ಎಸ್.ಎಂ.ಕೃಷ್ಣ v/s ಎಚ್.ಡಿ.ದೇವೇಗೌಡ; ಒಕ್ಕಲಿಗ ರಾಜಕೀಯದಲ್ಲಿ ಪ್ರಭಾವ ಗಿಟ್ಟಿಸಲು ನಡೆಸಿದ ಸ್ಪರ್ಧೆಯೇ ರೋಚಕ

ಸಮುದಾಯದೊಳಗೆ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಕೃಷ್ಣ, ಆಗಾಗ್ಗೆ ಒಕ್ಕಲಿಗ ನೆಲೆಯನ್ನು ಆಕರ್ಷಿಸಲು ಪ್ರಯತ್ನಿಸಿದ್ದರು. ಆದರೆ "ಸೂಟ್-ಬೂಟ್" ನಾಯಕ ಎಂದು ಅವರಿಗಿದ್ದ ಹಣೆಪಟ್ಟಿ ಸಮುದಾಯಕ್ಕೆ ಹತ್ತಿರವಾಗಲು ಬಿಡಲಿಲ್ಲ.;

Update: 2024-12-11 08:49 GMT
HD Devegowda, SM Krishna

ಕರ್ನಾಟಕದ ಒಕ್ಕಲಿಗ ಸಮುದಾಯದ ಮೇರು ವ್ಯಕ್ತಿಗಳಾಗಿರುವ ಎಚ್.ಡಿ.ದೇವೇಗೌಡ ಮತ್ತು ಎಸ್.ಎಂ.ಕೃಷ್ಣ ಅವರು ಹಳೆ ಮೈಸೂರು ಪ್ರಾಂತ್ಯದಲ್ಲಿ ಸಂಕೀರ್ಣ ಹಾಗೂ ಸ್ಪರ್ಧಾತ್ಮಕ ಸಂಬಂಧವನ್ನು ಹೊಂದಿದ್ದರು. ರಾಜಕೀಯವಾಗಿ ಮಹತ್ವದ ಕೇಂದ್ರವಾಗಿರುವ ಹಳೆಯ ಮೈಸೂರು ಪ್ರದೇಶದಲ್ಲಿ ತಮ್ಮ ಪ್ರಭಾವ ಬೀರಲು ಯತ್ನಿಸಿದ್ದರು. ಒಂದು ವರ್ಷ ಚಿಕ್ಕವರಾಗಿದ್ದರೂ ಒಕ್ಕಲಿಗರಲ್ಲಿ ನಾಯಕರಾಗಿ ದೇವೇಗೌಡರು ಸ್ಥಾಪಿಸಿದ ಸ್ಥಾನಮಾನವು ಕೃಷ್ಣ ಅವರ ರಾಜಕೀಯ ಮಹತ್ವಾಕಾಂಕ್ಷೆಗಳ ಮೇಲೆ ದೀರ್ಘ ಪರಿಣಾಮ ಬೀರಿತ್ತು.

ಸಮುದಾಯದೊಳಗೆ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಕೃಷ್ಣ, ಆಗಾಗ್ಗೆ ಒಕ್ಕಲಿಗ ನೆಲೆಯನ್ನು ಆಕರ್ಷಿಸಲು ಪ್ರಯತ್ನಿಸಿದ್ದರು. ಆದರೆ "ಸೂಟ್-ಬೂಟ್" ನಾಯಕ ಎಂದು ಅವರಿಗಿದ್ದ ಹಣೆಪಟ್ಟಿ ಸಮುದಾಯಕ್ಕೆ ಹತ್ತಿರವಾಗಲು ಬಿಡಲಿಲ್ಲ. ತಳಮಟ್ಟದ ಸಮಸ್ಯೆಗಳಿಂದ ಅವರು ಪ್ರತ್ಯೇಕ ಎಂಬುದರ ಸಂಕೇತವಾಗಿತ್ತು. ಈ ಟೀಕೆಯು ದೇವೇಗೌಡರ ದೀರ್ಘಕಾಲದ ಪ್ರಭಾವ ಮತ್ತು ವಿಶ್ವಾಸಾರ್ಹತೆಗೆ ನಿಷ್ಠರಾಗಿದ್ದ ಒಕ್ಕಲಿಗರ ಶಾಶ್ವತ ಬೆಂಬಲ ಪಡೆಯುವ ಅವರ ಪ್ರಯತ್ನಗಳಿಗೆ ಅಡಚಣೆ ಉಂಟು ಮಾಡಿತು.

