ಚೆನ್ನೈನ ಯುಟ್ಯೂಬರ್ ನಿಂದ 267 ಕೆಜಿ ಚಿನ್ನ ಕಳ್ಳಸಾಗಣೆ!

ಕಳ್ಳಸಾಗಣೆದಾರರು ವಿದೇಶದಿಂದ ಆಗಮಿಸುವ ವಾಹಕರಿಂದ ರವಾನೆಯನ್ನು ಸ್ವೀಕರಿಸುತ್ತಾರೆ. ಗುದನಾಳದಲ್ಲಿ ಚಿನ್ನವನ್ನು ಮರೆಮಾಡಿಕೊಂಡು, ವಿಮಾನ ನಿಲ್ದಾಣದ ಹೊರಗೆ ಕಾಯುತ್ತಿರುವ ಗ್ರಾಹಕರಿಗೆ ತಲುಪಿಸುತ್ತಾರೆ

Update: 2024-07-17 06:59 GMT

ಚೆನ್ನೈ ಮೂಲದ ಯುಟ್ಯೂಬರ್ ಸಬೀರ್ ಅಲಿ ಏಳು ಮಂದಿಗೆ ತಮ್ಮ ಗುದನಾಳದಲ್ಲಿ ಚಿನ್ನ ಇರಿಸಿಕೊಂಡು ಸಾಗಿಸಲು ತರಬೇತಿ ನೀಡಿದ್ದಾರೆ ಎಂದು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಕಳೆದ ತಿಂಗಳು ನಗರದಲ್ಲಿ ಚಿನ್ನದ ಕಳ್ಳಸಾಗಣೆ ಜಾಲವನ್ನು ಪೊಲೀಸರು ಬೇಧಿಸಿದ್ದರು. 

ಚೆನ್ನೈ ವಿಮಾನ ನಿಲ್ದಾಣದಲ್ಲಿ ಏರ್‌ಹಬ್ ಹೆಸರಿನ ಸ್ಮರಣಿಕೆಗಳ ಅಂಗಡಿಯನ್ನು ನಡೆಸುತ್ತಿದ್ದ ಅಲಿ, ಆ ಮೂಲಕ ಚಿನ್ನದ ಕಳ್ಳಸಾಗಣೆ ದಂಧೆ ನಡೆಸುತ್ತಿದ್ದರು. ಪೊಲೀಸರು ಜೂನ್ 29-30 ರಂದು ಸಂಪೂರ್ಣ ಕಾರ್ಯಾಚರಣೆಯನ್ನು ಭೇದಿಸಿ, ಅಲಿ(29) ಮತ್ತು ಅವನ ಏಳು ಉದ್ಯೋಗಿಗಳನ್ನು ಬಂಧಿಸಿದ್ದರು. 

ಕೆಲಸಕ್ಕಾಗಿ ನೇಮಕಗೊಂಡ ಪುರುಷರಿಗೆ ಮಾಸಿಕ 15,000 ರೂ. ವೇತನ ನೀಡಲಾಗುತ್ತಿತ್ತು ಮತ್ತು ಅವರು ಕಳ್ಳಸಾಗಣೆ ಮಾಡಿದ ಪ್ರತಿಯೊಂದು ಚಿನ್ನದ ʻಚೆಂಡುʼ ಹೆಚ್ಚುವರಿ 5,000 ರೂ.ನೀಡಲಾಗುತ್ತಿತ್ತು. ಅಲಿಯ ಯುಟ್ಯೂಬ್‌ ಚಾನೆಲ್ ʻshoppingboyzʼ ಮೂಲಕ ಕಾರ್ಟೆಲ್ ಅಲಿಯನ್ನು ಸಂಪರ್ಕಿಸಿದೆ ಎಂದು ಶಂಕಿಸಲಾಗಿದೆ. 

