ಮಹಾರಾಷ್ಟ್ರ: ಸರ್ಕಾರಿ ಸಿಬ್ಬಂದಿಗೆ ಏಕೀಕೃತ ಪಿಂಚಣಿ ಯೋಜನೆ

ಯುಪಿಎಸ್ ಅಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರು ಉದ್ಯೋಗದ ಕೊನೆಯ 12 ತಿಂಗಳುಗಳ ಸರಾಸರಿ ವೇತನದ ಶೇ.50 ಮೊತ್ತವನ್ನು ಪಿಂಚಣಿಯಾಗಿ ಪಡೆಯುತ್ತಾರೆ.;

Update: 2024-08-26 08:20 GMT

ಮಹಾರಾಷ್ಟ್ರ ಸರ್ಕಾರವು ನೌಕರರಿಗೆ ಹೊಸ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್)ಗೆ ಬದಲಿಸಿಕೊಳ್ಳುವ ಅವಕಾಶ ನೀಡಲು ಮುಂದಾಗಿದೆ. ಆಮೂಲಕ ಅಂಥ ನಿರ್ಧಾರ ತೆಗೆದುಕೊಂಡ ಮೊದಲ ರಾಜ್ಯ ಆಗಲಿದೆ. 

ಕೇಂದ್ರ ಸಚಿವ ಸಂಪುಟವು ಕೇಂದ್ರ ಸರ್ಕಾರಿ ನೌಕರರಿಗೆ ಯುಪಿಎಸ್ ನ್ನು ಶನಿವಾರ ಅನುಮೋದಿಸಿತು. ಇದರಲ್ಲಿ ನೌಕರರು ಉದ್ಯೋಗದ ಕೊನೆಯ 12 ತಿಂಗಳುಗಳ ಸರಾಸರಿ ವೇತನದ ಶೇ. 50 ಪಿಂಚಣಿ ಪಡೆಯುತ್ತಾರೆ. ಸುಮಾರು 23 ಲಕ್ಷ ಕೇಂದ್ರ ಸರ್ಕಾರಿ ನೌಕರರು ಯುಪಿಎಸ್ ನಿಂದ ಪ್ರಯೋಜನ ಪಡೆಯಲಿದ್ದಾರೆ. 

ಎಲ್ಲ ರಾಜ್ಯ ಸರ್ಕಾರಗಳು ತಮ್ಮ ಉದ್ಯೋಗಿಗಳಿಗೆ ಹೊಸ ಪಿಂಚಣಿ ಯೋಜನೆ ವಿಸ್ತರಿಸಿದರೆ, ಸಂಖ್ಯೆ ಸುಮಾರು 90 ಲಕ್ಷಕ್ಕೆ ಏರಬಹುದು.

Tags:    

Similar News