.

Update: 2025-12-05 04:05 GMT

 ಅಧ್ಯಕ್ಷ ಆಸಿಫ್​ ಅಲಿ ಜರ್ದಾರಿ ಅವರು ಈ ಮಹತ್ವದ ನೇಮಕಾತಿಗೆ ಗುರುವಾರ ಅಧಿಕೃತ ಅಂಕಿತ ಹಾಕಿದ್ದಾರೆ.

Click the Play button to listen to article

ಪಾಕಿಸ್ತಾನದ ಸೇನಾ ಮುಖ್ಯಸ್ಥ (COAS) ಫೀಲ್ಡ್ ಮಾರ್ಷಲ್ ಆಸಿಮ್​ ಮುನೀರ್​ ಅವರನ್ನು ದೇಶದ ಮೊಟ್ಟಮೊದಲ 'ಚೀಫ್ ಆಫ್ ಡಿಫೆನ್ಸ್ ಫೋರ್ಸಸ್' (Chief of Defence Forces - CDF) ಆಗಿ ನೇಮಕ ಮಾಡಲಾಗಿದೆ. ಅಧ್ಯಕ್ಷ ಆಸಿಫ್​ ಅಲಿ ಜರ್ದಾರಿ ಅವರು ಈ ಮಹತ್ವದ ನೇಮಕಾತಿಗೆ ಗುರುವಾರ ಅಧಿಕೃತ ಅಂಕಿತ ಹಾಕಿದ್ದಾರೆ.

ಅಸಿಮ್ ಮುನೀರ್ ಅವರು ಮುಂದಿನ ಐದು ವರ್ಷಗಳ ಕಾಲ ಈ ಹುದ್ದೆಯನ್ನು ಅಲಂಕರಿಸಲಿದ್ದಾರೆ. ಈ ಹೊಸ ಹುದ್ದೆಯ ಸೃಷ್ಟಿಯೊಂದಿಗೆ, ಈ ಹಿಂದೆ ಇದ್ದ 'ಜಾಯಿಂಟ್ ಚೀಫ್ಸ್ ಆಫ್ ಸ್ಟಾಫ್ ಕಮಿಟಿ' ಅಧ್ಯಕ್ಷರ ಹುದ್ದೆಯನ್ನು ರದ್ದುಗೊಳಿಸಲಾಗಿದೆ.

ತುರ್ತು ಸಂದರ್ಭಗಳಲ್ಲಿ ನಿರ್ಧಾರಗಳನ್ನು ತ್ವರಿತಗೊಳಿಸಲು ಮತ್ತು ಮೂರೂ ಪಡೆಗಳ ನಡುವೆ ಏಕತೆಯ ಕಮಾಂಡ್ ತರುವ ಉದ್ದೇಶದಿಂದ ಕಳೆದ ತಿಂಗಳು ಪಾಕಿಸ್ತಾನದ ಸಂಸತ್ತು 27ನೇ ಸಂವಿಧಾನ ತಿದ್ದುಪಡಿಯನ್ನು ಅಂಗೀಕರಿಸಿತ್ತು. ಇದರ ಅನ್ವಯ ಸಿಡಿಎಫ್ (CDF) ಹುದ್ದೆಯನ್ನು ಸೃಷ್ಟಿಸಲಾಗಿದ್ದು, ಮುನೀರ್ ಅವರು ಈ ಹುದ್ದೆ ಏರಿದ ಮೊದಲ ಅಧಿಕಾರಿಯಾಗಿದ್ದಾರೆ.

ವಾಯುಪಡೆ ಮುಖ್ಯಸ್ಥರಿಗೂ ವಿಸ್ತರಣೆ

ಇದೇ ವೇಳೆ, ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ Zaheer Ahmad Babar Sidhu ಅವರ ಅಧಿಕಾರಾವಧಿಯನ್ನು ಎರಡು ವರ್ಷಗಳ ಕಾಲ ವಿಸ್ತರಿಸಲು ಅಧ್ಯಕ್ಷ ಜರ್ದಾರಿ ಅನುಮೋದನೆ ನೀಡಿದ್ದಾರೆ. ಇವರ ಪ್ರಸ್ತುತ ಅವಧಿಯು ಮಾರ್ಚ್ 19, 2026ಕ್ಕೆ ಮುಕ್ತಾಯಗೊಳ್ಳಲಿದ್ದು, ಅಲ್ಲಿಂದ ಮುಂದಿನ ಎರಡು ವರ್ಷಗಳ ಕಾಲ ಅವರು ಸೇವೆಯಲ್ಲಿ ಮುಂದುವರಿಯಲಿದ್ದಾರೆ.

ನವೆಂಬರ್ 27 ರಂದು ಜನರಲ್ ಸಾಹಿರ್ ಶಮ್ಶಾದ್ ಮಿರ್ಜಾ ಅವರ ನಿವೃತ್ತಿಯ ನಂತರ ಸಿಜೆಸಿಎಸ್‌ಸಿ (CJCSC) ಹುದ್ದೆ ಖಾಲಿಯಾಗಿತ್ತು. ಪ್ರಧಾನಿ ಶಹಬಾಜ್​ ಶರೀಫ್​ ಅವರ ಶಿಫಾರಸಿನ ಮೇರೆಗೆ ಅಧ್ಯಕ್ಷರು ಈ ಹೊಸ ನೇಮಕಾತಿಗೆ ಸಹಿ ಹಾಕಿದ್ದು, ಕಳೆದ ಕೆಲ ದಿನಗಳಿಂದ ಹರಿದಾಡುತ್ತಿದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

Tags:    

Similar News