ಪತ್ರಕರ್ತರು ಗುಲಾಮರು ಎಂಬ ರಾಹುಲ್ ಗಾಂಧಿ ಹೇಳಿಕೆ ಖಂಡಿಸಿದ ಮುಂಬೈ ಪ್ರೆಸ್‌ಕ್ಲಬ್
ಮಹಾರಾಷ್ಟ್ರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್, ಕೆಲವು ವರದಿಗಾರರನ್ನು ಉಲ್ಲೇಖಿಸಿ ಅವರನ್ನು "ತಮ್ಮ ಮಾಲೀಕರ ಗುಲಾಮರು" ಎಂದು ಹೇಳಿದ್ದರು. ಈ ಹೇಳಿಕೆ ಟೀಕೆಗೆ ಗುರಿಯಾಗಿದೆ .
ಕಾರ್ಯನಿರತ ಪತ್ರಕರ್ತರ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿರುವ ʼಗುಲಾಮರುʼ ಎಂಬ ಹೇಳಿಕೆಯನ್ನು "ಅತಿರೇಕದ ವರ್ತನೆ" ಎಂದು ಮುಂಬೈ ಪ್ರೆಸ್ ಕ್ಲಬ್ ಖಂಡಿಸಿದೆ. ಅವರು ಪದೇ ಪದೇ ಪತ್ರಕರ್ತರನ್ನು ಗುರಿಯಾಗಿಸುತಿದ್ದಾರೆ ಎಂದು ಗಂಭೀರ ಕಳವಳ ವ್ಯಕ್ತಪಡಿಸಿದೆ.
ಅವರ ಪಕ್ಷವು ಅಧಿಕಾರಕ್ಕೆ ಬಂದರೆ ಮಾಧ್ಯಮಗಳನ್ನು ಹೇಗೆ ನಡೆಸಿಕೊಳ್ಳಬಹುದು ಎಂಬ ಬಗ್ಗೆ ನಾವು ಆತಂಕಕ್ಕೆ ಒಳಗಾಗಿದ್ದೇವೆ ಎಂದು ಮುಂಬೈ ಪ್ರೆಸ್ ಕ್ಲಬ್ ಹೇಳಿದೆ.
ರಾಹುಲ್ ಹೇಳಿದ್ದೇನು?
ಮಹಾರಾಷ್ಟ್ರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್, ಕೆಲವು ವರದಿಗಾರರನ್ನು ಉಲ್ಲೇಖಿಸಿ ಅವರನ್ನು "ತಮ್ಮ ಮಾಲೀಕರ ಗುಲಾಮರು" ಎಂದು ಹೇಳಿದ್ದರು. ಅದು ಟೀಕೆಗೆ ಗುರಿಯಾಗಿದೆ .
ಮುಂದುವರಿದಿದ್ದ ರಾಹುಲ್, ಅದು ಪತ್ರಕರ್ತರ ತಪ್ಪಲ್ಲ "ನಾನು ಅವರನ್ನು ಇಷ್ಟಪಡುತ್ತೇನೆ. ಅವರು ಕೆಲಸ ಮಾಡಬೇಕು, ಸಂಬಳ ಪಡೆಯಬೇಕು, ತಮ್ಮ ಮಕ್ಕಳ ಶಿಕ್ಷಣಕ್ಕೆ ನೆರವಾಗಬೇಕು. ಆದರೂ ಪತ್ರಕರ್ತರು ಮಾಲೀಕರ ಕಾರಣಕ್ಕೆ ಗುಲಾಮರಾಗಿದ್ದಾರೆ" ಎಂದು ಹೇಳಿಕೆ ನೀಡಿದ್ದರು. .
ಪ್ರತಿಯಾಗಿ ಸೋಷಿಯಲ್ ಮೀಡಿಯಾ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಮುಂಬೈ ಪ್ರೆಸ್ ಕ್ಲಬ್, ಭಾರತದಲ್ಲಿ ಕಾರ್ಯನಿರತ ಪತ್ರಕರ್ತರು ಎದುರಿಸುತ್ತಿರುವ ಸವಾಲುಗಳ ಮೂಲ ಕಾರಣಗಳು ಮತ್ತು ಒಟ್ಟಾರೆ ಪತ್ರಿಕೋದ್ಯಮದ ಸ್ಥಿತಿಯ ಬಗ್ಗೆ ಎಂದಾದರೂ ಚರ್ಚಿಸಿದ್ದೀರಾ ಎಂದು ರಾಹುಲ್ ಅವರನ್ನು ಪ್ರಶ್ನಿಸಿದೆ .
