ಮಥುರಾ ಮಂದಿರ-ಮಸೀದಿ ವಿವಾದ: ಮಸೀದಿ ಸಮಿತಿ ಪರ ಅರ್ಜಿ ವಜಾ

Update: 2024-08-01 10:16 GMT

ಮಥುರಾದ ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ವಿವಾದಕ್ಕೆ ಸಂಬಂಧಿಸಿದ 18 ಪ್ರಕರಣಗಳ ವಿಚಾರಣೆಯನ್ನು ಮುಂದುವರಿಸಬಹುದು ಎಂದು ಅಲಹಾಬಾದ್ ಹೈಕೋರ್ಟ್ ಗುರುವಾರ (ಆಗಸ್ಟ್ 1) ತೀರ್ಪು ನೀಡಿದೆ.

ಈ ಮೊಕದ್ದಮೆಗಳನ್ನು ಪ್ರಶ್ನಿಸಿ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. 

ನ್ಯಾ. ಮಯಾಂಕ್ ಕುಮಾರ್ ಜೈನ್ ಅವರು ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಜೂನ್ 6 ರಂದು ಕಾಯ್ದಿರಿಸಿದ್ದರು.ನ್ಯಾಯಾಲಯವು  ದಾವೆಯನ್ನು ರೂಪಿಸಲು ಆಗಸ್ಟ್ 12 ರ ದಿನಾಂಕ ನಿಗದಿಪಡಿಸಿದೆ. 

ಕೃಷ್ಣ ಜನ್ಮಭೂಮಿ ದೇವಸ್ಥಾನದ ಪಕ್ಕದಲ್ಲಿರುವ ಶಾಹಿ ಈದ್ಗಾ ಮಸೀದಿಯನ್ನು ತೆಗೆದುಹಾಕಬೇಕೆಂದು ಹಿಂದು ಅರ್ಜಿದಾರರು ಹೂಡಿರುವ ಮೊಕದ್ದಮೆಗಳು ಇವು. ದೇವಾಲಯವನ್ನು ಕೆಡವಿ, ಔರಂಗಜೇಬ್ ಕಾಲದ ಮಸೀದಿಯನ್ನು ನಿರ್ಮಿಸಲಾಯಿತು ಎಂದು ಅರ್ಜಿಗಳು ಹೇಳುತ್ತವೆ.

ಆದರೆ, ಮಸೀದಿ ನಿರ್ವಹಣೆ  ಸಮಿತಿ ಮತ್ತು ಯುಪಿ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್‌ಗಳು 1991 ರ ಪ್ರಾರ್ಥನಾ ಸ್ಥಳ (ವಿಶೇಷ ನಿಬಂಧನೆಗಳು)ಗಳ ಕಾಯಿದೆಯಡಿ ಮೊಕದ್ದಮೆಗಳನ್ನು ನಿಷೇಧಿಸಲಾಗಿದೆ ಎಂದು ವಾದಿಸುತ್ತಿವೆ. ಈ ಕಾಯಿದೆಯು ಯಾವುದೇ ಪೂಜಾ ಸ್ಥಳದ ಸ್ಥಿತಿಯನ್ನು ಬದಲಿಸುವುದನ್ನು ನಿಷೇಧಿಸುತ್ತದೆ. 

Tags:    

Similar News