ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ಸದಸ್ಯರು ಸೆಪ್ಟೆಂಬರ್ 18 ರಿಂದ 20 ರವರೆಗೆ ಸೀಟು ಹಂಚಿಕೆ ಮಾತುಕತೆ ನಡೆಸಲಿದ್ದಾರೆ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಮಂಗಳವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಸ್ಪರ್ಧಿಸುವ ಸ್ಥಾನಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಸಭೆಯಲ್ಲಿ ನಿರ್ಧರಿಸಿದ ಸೂತ್ರ ಅಂತಿಮವಾಗಿ ರುತ್ತದೆ. ಮಾತುಕತೆ ಮೂರು ದಿನ ನಡೆಯಲಿದೆ. ಗೆಲ್ಲುವ ಸಾಮರ್ಥ್ಯವೇ ಸೀಟುಗಳನ್ನು ನಿರ್ಧರಿಸುವ ಮಾನದಂಡ ಎಂದು ಹೇಳಿದರು.
ಎಂವಿಎಯಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ), ಶರದ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎಸ್‌ಪಿ) ಮತ್ತು ಕಾಂಗ್ರೆಸ್ ಇದೆ. ಆಡಳಿತಾರೂಢ ಮಹಾಯುತಿಯಲ್ಲಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ, ಬಿಜೆಪಿ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಇದೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎನ್‌ಸಿಪಿ (ಎಸ್‌ಪಿ) ಗೆಲುವಿನ ದರವು ಶಿವಸೇನೆ (ಯುಬಿಟಿ) ಗಿಂತ ಹೆಚ್ಚು ಇದೆ ಎಂದು ಹೇಳಿದಾಗ, ತಮ್ಮ ಪಕ್ಷದ ಮತಗಳನ್ನು ಈ ಎರಡು ಪಕ್ಷಗಳಿಗೆ ದೊಡ್ಡ ರೀತಿಯಲ್ಲಿ ವರ್ಗಾಯಿಸಲಾಗಿದೆ. ಶಿವಸೇನೆ ತನ್ನ ಸಾಂಪ್ರದಾಯಿಕ ಕ್ಷೇತ್ರಗಳಾದ ಕೊಲ್ಹಾಪುರ, ಅಮರಾವತಿ ಮತ್ತು ರಾಮ್‌ಟೆಕ್ ಸ್ಥಾನಗಳನ್ನು ಕಾಂಗ್ರೆಸ್‌ಗೆ ಕೊಟ್ಟಿದೆ. ಈ ಸ್ಥಾನಗಳಲ್ಲಿ ಶಿವಸೇನೆ (ಯುಬಿಟಿ) ಖಂಡಿತವಾಗಿಯೂ ಗೆಲ್ಲುತ್ತಿತ್ತು,ʼ ಎಂದು ರಾವತ್ ಹೇಳಿದರು.
ʻಶಿವಸೇನೆ ಕಾರ್ಯಕರ್ತರು ಬಾರಾಮತಿ ಸ್ಥಾನ ಸೇರಿದಂತೆ ಎನ್‌ಸಿಪಿ (ಎಸ್‌ಪಿ) ಗೆಲುವುಗಾಗಿ ಶ್ರಮಿಸಿದ್ದಾರೆ. ನಾವು ಕಾಂಗ್ರೆಸ್-ಎನ್‌ಸಿಪಿ ಮತಗಳನ್ನು ಕೂಡ ಒಪ್ಪಿಕೊಳ್ಳಬೇಕು,ʼ ಎಂದು ರಾವತ್ ಹೇಳಿದರು.
ನವೆಂಬರ್ ಎರಡನೇ ವಾರದಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ.