ಗಮನ ಸೆಳೆದ ಮೋದಿ-ಪುಟಿನ್ 'ಫಾರ್ಚುನರ್' ಸವಾರಿ
ಸಾಮಾನ್ಯವಾಗಿ ಪ್ರಧಾನಿ ಮೋದಿ ಅವರು ರೇಂಜ್ ರೋವರ್ ಅಥವಾ ಅತ್ಯಾಧುನಿಕ ಭದ್ರತೆಯುಳ್ಳ ಕಾರುಗಳಲ್ಲಿ ಸಂಚರಿಸುತ್ತಾರೆ. ಅತ್ತ ರಷ್ಯಾ ಅಧ್ಯಕ್ಷರು ವಿದೇಶ ಪ್ರವಾಸದ ವೇಳೆ ತಮ್ಮದೇ ಆದ ವಿಶೇಷ 'ಔರಸ್ ಸೆನೆಟ್' ಎಂಬ ಐಷಾರಾಮಿ ಮತ್ತು ಗುಂಡು ನಿರೋಧಕ ಲಿಮೋಸಿನ್ ಕಾರನ್ನು ಬಳಸುತ್ತಾರೆ.
ವಿಮಾನ ನಿಲ್ದಾಣದಿಂದ ಪ್ರಧಾನಿ ಮೋದಿಯವರ ನಿವಾಸಕ್ಕೆ ತೆರಳಲು ಇಬ್ಬರೂ ನಾಯಕರು ಬಿಳಿ ಬಣ್ಣದ ಟೊಯೊಟಾ ಫಾರ್ಚುನರ್ ಕಾರನ್ನು ಬಳಸಿದ್ದು ವಿಶೇಷವಾಗಿತ್ತು.
ಭಾರತಕ್ಕೆ ಭೇಟಿ ನೀಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ ಉಭಯ ನಾಯಕರು ತಮ್ಮ ಎಂದಿನ ಭದ್ರತಾ ವಾಹನಗಳನ್ನು ಬಿಟ್ಟು, ಒಂದೇ ಕಾರಿನಲ್ಲಿ ಒಟ್ಟಿಗೆ ಪ್ರಯಾಣಿಸುವ ಮೂಲಕ ಎಲ್ಲರ ಗಮನ ಸೆಳೆದರು.
ವಿಮಾನ ನಿಲ್ದಾಣದಿಂದ ಪ್ರಧಾನಿ ಮೋದಿಯವರ ನಿವಾಸಕ್ಕೆ ತೆರಳಲು ಇಬ್ಬರೂ ನಾಯಕರು ಬಿಳಿ ಬಣ್ಣದ ಟೊಯೊಟಾ ಫಾರ್ಚುನರ್ ಕಾರನ್ನು ಬಳಸಿದ್ದು ವಿಶೇಷವಾಗಿತ್ತು. ಸಾಮಾನ್ಯವಾಗಿ ರಾಷ್ಟ್ರದ ಮುಖ್ಯಸ್ಥರು ಬಿಗಿ ಭದ್ರತೆಯ ಶಸ್ತ್ರಸಜ್ಜಿತ ವಾಹನಗಳಲ್ಲಿ ಪ್ರತ್ಯೇಕವಾಗಿ ಚಲಿಸುತ್ತಾರೆ. ಆದರೆ, ಮೋದಿ ಮತ್ತು ಪುಟಿನ್ ಒಂದೇ ವಾಹನದಲ್ಲಿ ಪ್ರಯಾಣಿಸಿದ್ದು, ಇಬ್ಬರ ನಡುವಿನ ವೈಯಕ್ತಿಕ ಒಡನಾಟ ಮತ್ತು ಗಾಢ ಸ್ನೇಹಕ್ಕೆ ಸಾಕ್ಷಿಯಾಯಿತು.