ಜನವರಿ 4, 2020ರಂದು ಪ್ರಕಟವಾದ ಕೃಷ್ಣ ಅವರ ಆತ್ಮಚರಿತ್ರೆ, ಸ್ಮೃತಿ ವಾಹಿನಿಯಲ್ಲಿ ಅವರಿಬ್ಬರ ಸಂಬಂಧದ ಬಗ್ಗೆ ಬೆಳಕು ಚೆಲ್ಲಲಾಗಿದೆ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ (1999-2004) ಅವರ ನಡುವಿನ ಮಾತುಕತೆಗಳನ್ನು ದಾಖಲಿಸಲಾಗಿದೆ. ವರ್ಗಾವಣೆಯಂತಹ ವಿಷಯಗಳಿಗೆ ದೇವೇಗೌಡರು ಆಗಾಗ್ಗೆ ತಮ್ಮನ್ನು ಸಂಪರ್ಕಿಸುತ್ತಿದ್ದರು. ಆದರೆ, ತಮ್ಮ ಸಂಬಂಧ ಎಂದಿಗೂ ಬೆಳೆಯಲಿಲ್ಲ ಎಂದು ಬಹಿರಂಗಪಡಿಸಿದ್ದರು. ನಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಪ್ರಯತ್ನಗಳನ್ನು ಮಾಡಬಹುದಿತ್ತು ಎಂದು ಎಸ್​ಎಂ ಕೃಷ್ಣ ಒಪ್ಪಿಕೊಂಡಿದ್ದಾರೆ. ಮುಂದುವರಿದ ಅವರು ಅಧಿಕಾರದಲ್ಲಿದ್ದಾಗ ದೇವೇಗೌಡರು ತಮ್ಮನ್ನು ಎಂದೂ ಸಹಾನುಭೂತಿಯಿಂದ ಕಾಣಲಿಲ್ಲ ಎಂದು ಹೇಳಿದ್ದರು.

1999ರಲ್ಲಿ ದೇವೇಗೌಡರು ಮಂಜೂರು ಮಾಡಿದ ಒಪ್ಪಂದದ ಬಗ್ಗೆ ಸಿಬಿಐ ತನಿಖೆಗೆ ಶಿಫಾರಸು ಮಾಡುವ ಕಡತವೊಂದು ತಮ್ಮ ಮೇಜಿನ ಬಳಿ ಬಂದ ಕ್ಲಿಷ್ಟಕರ ಕ್ಷಣವನ್ನು ಕೃಷ್ಣ ನೆನಪಿಸಿಕೊಂಡಿದ್ದಾರೆ. ಆತ್ಮಚರಿತ್ರೆಯಲ್ಲಿ ಕೃಷ್ಣ ಅವರು "ವೈಯಕ್ತಿಕ ದ್ವೇಷ ಸಾಧಿಸುತ್ತಾ ಕೂತರೆ, ಸಾರ್ವಜನಿಕ ಜೀವನದಲ್ಲಿ ಯಾರಿಗೂ ಶಾಂತಿ ಸಿಗುವುದಿಲ್ಲ" ಎಂಬುದನ್ನು .

