NEET-UG 2024| ಕೌನ್ಸೆಲಿಂಗ್ ತಡೆಗೆ ಸುಪ್ರೀಂ ಕೋರ್ಟ್ ನಿರಾಕರಣೆ
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಎಸ್.ವಿ.ಎನ್. ಭಟ್ಟಿ ಅವರ ರಜಾಕಾಲದ ಪೀಠವು ವಿಚಾರಣೆಗೆ ಬಾಕಿ ಉಳಿದ ಇತರ ಅರ್ಜಿಗಳ ಜೊತೆಗೆ ಪರೀಕ್ಷೆಯಲ್ಲಿ ಅಕ್ರಮ ಕುರಿತ ಅರ್ಜಿಯ ವಿಚಾರಣೆಯನ್ನು ಜುಲೈ 8 ಕ್ಕೆ ಮುಂದೂಡಿತು.;
ಜುಲೈ 6 ರಂದು ಪ್ರಾರಂಭವಾಗುವ ಕೌನ್ಸೆಲಿಂಗ್‌ಗೆ ತಡೆ ನೀಡಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಕೌನ್ಸೆಲಿಂಗ್ ʻತೆರೆದ ಮತ್ತು ಮುಚ್ಚುವʼ ಪ್ರಕ್ರಿಯೆಯಲ್ಲ ಎಂದು ಹೇಳಿದೆ.
ಮೇ 5 ರಂದು ನಡೆದ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಪರೀಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ ಅರ್ಜಿಯ ಮೇರೆಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ), ಕೇಂದ್ರ ಸರ್ಕಾರ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಎಸ್.ವಿ.ಎನ್. ಭಟ್ಟಿ ಅವರ ರಜಾಕಾಲದ ಪೀಠವು ವಿಚಾರಣೆಗೆ ಬಾಕಿ ಉಳಿದ ಇತರ ಅರ್ಜಿಗಳ ಜೊತೆಗೆ ಪರೀಕ್ಷೆಯಲ್ಲಿ ಅಕ್ರಮ ಕುರಿತ ಅರ್ಜಿಯ ವಿಚಾರಣೆಯನ್ನು ಜುಲೈ 8 ಕ್ಕೆ ಮುಂದೂಡಿತು.
ಜುಲೈ 8 ರಂದು ಸುಪ್ರೀಂ ಕೋರ್ಟ್ ಈ ಎಲ್ಲಾ ಅರ್ಜಿಗಳ ವಿಚಾರಣೆಯನ್ನು ನಿಗದಿಪಡಿಸಿರುವುದರಿಂದ, ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಎರಡು ದಿನ ತಡೆಹಿಡಿಯ ಬಹುದು ಎಂದು ಅರ್ಜಿದಾರರ ಪರ ವಕೀಲರು ಒತ್ತಾಯಿಸಿದರು.
ʻಕೌನ್ಸೆಲಿಂಗ್‌ಗೆ ತಡೆ ಕೋರುವುದಿಲ್ಲ. ಜುಲೈ 8 ರಂದು ಮುಖ್ಯ ವಿಷಯವನ್ನು ಪಟ್ಟಿ ಮಾಡಿರುವುದರಿಂದ ಜುಲೈ 6 ರಂದು ನಡೆಯಲಿರುವ ಕೌನ್ಸೆಲಿಂಗ್ ಗೆ ಎರಡು ದಿನ ತಡೆ ನೀಡಬೇಕೆಂದು ಪ್ರಾರ್ಥಿಸುತ್ತೇನೆ,ʼ ಎಂದು ಹೇಳಿದರು.
ʻನಾವು ಇದನ್ನೇ ಹೇಳುತ್ತಿದ್ದೇವೆ. ಕೌನ್ಸೆಲಿಂಗ್ ತೆರೆದು ಮುಚ್ಚುವಿಕೆಯಲ್ಲ. ಜುಲೈ 6 ರಂದು ಆ ಪ್ರಕ್ರಿಯೆ ಪ್ರಾರಂಭವಾಗುತ್ತದೆ,ʼ ಎಂದು ಪೀಠ ಹೇಳಿ ತು. ಪೀಠ ಮೊದಲ ಸುತ್ತಿನ ಕೌನ್ಸೆಲಿಂಗ್ ನ ಕಾಲಾವಧಿ ಬಗ್ಗೆ ಕೇಳಿದಾಗ, ಸುಮಾರು ಒಂದು ವಾರ ಇರುತ್ತದೆ ಎಂದು ವಕೀಲರೊಬ್ಬರು ಹೇಳಿದರು.
ಕೌನ್ಸೆಲಿಂಗ್ ನ್ನು ಮುಂದೂಡಲು ನಿರಾಕರಿಸಿದ ಪೀಠ, ಎನ್‌ಟಿಎ, ಕೇಂದ್ರ ಸರ್ಕಾರ ಮತ್ತು ಇತರ ಪ್ರತಿವಾದಿಗಳ ಪರ ವಕೀಲರು ಎರಡು ವಾರಗಳಲ್ಲಿ ಮನವಿಗೆ ತಮ್ಮ ಪ್ರತಿಕ್ರಿಯೆ ಸಲ್ಲಿಸಬಹುದು ಎಂದು ಹೇಳಿತು.
ಪೀಠವು ಎನ್‌ಟಿಎಗೆ ಕೆಲವು ನಿರ್ದೇಶನ ಕೋರಿ ಸಲ್ಲಿಕೆಯಾಗಿದ್ದ ಪ್ರತ್ಯೇಕ ಅರ್ಜಿಯನ್ನೂ ಪರಿಶೀಲಿಸಿತು.
