ದೂರದೃಷ್ಟಿಯ ಬಜೆಟ್ ಎಂದ ಮೋದಿ: ಕುರ್ಚಿ ಉಳಿಸಿಕೊಳ್ಳುವ ಬಜೆಟ್ ಎಂದ ರಾಹುಲ್

Update: 2024-07-23 04:43 GMT
Live Updates - Page 2
2024-07-23 08:09 GMT

ಪಂಜಾಬ್‌ನ ಕಾಂಗ್ರೆಸ್ ಸಂಸದರು ಬಜೆಟ್‌ನಲ್ಲಿ ರಾಜ್ಯದ ಪ್ರಸ್ತಾಪವಿಲ್ಲದ ಕಾರಣ ಸಂಸತ್ ಭವನದಲ್ಲಿ ಪ್ರತಿಭಟನೆ ನಡೆಸಿದರು.

2024-07-23 08:09 GMT

 'ಹಲವು ವಿಷಯಗಳು ಕಾಣೆಯಾಗಿವೆ': ಬಜೆಟ್ ಕುರಿತು ಶಶಿ ತರೂರ್ ಹೇಳಿಕೆ

2024-07-23 07:57 GMT

ಬಜೆಟ್ ಭಾಷಣವು ಕಾರ್ಯರೂಪಕ್ಕೆ ತರುವುದಕ್ಕಿಂತ ನಾಟಕೀಯ ಪ್ರದರ್ಶನದ ಮೇಲೆ ಹೆಚ್ಚು ಕೇಂದ್ರೀಕೃತವಾಗಿದೆ: ಕಾಂಗ್ರೆಸ್

2024-07-23 07:52 GMT

ಆದಾಯ ತೆರಿಗೆ ಕಾಯಿದೆಯ ಸಮಗ್ರ ಪರಿಶೀಲನೆಯನ್ನು ಸರ್ಕಾರ ಕೈಗೊಳ್ಳಲಿದೆ.

2024-07-23 07:49 GMT

ಈ ಬಜೆಟ್‌ನಲ್ಲಿ ಪ್ರಸ್ತಾಪಿಸಲಾದ ಬದಲಾವಣೆಗಳಿಂದಾಗಿ ಹೊಸ ತೆರಿಗೆ ಅಡಿಯಲ್ಲಿ ಸಂಬಳ ಪಡೆಯುವ ಉದ್ಯೋಗಿಗಳು ವಾರ್ಷಿಕವಾಗಿ 17,500 ರೂಪಾಯಿಗಳನ್ನು ತೆರಿಗೆಯಲ್ಲಿ ಉಳಿಸುತ್ತಾರೆ.

2024-07-23 07:48 GMT

ಸರ್ಕಾರವು ಶೇ. 2  ಸಮೀಕರಣ ಶುಲ್ಕವನ್ನು ಹಿಂತೆಗೆದುಕೊಂಡಿದೆ.

2024-07-23 07:46 GMT

ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು 50 ಸಾವಿರದಿಂದ 75 ಸಾವಿರಕ್ಕೆ ಸರ್ಕಾರ ಹೆಚ್ಚಿಸಿಸಲಾಗಿದೆ. ಕುಟುಂಬ ಪಿಂಚಣಿ ಮೇಲಿನ ವಿನಾಯಿತಿ ಮಿತಿಯನ್ನು 15 ಸಾವಿರದಿಂದ 25 ಸಾವಿರಕ್ಕೆ ಹೆಚ್ಚಿಸಲಾಗುತ್ತಿದೆ. ಈ ಎರಡು ಬದಲಾವಣೆಗಳಿಂದ ನಾಲ್ಕು ಕೋಟಿ ನೌಕರರು ಮತ್ತು ಪಿಂಚಣಿದಾರರಿಗೆ ಅನುಕೂಲವಾಗಲಿದೆ ಎಂದು ಹಣಕಾಸು ಸಚಿವರು ಹೇಳಿದರು.

2024-07-23 07:44 GMT

ಕಿರಿಯ ವಿದ್ಯಾರ್ಥಿಗಳಿಗೆ ಎನ್.ಪಿ.ಎಸ್

2024-07-23 07:42 GMT

ಪರಿಷ್ಕೃತ ಹೊಸ ತೆರಿಗೆ ಪದ್ಧತಿ

0-3 ಲಕ್ಷ ರೂ. ಆದಾಯಕ್ಕೆ ತೆರಿಗೆ ಇಲ್ಲ

3 ರಿಂದ 7 ಲಕ್ಷ ರೂ. ವರೆಗಿನ ಆದಾಯದ ಮೇಲೆ ಶೇಕಡಾ 5 ರಷ್ಟು ತೆರಿಗೆ

7 ರಿಂದ 10 ಲಕ್ಷ ರೂ. ವರೆಗಿನ ಆದಾಯದ ಮೇಲೆ ಶೇ 10 ತೆರಿಗೆ

10-12 ಲಕ್ಷ ರೂ. ವರೆಗೆ ಆದಾಯದ ಮೇಲೆ ಶೇ 15 ತೆರಿಗೆ

12-15 ಲಕ್ಷ ರೂ. ವರೆಗೆ ಆದಾಯದ ಮೇಲೆ ಶೇ 20 ತೆರಿಗೆ

15 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತದ ಆದಾಯಕ್ಕೆ ಶೇ 30 ತೆರಿಗೆ

2024-07-23 07:41 GMT

ಸದ್ಯ ಮೂರನೇ 2 ಭಾಗದಷ್ಟು ಜನರು ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿದ್ದಾರೆ ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ.

ತೆರಿಗೆ ವ್ಯವಸ್ಥೆಯ ಬಗ್ಗೆ ಮಾತನಾಡಿದ ನಿರ್ಮಲಾ ಸೀತಾರಾಮನ್, ವಿವಿಧ ಪಾವತಿಗಳಿಗೆ ಐದು ಪ್ರತಿಶತ ಟಿಡಿಎಸ್ ಬದಲಿಗೆ ಎರಡು ಪ್ರತಿಶತ ಟಿಡಿಎಸ್ ಅನ್ನು ಒದಗಿಸಲಾಗುತ್ತದೆ ಎಂದರು. ಮ್ಯೂಚುವಲ್ ಫಂಡ್ ಅಥವಾ ಯುಟಿಐ ಮರುಖರೀದಿಯಲ್ಲಿ ಟಿಡಿಎಸ್ ಅನ್ನು ಶೇಕಡಾ 20ರಷ್ಟು ಹಿಂಪಡೆಯಲಾಗಿದೆ. ಇ-ಕಾಮರ್ಸ್ ಆಪರೇಟರ್‌ಗಳಿಗೆ TDS ಅನ್ನು ಶೇಕಡಾ 1 ರಿಂದ 0.1 ಕ್ಕೆ ಇಳಿಸಲಾಗಿದೆ. ಅಲ್ಲದೆ, ಟಿಡಿಎಸ್ ತುಂಬುವಲ್ಲಿ ವಿಳಂಬವನ್ನು ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ ಎಂದರು.

Tags:    

Similar News