ವರದಿಗಳ ಪ್ರಕಾರ, ಪ್ರತಿ ರವಾನೆಯು ಸುಮಾರು 300 ಗ್ರಾಂ ಚಿನ್ನದ ಪೇಸ್ಟ್ ಅಥವಾ ಸಿಲಿಕೋನ್ ಚೆಂಡುಗಳಲ್ಲಿ ತುಂಬಿದ ಚಿನ್ನದ ಪುಡಿಯನ್ನು ಒಳಗೊಂಡಿರಲಿದೆ. ಕಳ್ಳಸಾಗಣೆದಾರರು ವಿದೇಶದಿಂದ ಆಗಮಿಸುವ ವಾಹಕರಿಂದ ಸರಕು ಸ್ವೀಕರಿಸಿ, ತಮ್ಮ ಗುದನಾಳದಲ್ಲಿ ಬಚ್ಚಿಟ್ಟುಕೊಂಡು ವಿಮಾನ ನಿಲ್ದಾಣದ ಹೊರಗೆ ಕಾಯುತ್ತಿರುವ ಗ್ರಾಹಕರಿಗೆ ತಲುಪಿಸುತ್ತಾರೆ ಎಂದು ವರದಿಯಾಗಿದೆ. 

ಕಳೆದ ಕೆಲವು ತಿಂಗಳುಗಳಲ್ಲಿ 167 ಕೋಟಿ ರೂ. ಮೌಲ್ಯದ 267 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದಾರೆ. ಈ ಅವಧಿಯಲ್ಲಿ ಅಲಿ ಸುಮಾರು 2.5 ಕೋಟಿ ರೂ. ಗಳಿಸಿದ್ದಾರೆ ಎಂದು ಅಂದಾಜಿಸಲಾಗಿದೆ. ಆಪಾದಿತರಲ್ಲಿ ಒಬ್ಬರು ಎರಡು ತಿಂಗಳಲ್ಲಿ 80 ಪ್ರವಾಸ ಕೈಗೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಕಸ್ಟಮ್ಸ್ ಅಧಿಕಾರಿಗಳು ಹೇಳಿದ್ದಾರೆ.

ಕಸ್ಟಮ್ಸ್‌ ನವರಿಂದ ತಪ್ಪಿಸಿಕೊಂಡು, ಚಿನ್ನವನ್ನು ಗುದನಾಳದಲ್ಲಿ ಹಿಡಿದಿಟ್ಟುಕೊಳ್ಳುವುದು ಹೇಗೆ ಎಂಬ ಬಗ್ಗೆ ತರಬೇತಿ ನೀಡಲಾಗಿದೆ. ʻಕೆಲಸ ಒಪ್ಪಿಸುವ 10 ದಿನಗಳ ಮೊದಲು ತರಬೇತಿ ಪ್ರಾರಂಭವಾಗುತ್ತದೆ. ಒಂದು ಗಂಟೆಯವರೆಗೆ ಗುದನಾಳದಲ್ಲಿ ಚಿನ್ನವನ್ನು ಹಿಡಿದಿಟ್ಟುಕೊಳ್ಳಲು ಕಲಿಸಲಾಗುತ್ತದೆ,ʼ ಎಂದು ಕಸ್ಟಮ್ಸ್ ಅಧಿಕಾರಿಯೊಬ್ಬರು ಹೇಳಿದರು.

ವ್ಯಕ್ತಿಯೊಬ್ಬ ಒಂದು ಚೆಂಡಿನ ರವಾನೆಯೊಂದಿಗೆ ಪ್ರಾರಂಭಿಸಿ, ಕಾಲಕ್ರಮೇಣ ಸುಮಾರು 1 ಕೆಜಿ ತೂಕದ ಮೂರು ಚೆಂಡುಗಳನ್ನು ಸಾಗಿಸುತ್ತಿದ್ದರು ಎಂದು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಜೂನ್ 29 ರಂದು ಶಂಕಿತನೊಬ್ಬ ಸಿಕ್ಕಿಬಿದ್ದಿ ದ್ದು, ಎಕ್ಸ್ ರೇ ಮೂಲಕ ಪರಿಶೀಲಿಸಿದಾಗ, ಚಿನ್ನದ ರವಾನೆ ಸಾಬೀತಾಗಿತ್ತು.

Tags:    

Similar News