ಗಮನ ಸೆಳೆದ ಸಾಮಾನ್ಯ ಕಾರು
ಸಾಮಾನ್ಯವಾಗಿ ಪ್ರಧಾನಿ ಮೋದಿ ಅವರು ರೇಂಜ್ ರೋವರ್ ಅಥವಾ ಅತ್ಯಾಧುನಿಕ ಭದ್ರತೆಯುಳ್ಳ ಕಾರುಗಳಲ್ಲಿ ಸಂಚರಿಸುತ್ತಾರೆ. ಅತ್ತ ರಷ್ಯಾ ಅಧ್ಯಕ್ಷರು ವಿದೇಶ ಪ್ರವಾಸದ ವೇಳೆ ತಮ್ಮದೇ ಆದ ವಿಶೇಷ 'ಔರಸ್ ಸೆನೆಟ್' (Aurus Senat) ಎಂಬ ಐಷಾರಾಮಿ ಮತ್ತು ಗುಂಡು ನಿರೋಧಕ ಲಿಮೋಸಿನ್ ಕಾರನ್ನು ಬಳಸುತ್ತಾರೆ. ಆದರೆ, ಗುರುವಾರ ಸಂಜೆ ಈ ಎಲ್ಲಾ ಶಿಷ್ಟಾಚಾರಗಳನ್ನು ಬದಿಗೊತ್ತಿ, ಇಬ್ಬರೂ ನಾಯಕರು ಫಾರ್ಚೂನರ್ ಸಿಗ್ಮಾ 4 MT (ನೋಂದಣಿ ಸಂಖ್ಯೆ MH01EN5795) ಕಾರಿನಲ್ಲಿ ಕುಳಿತು ಹಗುರವಾದ ಮಾತುಕತೆಯಲ್ಲಿ ತೊಡಗುತ್ತಾ ಪ್ರಯಾಣ ಬೆಳೆಸಿದರು.
ಕಾರಿನ ಹಿನ್ನೆಲೆ ಏನು?
ಮಾಧ್ಯಮ ವರದಿಗಳ ಪ್ರಕಾರ, ನಾಯಕರು ಬಳಸಿದ ಈ ಫಾರ್ಚುನರ್ ಕಾರು 2024ರ ಏಪ್ರಿಲ್‌ನಲ್ಲಿ ನೋಂದಣಿಯಾಗಿದೆ. ಇದು ಬಿಎಸ್-6 (BS-VI) ಮಾಲಿನ್ಯ ನಿಯಂತ್ರಣ ಮಾನದಂಡಗಳನ್ನು ಹೊಂದಿದ್ದು, ಭದ್ರತಾ ಏಜೆನ್ಸಿಗಳು ಬಳಸುವ ವಿಐಪಿ ವಾಹನಗಳ ಫ್ಲೀಟ್‌ನ ಭಾಗವಾಗಿದೆ ಎನ್ನಲಾಗಿದೆ.
ವಿಮಾನ ನಿಲ್ದಾಣದಿಂದ ನೇರವಾಗಿ 7, ಲೋಕ್ ಕಲ್ಯಾಣ್ ಮಾರ್ಗ್‌ನಲ್ಲಿರುವ ಪ್ರಧಾನಿ ನಿವಾಸಕ್ಕೆ ತೆರಳಿದ ನಾಯಕರು, ಅಲ್ಲಿ ಅನೌಪಚಾರಿಕ ಮಾತುಕತೆ ನಡೆಸಿದರು. ಪುಟಿನ್ ಅವರ ಸ್ವಾಗತಕ್ಕಾಗಿ ದೆಹಲಿಯ ಪ್ರಮುಖ ರಸ್ತೆಗಳನ್ನು ಭಾರತ ಮತ್ತು ರಷ್ಯಾ ಧ್ವಜಗಳಿಂದ ಸಿಂಗರಿಸಲಾಗಿತ್ತು. ರಷ್ಯಾ ಅಧ್ಯಕ್ಷರ ಎರಡು ದಿನಗಳ ಭೇಟಿ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಬಿಗಿ ಭದ್ರತೆ ಹಾಗೂ ಸಂಚಾರ ಬದಲಾವಣೆಗಳನ್ನು ಮಾಡಲಾಗಿದೆ.