ಗೂಗಲ್‌ನಲ್ಲಿ ಭಾರತೀಯರು ಅತಿ ಹೆಚ್ಚು ಹುಡುಕಿದ್ದೇನು?: 2025ರ ಟಾಪ್ 10 ಪಟ್ಟಿ ಬಿಡುಗಡೆ
ಈ ಬಾರಿಯ ಟಾಪ್ 10 ಪಟ್ಟಿಯಲ್ಲಿ ಕ್ರೀಡೆ, ತಂತ್ರಜ್ಞಾನ ಮತ್ತು ಧಾರ್ಮಿಕ ಆಸಕ್ತಿಗಳ ಸಮ್ಮಿಶ್ರಣ ಕಂಡುಬಂದಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (IPL) ಎಂದಿನಂತೆ ಅಗ್ರಸ್ಥಾನ ಕಾಯ್ದುಕೊಂಡಿದೆ.
2025ನೇ ಇಸವಿ ಮುಗಿಯುತ್ತಾ ಬಂದಿದ್ದು, ಈ ವರ್ಷ ಭಾರತೀಯರು ಅಂತರ್ಜಾಲದಲ್ಲಿ ಅತಿ ಹೆಚ್ಚು ಯಾವ ವಿಷಯಗಳನ್ನು ಹುಡುಕಾಡಿದ್ದಾರೆ ಎಂಬ ಕುತೂಹಲಕಾರಿ ಮಾಹಿತಿಯನ್ನು ಗೂಗಲ್ ಬಿಹಿರಂಗಪಡಿಸಿದೆ. ಗೂಗಲ್ ಬಿಡುಗಡೆ ಮಾಡಿರುವ ‘ಇಯರ್ ಇನ್ ಸರ್ಚ್ 2025’ (Year in Search 2025) ವರದಿಯ ಪ್ರಕಾರ, ಕ್ರಿಕೆಟ್, ಕೃತಕ ಬುದ್ಧಿಮತ್ತೆ (AI), ಧಾರ್ಮಿಕ ಉತ್ಸವಗಳು ಮತ್ತು ಸಿನಿಮಾ ತಾರೆಯರು ಭಾರತೀಯರ ಹುಡುಕಾಟದ ಕೇಂದ್ರಬಿಂದುವಾಗಿದ್ದರು.
ಈ ಬಾರಿಯ ಟಾಪ್ 10 ಪಟ್ಟಿಯಲ್ಲಿ ಕ್ರೀಡೆ, ತಂತ್ರಜ್ಞಾನ ಮತ್ತು ಧಾರ್ಮಿಕ ಆಸಕ್ತಿಗಳ ಸಮ್ಮಿಶ್ರಣ ಕಂಡುಬಂದಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (IPL) ಎಂದಿನಂತೆ ಅಗ್ರಸ್ಥಾನ ಕಾಯ್ದುಕೊಂಡಿದ್ದರೆ, ಗೂಗಲ್‌ನ ಸ್ವಂತ ಎಐ ತಂತ್ರಜ್ಞಾನವಾದ ‘ಜೆಮಿನಿ’ ಕೂಡ ಟಾಪ್ ಸ್ಥಾನದಲ್ಲಿ ಕಾಣಿಸಿಕೊಂಡಿರುವುದು ಭಾರತೀಯರ ತಂತ್ರಜ್ಞಾನದ ಆಸಕ್ತಿಯನ್ನು ತೋರಿಸುತ್ತದೆ. ಇದರೊಂದಿಗೆ ಏಷ್ಯಾ ಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಯಂತಹ ಕ್ರಿಕೆಟ್ ಟೂರ್ನಿಗಳು ಕೂಡ ಪಟ್ಟಿಯಲ್ಲಿ ಮೇಲುಗೈ ಸಾಧಿಸಿವೆ.
ವಿಶೇಷವೆಂದರೆ, ವಿಶ್ವದ ಅತಿದೊಡ್ಡ ಧಾರ್ಮಿಕ ಮೇಳವಾದ ‘ಮಹಾ ಕುಂಭಮೇಳ’ ಕೂಡ ಈ ಬಾರಿ ಅತಿ ಹೆಚ್ಚು ಹುಡುಕಲ್ಪಟ್ಟ ವಿಷಯಗಳಲ್ಲಿ ಒಂದಾಗಿದೆ.
2025ರಲ್ಲಿ ಭಾರತೀಯರು ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಿದ ಟಾಪ್ 10 ವಿಷಯಗಳು ಇಲ್ಲಿವೆ:
1. ಐಪಿಎಲ್ (IPL) - ಇಂಡಿಯನ್ ಪ್ರೀಮಿಯರ್ ಲೀಗ್
2. ಗೂಗಲ್ ಜೆಮಿನಿ (Google Gemini) - ಗೂಗಲ್‌ನ ಎಐ ಟೂಲ್
3. ಏಷ್ಯಾ ಕಪ್ (Asia Cup) - ಕ್ರಿಕೆಟ್ ಟೂರ್ನಿ
4. ಐಸಿಸಿ ಚಾಂಪಿಯನ್ಸ್ ಟ್ರೋಫಿ (ICC Champions Trophy)
5. ಪ್ರೊ ಕಬಡ್ಡಿ ಲೀಗ್ (Pro Kabaddi League)
6. ಮಹಾ ಕುಂಭ (Maha Kumbh)
7. ಮಹಿಳಾ ವಿಶ್ವಕಪ್ (Women's World Cup)
8. ಗ್ರಾಕ್ (Grok) - ಎಲಾನ್ ಮಸ್ಕ್ ಅವರ ಎಐ ಚಾಟ್‌ಬಾಟ್
9. ಸೈಯಾರ (Saiyaara)
10. ಧರ್ಮೇಂದ್ರ (Dharmendra) - ಹಿರಿಯ ಬಾಲಿವುಡ್ ನಟ
ಒಟ್ಟಾರೆಯಾಗಿ, ಈ ಪಟ್ಟಿಯು ಭಾರತೀಯರ ಬದಲಾಗುತ್ತಿರುವ ಆಸಕ್ತಿಗಳು ಮತ್ತು ದೈನಂದಿನ ಚರ್ಚೆಯ ವಿಷಯಗಳನ್ನು ಪ್ರತಿಬಿಂಬಿಸುತ್ತದೆ ಎಂದು ಗೂಗಲ್ ತನ್ನ ವರದಿಯಲ್ಲಿ ತಿಳಿಸಿದೆ.