ಲೆಬನಾನ್ ಗೆ ಪ್ರಯಾಣಿಸದಂತೆ ರಾಯಭಾರ ಕಚೇರಿ ಸೂಚನೆ

ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ಹೆಚ್ಚುತ್ತಿರುವ ಹಿಂಸಾಚಾರದಿಂದಾಗಿ ಲೆಬನಾನ್‌ಗೆ ಪ್ರಯಾಣಿಸುವುದನ್ನು ತಪ್ಪಿಸುವಂತೆ ಬೈರುತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತನ್ನ ಪ್ರಜೆಗಳಿಗೆ ಒತ್ತಾಯಿಸಿದೆ. ಪ್ರಸ್ತುತ ಅಲ್ಲಿ ನೆಲೆಸಿರುವ ಭಾರತೀಯರು ತೀವ್ರ ಎಚ್ಚರಿಕೆಯಿಂದ ಹಾಗೂ ಆದಷ್ಟು ದೇಶ ತೊರೆಯುವಂತೆಯೂ ಸೂಚನೆ ನೀಡಿದೆ.

Update: 2024-09-26 11:49 GMT
ಲೆಬನಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ
Click the Play button to listen to article

ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ಹೆಚ್ಚುತ್ತಿರುವ ಹಿಂಸಾಚಾರದಿಂದಾಗಿ ಲೆಬನಾನ್‌ಗೆ ಪ್ರಯಾಣಿಸುವುದನ್ನು ತಪ್ಪಿಸುವಂತೆ ಬೈರುತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತನ್ನ ಪ್ರಜೆಗಳಿಗೆ ಒತ್ತಾಯಿಸಿದೆ. ಪ್ರಸ್ತುತ ಅಲ್ಲಿ ನೆಲೆಸಿರುವ ಭಾರತೀಯರು ತೀವ್ರ ಎಚ್ಚರಿಕೆಯಿಂದ ಹಾಗೂ ಆದಷ್ಟು ಬೇಗ ದೇಶ ತೊರೆಯುವಂತೆಯೂ ಸೂಚನೆ ನೀಡಿದೆ. 

ಭಾರತೀಯ ರಾಜಭಾರಿ ಕಚೇರಿ ಬುಧವಾರ ತನ್ನ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು, “ ಆಗಸ್ಟ್ 1, 2024 ರಂದು ನೀಡಲಾದ ಸಲಹೆಯ ಪುನರಾವರ್ತನೆಯಾಗಿ ಮತ್ತು ಈ ಪ್ರದೇಶದಲ್ಲಿನ ಇತ್ತೀಚಿನ ಬೆಳವಣಿಗೆಗಳು ಮತ್ತು ಉಲ್ಬಣಗಳನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ಪ್ರಜೆಗಳಿಗೆ ಮುಂದಿನ ಸೂಚನೆ ತನಕ ಲೆಬನಾನ್ ಪ್ರಯಾಣಿಸದಂತೆ ಸಲಹೆ ನೀಡಲಾಗಿದೆ. ಈಗಾಗಲೇ ಲೆಬನಾನ್‌ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ಲೆಬನಾನ್‌ನಿಂದ ಹೊರಹೋಗುವಂತೆ ಸೂಚಿಸಲಾಗಿದೆ. ಅವರು ತೀವ್ರ ಎಚ್ಚರಿಕೆ ವಹಿಸಲು, ಅವರ ಚಲನವಲನಗಳನ್ನು ನಿರ್ಬಂಧಿಸಲು ಮತ್ತು ನಮ್ಮ ಇಮೇಲ್ ಐಡಿ ಮೂಲಕ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ಸೂಚಿಸಲಾಗಿದೆ. beirut@mea.gov.in ಅಥವಾ ತುರ್ತು ದೂರವಾಣಿ ಸಂಖ್ಯೆ +96176860128,” ಎಂದು ಪೋಸ್ಟ್‌ ಮಾಡಿದೆ. 

ಸುಮಾರು ಒಂದು ವರ್ಷದ ಹಿಂದೆ ಉತ್ತರ ಇಸ್ರೇಲ್‌ ಮೇಲೆ ಹಿಜ್ಬುಲ್ಲಾ ವೈಮಾನಿಕ ದಾಳಿ ನಡೆಸಿದ್ದು, ಲೆಬನಾನ್‌ನಲ್ಲಿ 200,00 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಮಾನವೀಯ ವ್ಯವಹಾರಗಳ ಸಮನ್ವಯಕ್ಕಾಗಿ UN ಕಚೇರಿ ಬುಧವಾರ ಹೇಳಿದೆ. ಇಸ್ರೇಲ್‌ ದಾಳಿಯಲ್ಲಿ ಬುಧವಾರ 51 ಜನರು ಸಾವನ್ನಪ್ಪಿದ್ದಾರೆ ಮತ್ತು 223 ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವರು ತಿಳಿಸಿದ್ದಾರೆ. 

Tags:    

Similar News