ಅರ್ಜಿದಾರರ ಪರ ವಕೀಲರು, ಜೂನ್ 23 ರಂದು ಮರು ಪರೀಕ್ಷೆ ನಡೆಯಲಿರುವ ವಿಷಯ ಪ್ರಸ್ತಾಪಿಸಿದರು; ಎನ್‌ಟಿಎ ಕೆಲವು ಮಾಹಿತಿಯನ್ನು ಮುಚ್ಚಿಟ್ಟಿದೆ ಎಂದು ಆರೋಪಿಸಿದರು. ನಂತರ ಪೀಠ, ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸಲು ಎನ್‌ಟಿಎ ವಕೀಲರಿಗೆ ಹೇಳಿತು. ವಿಚಾರಣೆಯನ್ನು ಜುಲೈ 8 ಕ್ಕೆ ಮುಂದೂಡಿತು.
ಅರ್ಜಿದಾರರ ವಕೀಲರು ಮರು ಪರೀಕ್ಷೆ ವಿಷಯವನ್ನು ಪ್ರಸ್ತಾಪಿಸಿ, ಅಭ್ಯರ್ಥಿಗಳು ಪರೀಕ್ಷೆಯನ್ನು ಹೊಸದಾಗಿ ಬರೆಯುವ ಒತ್ತಡಕ್ಕೆ ಒಳಗಾಗುತ್ತಾರೆ ಎಂದು ಹೇಳಿದರು.
ʻಮೇ 5ರ ಮುಖ್ಯ ಪರೀಕ್ಷೆಯನ್ನು ವಜಾಗೊಳಿಸುವ ಸಾಧ್ಯತೆ ಇದೆ. ಆಗ ಎಲ್ಲವೂ ಸರಿಹೋಗುತ್ತದೆ,ʼ ಎಂದು ಪೀಠ ಅಭಿಪ್ರಾಯಪಟ್ಟಿತು.
ʻನೀವು ಅವರ ಬಗ್ಗೆ ಚಿಂತೆ ಮಾಡುತ್ತಿದ್ದೀರಾ ಅಥವಾ ಪರೀಕ್ಷೆ ತೆಗೆದುಕೊಳ್ಳಲು ಅನುಮತಿ ಸಿಗದವರ ಬಗ್ಗೆ ಚಿಂತೆ ಮಾಡುತ್ತಿದ್ದೀರಾ?ʼ ಎಂದು ಪೀಠ ಕೇಳಿತು.
ʻಏನು ವಾದ ಇದು?ʼ ಎಂದು ಪ್ರಶ್ನಿಸಿತು.
ವೈದ್ಯಕೀಯ ಸಮಸ್ಯೆಯಿಂದ ಬಳಲುತ್ತಿರುವ ಅಭ್ಯರ್ಥಿಗೆ ಮರು ಪರೀಕ್ಷೆಗೆ ಹಾಜರಾಗಲು ಎನ್‌ಟಿಎಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ ಪ್ರತ್ಯೇಕ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪರಿಗಣಿಸಿದೆ.
1,563 ಅಭ್ಯರ್ಥಿಗಳಿಗೆ ಮರು ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡುವ ನಿರ್ಧಾರಕ್ಕೆ ಮೊದಲು ಅರ್ಜಿದಾರರು ಮರು ಪರೀಕ್ಷೆಗೆ ಹಾಜರಾಗಲು ಎನ್‌ಟಿಎ ಗೆ ಪ್ರಾತಿನಿಧ್ಯ ಕಳುಹಿಸಿದ್ದಾರೆ. ಅರ್ಜಿದಾರರು ತೆಲಂಗಾಣ ಹೈಕೋರ್ಟ್‌ಗೆ ರಿಟ್ ಸಲ್ಲಿಸಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ಹೇಳಿದರು.
ʻತೆಲಂಗಾಣ ಹೈಕೋರ್ಟಿನಲ್ಲಿ ಸಂಜೆಯೊಳಗೆ ನಿರ್ಧರಿಸುವುದಾಗಿ ಎನ್‌ಟಿಎ ಹೇಳಿಕೆ ನೀಡಿದೆ. ಆ ಆಧಾರದ ಮೇಲೆ ಅರ್ಜಿಯನ್ನು ಹಿಂತೆಗೆದುಕೊಳ್ಳಲು ಅನುಮತಿಸಲಾಗಿದೆ,ʼ ಎಂದು ಪೀಠ ಹೇಳಿದೆ.
ಅರ್ಜಿದಾರರು ತಮ್ಮ ಪ್ರಾತಿನಿಧ್ಯದ ಬಗ್ಗೆ ಇಂದು ಬೆಳಿಗ್ಗೆಯವರೆಗೆ ಎನ್‌ಟಿಎಯಿಂದ ಯಾವುದೇ ಪ್ರತಿಕ್ರಿಯೆಯನ್ನು ಸ್ವೀಕರಿಸಿಲ್ಲ ಎಂದು ಅದು ಹೇಳಿದೆ.
ಸಂಜೆ 4 ಗಂಟೆಯೊಳಗೆ ನಿರ್ಧಾರ ತೆಗೆದುಕೊಳ್ಳುವಂತೆ ಮತ್ತು ಅರ್ಜಿದಾರರಿಗೆ ಇ-ಮೇಲ್ ಮೂಲಕ ತಿಳಿಸುವಂತೆ ಎನ್‌ಟಿಎಗೆ ಸುಪ್ರೀಂ ಕೋರ್ಟ್ ತಿಳಿಸಿದೆ.