ಐಐಟಿ ವಿದ್ಯಾರ್ಥಿ ಆತ್ಮಹತ್ಯೆ ಶಂಕೆ

Update: 2024-02-16 13:30 GMT

ದಿಲ್ಲಿಯ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಎಂಟೆಕ್‌ ವಿದ್ಯಾರ್ಥಿಯೊಬ್ಬನ ಶವ ಹಾಸ್ಟೆಲ್‌ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ನಾಸಿಕ್‌ ಮೂಲದ ಸಂಜಯ್ ನೇರ್ಕರ್ (24), ದ್ರೋಣಾಚಾರ್ಯ ಹಾಸ್ಟೆಲ್‌ನ ಕೊಠಡಿ ಸಂಖ್ಯೆ 757 ರಲ್ಲಿ ತಂಗಿದ್ದರು. ಫೋನ್‌ ಕರೆಗೆ ಉತ್ತರಿಸದ ಕಾರಣ ಕುಟುಂಬದವರು ಜೊತೆಯವರನ್ನು ಕೇಳಿದ್ದು,ಪರಿಶೀಲಿಸಿದಾಗ ವಿಷಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು. ನೇರ್ಕರ್ ಅವರ ಕುಟುಂಬದ ಸದಸ್ಯರು ಗುರುವಾರ ರಾತ್ರಿ ಕರೆ ಮಾಡಿದ್ದರು. ಅವರು ಫೋನ್ ಸ್ವೀಕರಿಸಿರಲಿಲ್ಲ.ಜೊತೆಯವರು ಪರಿಶೀಲಿಸಿದಾಗ ಕೊಠಡಿ ಒಳಗಿನಿಂದ ಬೀಗ ಹಾಕಿರುವುದು ಕಂಡುಬಂತು. ಹಾಸ್ಟೆಲ್ ಸಿಬ್ಬಂದಿ ಬಾಗಿಲು ಒಡೆದಿದ್ದು, ನೇರ್ಕರ್ ಅವರ ಶವ ಮೇಲ್ಛಾವಣಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಸಾವಿಗೆ ಕಾರಣ ತಿಳಿದುಬಂದಿಲ್ಲ.

(ಆತ್ಮಹತ್ಯೆಗಳನ್ನು ತಡೆಗಟ್ಟಬಹುದು. ಸಹಾಯಕ್ಕಾಗಿ ಆತ್ಮಹತ್ಯೆ ತಡೆಗಟ್ಟುವಿಕೆ ಸಹಾಯವಾಣಿಗಳಿಗೆ ಕರೆ ಮಾಡಿ: ನೇಹಾ ಆತ್ಮಹತ್ಯೆ ತಡೆಗಟ್ಟುವಿಕೆ ಕೇಂದ್ರ : 044-24640050; ಆತ್ಮಹತ್ಯೆ ತಡೆಗಟ್ಟುವಿಕೆ, ಭಾವನಾತ್ಮಕ ಬೆಂಬಲ ಮತ್ತು ಆಘಾತದ ಸಹಾಯ ಆಸರಾ ಸಹಾಯವಾಣಿ +91-9820466726; ಕಿರಣ್ ಮಾನಸಿಕ ಆರೋಗ್ಯ ಪುನರ್ವಸತಿ - 5900000 0019, ದಿಶಾ 0471- 2552056, ಮೈತ್ರಿ 0484 2540530)

Tags:    

Similar News