ಕೃಷ್ಣ ಅವರ ಹೇಳಿಕೆಗೆ ದೇವೇಗೌಡರ ಪ್ರತಿಕ್ರಿಯೆ ರಕ್ಷಣಾತ್ಮಕವಾಗಿತ್ತು. ತಮ್ಮ ಖ್ಯಾತಿ ಹಾಳುಮಾಡುವ ಕೃಷ್ಣ ಅವರ ಪ್ರಯತ್ನಗಳನ್ನು ಅವರು ನಿರಾಕರಿಸಿದ್ದರು. ಅಂತಹ ಟೀಕೆಗಳು ಅವರಿಗೆ ಮುಖ್ಯವಲ್ಲ ಎಂದು ಒತ್ತಿ ಹೇಳಿದ್ದರು. ರಾಜಕೀಯ ಒತ್ತಡದ ಹೊರತಾಗಿಯೂ 1994ರಲ್ಲಿ ಕೃಷ್ಣ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡುವಲ್ಲಿ ತಾವು ವಹಿಸಿದ್ದ ಪಾತ್ರವನ್ನು ಅವರು ನೆನಪಿಸಿಕೊಂಡಿದ್ದರು. ಇದು ಕೃಷ್ಣ ಅವರ ರಾಜಕೀಯ ಬೆಳವಣಿಗೆಯಲ್ಲಿ ನೈಜ ಬೆಂಬಲ ಎಂದು ವಾದಿಸಿದ ದೇವೇಗೌಡರು ಮುಖ್ಯಮಂತ್ರಿಯಾಗಿ ಕೃಷ್ಣ ಅವರ ಅಧಿಕಾರಾವಧಿಯು ಒಕ್ಕಲಿಗ ನಾಯಕನಾಗಿ ಐತಿಹಾಸಿಕವಾಗಿದ್ದರೂ, ಗಮನಾರ್ಹ ಸಾಧನೆಗಳನ್ನು ಮಾಡಿಲ್ಲ ಎಂದು ಹೇಳಿದ್ದರು.

ಸತತ ಪೈಪೋಟಿ 

ಎಚ್.ಡಿ. ದೇವೇಗೌಡ ಮತ್ತು ಎಸ್.ಎಂ.ಕೃಷ್ಣ ಅವರ ನಡುವಿನ ರಾಜಕೀಯ ವೈರತ್ವವು ಕರ್ನಾಟಕದ ಮುಂದಿನ ಪೀಳಿಗೆಯ ನಾಯಕತ್ವದ ಮೇಲೆ ಪ್ರಭಾವ ಬೀರುವ ಅವರ ವೈಯಕ್ತಿಕ ಮಹತ್ವಾಕಾಂಕ್ಷೆಗಳನ್ನು ಮೀರಿ ವಿಸ್ತರಿಸಿತ್ತು. ದೇವೇಗೌಡರ ಮಗ ಎಚ್.ಡಿ.ಕುಮಾರಸ್ವಾಮಿ ಮತ್ತು ಕೃಷ್ಣ ಅವರ ನೀಲಿ ಕಣ್ಣಿನ ಹುಡುಗ ಡಿ.ಕೆ.ಶಿವಕುಮಾರ್ ತಮ್ಮ ತಮ್ಮ ರಾಜಕೀಯ ಪಕ್ಷಗಳಲ್ಲಿ ಕೇಂದ್ರ ಬಿಂದುಗಳಾದರು.

ಎಸ್.ಎಂ.ಕೃಷ್ಣ ಅವರು ಡಿ.ಕೆ.ಶಿವಕುಮಾರ್ ಅವರೊಂದಿಗಿನ ಬಾಂಧವ್ಯವನ್ನು ಬಲಪಡಿಸಿದ್ದರು.