ಪತ್ರಕರ್ತರ ಗುತ್ತಿಗೆ
1980ರ ದಶಕದ ಉತ್ತರಾರ್ಧದಲ್ಲಿ ಮತ್ತು 1990ರ ದಶಕದ ಆರಂಭದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಪರಿಚಯಿಸಿದ ನವ ಉದಾರವಾದಿ ನೀತಿಗಳಿಂದ ಪತ್ರಿಕೋದ್ಯಮದಲ್ಲಿ "ಮಿತಿಮೀರಿದ ಗುತ್ತಿಗೆ ನೀತಿ" ಪರಿಚಯಗೊಂಡಿತು. ಅದರಿಂದಾಗಿ ಪತ್ರಕರ್ತರು ಅನಿಶ್ಚಿತತೆ ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
"ಅಲ್ಲಿಯವರೆಗೆ, ಪತ್ರಕರ್ತರು ತಮ್ಮ ಹಕ್ಕುಗಳಿಗಾಗಿ ಹೋರಾಡಿದ್ದರು" ಎಂದು ಎಕ್ಸ್ ಪೋಸ್ಟ್‌ನಲ್ಲಿ ಅದು ಹೇಳಿದೆ. ಹೊಸ ಗುತ್ತಿಗೆ ಕ್ರಮವು ಏಕಸ್ವಾಮ್ಯ ಹೊಂದಿರುವ ಮಾಧ್ಯಮ ಸಂಸ್ಥೆಗಳಿಗೆ ತಮ್ಮ ಸ್ವಂತ ಇಚ್ಛೆಯಂತೆ ಪತ್ರಕರ್ತರನ್ನು ವಜಾಗೊಳಿಸಲು ಅವಕಾಶ ಮಾಡಿಕೊಟ್ಟಿದೆ. ಪತ್ರಕರ್ತರ ಸಂಘಟನೆಗಳನ್ನು ಶಿಥಿಲಗೊಳಿಸಿದೆ ಮತ್ತು ಪತ್ರಕರ್ತರನ್ನು ದುರ್ಬಲರನ್ನಾಗಿ ಮಾಡಿದೆ ಎಂದು ಹೇಳಿದ್ದಾರೆ .
ಪತ್ರಕರ್ತರು ಎದುರಿಸುತ್ತಿರುವ ಸವಾಲುಗಳು
ಮಾಧ್ಯಮ ಮಾಲೀಕರು ಮತ್ತು ಉದ್ಯಮದೊಳಗಿನ ರಚನಾತ್ಮಕ ಸಮಸ್ಯೆಗಳ ಕಡೆಗೆ ತಮ್ಮ ಟೀಕೆಯನ್ನು ತಿರುಗಿಸುವಂತೆ ಪ್ರೆಸ್‌ಕ್ಲಬ್ ರಾಹುಲ್ ಅವರನ್ನು ಒತ್ತಾಯಿಸಿದೆ. .
ನಿರುದ್ಯೋಗಿ ಮತ್ತು ಕನಿಷ್ಠ ವೇತನ ಉದ್ಯೋಗದಲ್ಲಿರುವ ಪತ್ರಕರ್ತರು ಯಾವಾಗಲೂ ಕೆಲಸದಿಂದ ತೆಗೆಯುವ ಬೆದರಿಕೆಯ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ರಾಹುಲ್ ಗಮನ ಸೆಳೆಯಲಾಗಿದೆ.
ಕಾರ್ಯನಿರತ ಪತ್ರಕರ್ತರು ತಮ್ಮ ವೈಯಕ್ತಿಕ ಅಪಾಯದಲ್ಲಿ, ವ್ಯವಸ್ಥೆಯ ವಿರುದ್ಧ ದಂಗೆ ಏಳುತ್ತಾರೆ ಎಂದು ನಿರೀಕ್ಷಿಸುವುದು ಅವಾಸ್ತವಿಕ ಎಂದು ಪತ್ರದಲ್ಲಿ ಬರೆಯಲಾಗಿದೆ .
ಮಾಧ್ಯಮಗಳ ಬಗ್ಗೆ ಪ್ರಸ್ತುತ ಸರ್ಕಾರದ ಸರ್ವಾಧಿಕಾರಿ ಪ್ರವೃತ್ತಿಗಳು ಒಡ್ಡಿರುವ "ಅಪಾರ ಸವಾಲುಗಳ" ಬಗ್ಗೆ ಪ್ರಸ್ ಕ್ಲಬ್ ಕಳವಳ ವ್ಯಕ್ತಪಡಿಸಿದೆ. ರಾಹುಲ್ ಪದೇ ಪದೇ ಪತ್ರಕರ್ತರನ್ನು ಗುರಿಯಾಗಿಸುವುದನ್ನು ಸರಿಯಲ್ಲ ಎಂದಿದೆ.
"ಅವರ ವಾಕ್ಚಾತುರ್ಯವು ಅವರ ಪಕ್ಷವು ಅಧಿಕಾರಕ್ಕೆ ಮರಳಿದರೆ ಪತ್ರಿಕೆಗಳನ್ನು ಹೇಗೆ ನೋಡಿಕೊಳ್ಳಬಹುದು ಎಂಬ ಕಳವಳಗಳನ್ನು ಹುಟ್ಟುಹಾಕುತ್ತದೆ. ಬಹಿರಂಗ ಪತ್ರಿಕಾಗೋಷ್ಠಿಗಳನ್ನು ತಪ್ಪಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸರಿಯಾಗಿ ಟೀಕಿಸಿದರೆ, ರಾಹುಲ್ ಗಾಂಧಿ ಅವರು ಪತ್ರಕರ್ತರನ್ನು ಪದೇ ಪದೇ ಅಪಹಾಸ್ಯ ಮಾಡುವುದು ಖಂಡನೆಗೆ ಅರ್ಹ" ಎಂದು ಅದು ಹೇಳಿದೆ.