ಒಡಿಶಾದಲ್ಲಿ ಕೋಮು ಘರ್ಷಣೆ| ಭದ್ರಕ್‌ನಲ್ಲಿ ನಿಷೇಧಾಜ್ಞೆ,ಅಂತರ್ಜಾಲ 48 ಗಂಟೆ ಸ್ಥಗಿತ

Update: 2024-09-28 08:18 GMT

ಒಡಿಷಾದ ಭದ್ರಕ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರ ಫೇಸ್‌ಬುಕ್ ಪೋಸ್ಟ್‌ನಿಂದ ಕೋಮು ಘರ್ಷಣೆ ಸ್ಫೋಟಗೊಂಡಿದ್ದು, ಜಿಲ್ಲೆಯಲ್ಲಿ ಸೆಪ್ಟೆಂಬರ್ 30 ರವರೆಗೆ 48 ಗಂಟೆ ಕಾಲ ಸಾರ್ವಜನಿಕ ಸಭೆಗಳ ನಿಷೇಧ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಒಡಿಶಾದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸತ್ಯಬ್ರತ ಸಾಹು ಅವರು, ಫೇಸ್‌ಬುಕ್, ವಾಟ್ಸಾಪ್, ಎಕ್ಸ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ. 

ಪೊಲೀಸರೊಂದಿಗೆ ಘರ್ಷಣೆ: ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ವ್ಯಕ್ತಿಯನ್ನು ಬಂಧಿಸುವಂತೆ ಒತ್ತಾಯಿಸಿ, 600 ಕ್ಕೂ ಹೆಚ್ಚು ಪ್ರತಿಭಟನಾಕಾರರು ಸಾಂತಿಯಾ ಸೇತುವೆಯನ್ನು ಅಡ್ಡಗಟ್ಟಿದರು. ಗುಂಪು ಬಲವಂತವಾಗಿ ಮುನ್ನುಗ್ಗಲು ಆರಂಭಿಸಿದ ನಂತರ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು, ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಇದರಿಂದ ಡಿಎಸ್ಪಿ, ಸಬ್ ಇನ್ಸ್ಪೆಕ್ಟರ್ ಗಾಯಗೊಂಡರು ಮತ್ತು ಭದ್ರಕ್ ತಹಸೀಲ್ದಾರ್ ಅವರ ವಾಹನ ಹಾನಿಗೊಂಡಿತು. 

ಕೋಮು ಹಿಂಸಾಚಾರದ ಇತಿಹಾಸ: ಭದ್ರಕ್‌ಗೆ ಕೋಮು ಘರ್ಷಣೆಯ ಇತಿಹಾಸವಿದೆ. ಏಪ್ರಿಲ್ 2017 ರಲ್ಲಿ ಫೇಸ್‌ಬುಕ್‌ನಲ್ಲಿ ಇಂಥದ್ದೇ ಪೋಸ್ಟ್ ನಂತರ ಹಿಂಸಾಚಾರ ನಡೆದಿದ್ದು ಒಂದು ತಿಂಗಳಿಗೂ ಹೆಚ್ಚು ಕಾಲ ಕರ್ಫ್ಯೂ ಹೇರಲಾಯಿತು. 450 ಆಸ್ತಿಗಳಿಗೆ ಹಾನಿಯಾಗಿ, ಸುಮಾರು 9 ಕೋಟಿ ರೂ. ನಷ್ಟ ಸಂಭವಿಸಿತ್ತು.

Tags:    

Similar News