IPL 2024: ರಾಯಲ್ ಚಾಲೆಂಜರ್ಸ್ ಮಣಿಸಿದ ಮುಂಬೈ ಇಂಡಿಯನ್ಸ್‌

Update: 2024-04-12 09:05 GMT
ಮುಂಬೈ ಇಂಡಿಯನ್ಸ್ ಆಟಗಾರ ಸೂರ್ಯಕುಮಾರ್ ಯಾದವ್ ಅವರೊಂದಿಗೆ ಹಾರ್ದಿಕ್ ಪಾಂಡ್ಯ

ಮುಂಬೈ, ಅ.11- ಜಸ್‌ ಪ್ರೀತ್ ಬುಮ್ರಾ ಅವರ ಐದು ವಿಕೆಟ್‌ ಹಾಗೂ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಅವರ ಬ್ಯಾಟಿಂಗ್‌ ನೆರವಿನಿಂದ ಮುಂಬೈ ಇಂಡಿಯನ್ಸ್ 7 ವಿಕೆಟ್‌ ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿತು.  

ಇಶಾನ್‌ ಕಿಶನ್ ಕೇವಲ 34 ಎಸೆತಗಳಲ್ಲಿ (7x4, 5x6) 69 ರನ್ ಮತ್ತು ಸೂರ್ಯಕುಮಾರ್ 19 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಮತ್ತು ಐದು ಬೌಂಡರಿಗಳೊಂದಿಗೆ 52 ರನ್ ಗಳಿಸಿದರು. ಮುಂಬೈ ಇಂಡಿಯನ್ಸ್ ಆರ್‌ಸಿಬಿಯ 197 ರನ್ ಗುರಿಯನ್ನು ಕೇವಲ 15.3 ಓವರ್‌ಗಳಲ್ಲಿ ಮುಟ್ಟಿತು. ರಾಯಲ್ ಚಾಲೆಂಜರ್ಸ್ ನಾಯಕ ಫಾಫ್ ಡು ಪ್ಲೆಸಿಸ್ (61), ರಜತ್ ಪಾಟಿದಾರ್ (50) ಮತ್ತು ದಿನೇಶ್ ಕಾರ್ತಿಕ್ (23 ಎಸೆತಗಳಲ್ಲಿ ಔಟಾಗದೆ 53) ನೆರವಿನಿಂದ 8 ವಿಕೆಟ್‌ ಗೆ 196 ರನ್‌ ಗಳಿಸಿತು. ಆದರೆ, ಈ ಮೊತ್ತ ಎಂಐ ತಂಡವನ್ನು ಮಣಿಸಲು ಸಾಕಾಗಲಿಲ್ಲ. 

ಕಿಶನ್, ಮೊಹಮ್ಮದ್ ಸಿರಾಜ್‌ ಅವರ ಎರಡನೇ ಓವರ್‌ನಲ್ಲಿ 23 ರನ್ ಗಳಿಸಿದರು(ಮೂರು ಸಿಕ್ಸರ್‌ ಮತ್ತು ಒಂದು ಬೌಂಡರಿ). ಆರನೇ ಓವರ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಪರಿಚಯಿಸಿದಾಗ, ಆಕ್ರಮಣ ಮುಂದುವರಿಯಿತು. ಕೇವಲ 23 ಎಸೆತಗಳಲ್ಲಿಎರಡು ಬೌಂಡರಿ ಮತ್ತು ಸಿಕ್ಸರ್‌ ಮೂಲಕ ಋತುವಿನ ಮೊದಲ ಅರ್ಧ ಶತಕವನ್ನುಗಳಿಸಿದರು. ರೋಹಿತ್ ಶರ್ಮಾ ಜೊತೆಯಲ್ಲಿ ಮೊದಲ ವಿಕೆಟ್‌ಗೆ 53 ಎಸೆತಗಳಲ್ಲಿ 101 ರನ್‌ ಜೋಡಿಸಿ, ಮುಂಬೈಗೆ ಉತ್ತಮ ಆರಮಭ ನೀಡಿದರು. 

