ನವದೆಹಲಿ, ಜೂನ್ 27 - ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಕಚೇರಿಗೆ ಕಾಂಗ್ರೆಸ್‌ನ ವಿದ್ಯಾರ್ಥಿ ವಿಭಾಗವಾದ ಎನ್‌ಎಸ್‌ಯುಐ ಸದಸ್ಯರು ನುಗ್ಗಿ, ದಾಂಧಲೆ ನಡೆಸಿದರು.
ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್‌ಎಸ್‌ಯುಐ) ಸದಸ್ಯರು ಓಖ್ಲಾದಲ್ಲಿರುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(ಎನ್ ಟಿಎ) ಕಚೇರಿಗೆ ನುಗ್ಗಿ, ʻಎನ್‌ಟಿಎ ಮುಚ್ಚಿʼ ಎಂದು ಘೋಷಣೆ ಕೂಗಿದರು. ಘಟನೆ ಬಗ್ಗೆ ಎನ್‌ಟಿಎ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಎನ್ ಎಸ್ ಯುಐ ಹಂಚಿಕೊಂಡ ಫೋಟೋಗಳಲ್ಲಿ ಎನ್‌ಎಸ್‌ಯುಐ ಸದಸ್ಯರು ಎನ್‌ಟಿಎ ಕಟ್ಟಡದೊಳಗೆ ಘೋಷಣೆ ಕೂಗುತ್ತಿರುವುದನ್ನು ತೋರಿಸಿದೆ.
ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಪದವಿಪೂರ್ವ), ನೀಟ್-ಯುಜಿ ಪರೀಕ್ಷೆ ಮೇ 5 ರಂದು ನಡೆಯಿತು. ಸುಮಾರು 24 ಲಕ್ಷ ಅಭ್ಯರ್ಥಿಗಳು ಭಾಗವಹಿಸಿದ್ದರು. ಜೂನ್ 4 ರಂದು ಫಲಿತಾಂಶ ಪ್ರಕಟಿಸಲಾಯಿತು. ಆದರೆ, ಆನಂತರ ಬಿಹಾರದಂತಹ ರಾಜ್ಯಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ, ಇತರ ಅಕ್ರಮಗಳ ಆರೋಪಗಳು ಕೇಳಿಬಂದವು.