ಜನತಾದಳ (ಜಾತ್ಯತೀತ) ದಲ್ಲಿ ಕಾರ್ಯತಂತ್ರದ ಚಾತುರ್ಯ ಮತ್ತು ನಾಯಕತ್ವಕ್ಕೆ ಹೆಸರುವಾಸಿಯಾದ ಕುಮಾರಸ್ವಾಮಿ, ತಮ್ಮ ತಂದೆಯ ಪರಂಪರೆಯನ್ನು ಆನುವಂಶಿಕವಾಗಿ ಪಡೆದರು ಮತ್ತು ಒಕ್ಕಲಿಗ ಸಮುದಾಯದಲ್ಲಿ ಪ್ರಭಾವಕ್ಕಾಗಿ ಸ್ಪರ್ಧಿಸುತ್ತಲೇ ಇದ್ದಾರೆ. ಅವರ ರಾಜಕೀಯ ಜೀವನ ದೇವೇಗೌಡರ ಯುಗದ ಸ್ಪರ್ಧಾತ್ಮಕ ಮನೋಭಾವ ಪ್ರತಿಬಿಂಬಿಸುತ್ತದೆ. ಕುಮಾರಸ್ವಾಮಿ ಅವರು ಶಿವಕುಮಾರ್ ಅವರಂತಹ ಇತರ ನಾಯಕರ ಪ್ರಾಬಲ್ಯಕ್ಕೆ ಸವಾಲು ಹಾಕುತ್ತಿದ್ದಾರೆ.

ಪ್ರಮುಖ ಕಾಂಗ್ರೆಸ್ ನಾಯಕ ಮತ್ತು ಎಸ್.ಎಂ.ಕೃಷ್ಣ ಅವರ ವಿಶ್ವಾಸಾರ್ಹ ಮಿತ್ರರಾಗಿ ಪ್ರಾಮುಖ್ಯತೆ ಪಡೆದಿದ್ದ ಶಿವಕುಮಾರ್ ಕರ್ನಾಟಕ ರಾಜಕೀಯದಲ್ಲಿ ಅಸಾಧಾರಣ ಶಕ್ತಿಯಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿದ್ದಾರೆ. ಅವರ ರಾಜಕೀಯ ಮಹತ್ವಾಕಾಂಕ್ಷೆಗಳು ಮತ್ತು ಬಲವಾದ ತಳಮಟ್ಟದ ಬೆಂಬಲವು ಅವರನ್ನು ಕುಮಾರಸ್ವಾಮಿಗೆ ನೇರ ಪ್ರತಿಸ್ಪರ್ಧಿಯನ್ನಾಗಿ ಮಾಡಿದೆ. ಇದು ಅವರ ಬಣಗಳ ನಡುವೆ ಹೊಸ ಉದ್ವಿಗ್ನತೆಗೆ ಕಾರಣವಾಯಿತು. ಈ ನಾಯಕರ ನಡುವಿನ ಪೈಪೋಟಿಯು ಒಕ್ಕಲಿಗ ಮತ ಬ್ಯಾಂಕ್​ನ ಶಾಶ್ವತ ಮಹತ್ವದ ಮೇಲೆ ಬೆಳಕು ಚೆಲ್ಲುತ್ತದೆ. ಅದು ರಾಜ್ಯ ರಾಜಕೀಯ ರಂಗದಲ್ಲಿ ಮೈತ್ರಿಗಳು ಮತ್ತು ಕಾರ್ಯತಂತ್ರಗಳನ್ನು ಹೇಗೆ ರೂಪಿಸುತ್ತದೆ ಎಂಬುದನ್ನು ಒತ್ತಿಹೇಳುತ್ತದೆ.

ಪ್ರಸ್ತುತ ಪೀಳಿಗೆಯ ಪೈಪೋಟಿಯು ಕರ್ನಾಟಕದಲ್ಲಿ ಸಮುದಾಯ ನಿಷ್ಠೆ ಮತ್ತು ಅಧಿಕಾರಕ್ಕಾಗಿ ನಡೆಯುತ್ತಿರುವ ಹೋರಾಟವನ್ನು ಪ್ರತಿಬಿಂಬಿಸುತ್ತದೆ. ಇದು ದೇವೇಗೌಡರೊಂದಿಗೆ ಪ್ರಾರಂಭವಾದ ಸ್ಪರ್ಧೆಯ ಪರಂಪರೆಯನ್ನು ಸೂಚಿಸುತ್ತದೆ

Tags:    

Similar News