ರೋಹಿತ್ (24 ಎಸೆತಗಳಲ್ಲಿ 38, 3x4, 3x6), ಕಿಶನ್ ಮತ್ತು ಸೂರ್ಯಕುಮಾರ್ ಗೆ ಜೊತೆಯಾದರು. ರಿಸ್‌ ಟೊಪ್ಲೆ ಅವರ ಅದ್ಭುತ ಕ್ಯಾಚಿಗೆ ಹೊರನಡೆದರು. 15 ರನ್‌ ಆಗಿದ್ದಾಗ ಗ್ಲೆನ್ ಮ್ಯಾಕ್ಸ್‌ವೆಲ್ ಅವರಿಂ ಜೀವದಾನ ಪಡೆದ ಸೂರ್ಯಕುಮಾರ್, ಆಕಾಶ್‌ ದೀಪ್‌ ಬೌಲಿಂಗಿನಲ್ಲಿ 11ನೇ ಓವರ್‌ನಲ್ಲಿ ಮೂರು ಸಿಕ್ಸರ್ ಮತ್ತು ಒಂದು ಬೌಂಡರಿ ಗಳಿಸಿದರು. ಗಾಯದಿಂದ ಮರಳಿದ ನಂತರ ಇದು ಸೂರ್ಯಕುಮಾರ್‌ ಅವರ ಎರಡನೇ ಪಂದ್ಯ. 

ರೋಹಿತ್, ವಿರಾಟ್ ಕೊಹ್ಲಿ ಅವರನ್ನು ಪ್ರೇಕ್ಷಕರು ಹುರಿದುಂಬಿಸಿದರು. ಎಂಐ ನಾಯಕ ಪಾಂಡ್ಯ ಹೊರನಡೆಯುತ್ತಿದ್ದಾಗ, ಹೀಗಳೆದರು. ಆದರೆ, ಒಂದು ವಿಭಾಗ 'ಹಾರ್ದಿಕ್... ಹಾರ್ದಿಕ್' ಎಂದು ಹುರಿದುಂಬಿಸಿತು. ಕೊಹ್ಲಿ ತಕ್ಷಣ ಪಾಂಡ್ಯ ಅವರನ್ನು ಹುರಿದುಂಬಿಸಬೇಕೆಂದು ಅಭಿಮಾನಿಗಳನ್ನು ಪ್ರೋತ್ಸಾಹಿಸಿದರು. ಹಾರ್ದಿಕ್ 6 ಎಸೆತಗಳಲ್ಲಿ ಮೂರು ಸಿಕ್ಸರ್‌ ಸಿಡಿಸಿ, ಔಟಾಗದೆ 21 ರನ್ ಗಳಿಸಿದರು. 

ಬೂಮ್ರಾ ಚಾತುರ್ಯ: ಕಾರ್ತಿಕ್ ಆರ್‌ಸಿಬಿಯನ್ನು 200 ರ ಸಮೀಪಕ್ಕೆ ಕೊಂಡೊಯ್ಯುವ ಮೊದಲು, ಬುಮ್ರಾ ಐದು ವಿಕೆಟ್‌ ಗಳಿಕೆಯ ಸಾಧನೆ ಮಾಡಿದರು. ಫಾರ್ಮ್‌ನಲ್ಲಿರುವ ಕೊಹ್ಲಿ (3) ಬೂಮ್ರಾ ಅವರ ಮೊದಲ ಬಲಿ. ಡು ಪ್ಲೆಸಿಸ್ ಮತ್ತು ಪಾಟಿದಾರ್ ಅರ್ಧ ಶತಕ ಗಳಿಸಿದರು. ಆನಂತರ ಮೂರು ಓವರ್‌ ಬೌಲ್ ಮಾಡಿದ ಬುಮ್ರಾ, ಆರ್‌ಸಿಬಿ ಪ್ರತಿರೋಧದ ಬೆನ್ನು ಮುರಿದರು. ಐದು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ ಬಾರಿಸಿದ ಕಾರ್ತಿಕ್‌, ಆಕಾಶ್ ಮಧ್ವಲ್ (1/57) ಅವರ ಎರಡು ಓವರ್‌ಗಳಲ್ಲಿ 38 ರನ್ ಗಳಿಸಿದರು.

ಪಾಟಿದಾರ್ 26 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳೊಂದಿಗೆ 50 ರನ್ ಗಳಿಸಿ, ಋತುವಿನ ಮೊದಲ ಅರ್ಧ ಶತಕ ಗಳಿಸಿದ ಗೌರವಕ್ಕೆ ಪಾತ್ರರಾದರು. ಡು ಪ್ಲೆಸಿಸ್ 40 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 61 ರನ್ ಗಳಿಸಿದರು.

Tags:    

Similar News