Haryana polls| ಸಾವಿತ್ರಿ ಜಿಂದಾಲ್ ಸ್ವತಂತ್ರ ಸ್ಪರ್ಧೆ; ಬಿಜೆಪಿಗೆ ಆಘಾತ

ʻತಾವು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಯಾವುದೇ ಪಕ್ಷದ ಜೊತೆ ಮಾತುಕತೆ ನಡೆಸಿಲ್ಲ. ಹೂಡಾ ತಮ್ಮ ಹಿರಿಯ ಸಹೋದರ. ತನಗೆ ರಾಜಕೀಯವನ್ನು ಕಲಿಸಿದ್ದು ಅವರೇ,ʼ ಎಂದು ಸಾವಿತ್ರಿ ಜಿಂದಾಲ್ ಹೇಳಿದ್ದಾರೆ.;

Update: 2024-09-13 06:51 GMT

ದೇಶದ ಅತ್ಯಂತ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್ ಅವರು ಮುಂಬರುವ ಚುನಾವಣೆಯಲ್ಲಿ ಹಿಸಾರ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಆಡಳಿತಾರೂಢ ಬಿಜೆಪಿಯಲ್ಲಿ ಕೋಲಾಹಲ ಸೃಷ್ಟಿಯಾಗಿದೆ.

ಹರ್ಯಾಣ ಅಕ್ಟೋಬರ್ 5 ರಂದು ಚುನಾವಣೆ ನಡೆಯಲಿದೆ. ಬಿಜೆಪಿ ಆಡಳಿತ ವಿರೋಧಿ ಅಲೆಯ ಜೊತೆಗೆ ಟಿಕೆಟ್ ನಿರಾಕರಿಸಲ್ಪಟ್ಟ ಬಂಡಾಯಗಾರರನ್ನು ಕೂಡ ಎದುರಿಸಬೇಕಾಗಿ ಬಂದಿದೆ.

ಬಂಡಾಯ: ಕುರುಕ್ಷೇತ್ರ ಸಂಸದ ನವೀನ್ ಜಿಂದಾಲ್ ಅವರ ತಾಯಿ ಸಾವಿತ್ರಿ ಜಿಂದಾಲ್, ಹಿಸಾರ್ ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಹಾಲಿ ಸಂಸದ, ಎರಡು ಬಾರಿ ಶಾಸಕ ಹಾಗೂ ಸೈನಿ ಸಂಪುಟದಲ್ಲಿ ಅವರು ಸಚಿವರಾಗಿರುವ ಕಮಲ್ ಗುಪ್ತಾ ಅವರಿಗೆ ನೀಡಲಾಗಿದೆ. ಗುರುವಾರ(ಸೆಪ್ಟೆಂಬರ್ 12) ಸಾವಿತ್ರಿ ಜಿಂದಾಲ್(74), ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಬೆಂಬಲಿಗರನ್ನು ಭೇಟಿಯಾದ ನಂತರ ಸಾವಿತ್ರಿ ಜಿಂದಾಲ್, ‌ʻತನ್ನ ಕುಟುಂಬವಾದ ಜನರು ಸ್ಪರ್ಧಿಸಲು ಹೇಳುತ್ತಿದ್ದಾರೆ. ಅವರ ಇಚ್ಛೆಯನ್ನು ಪಾಲಿಸಬೇಕು,ʼ ಎಂದು ಹೇಳಿದರು.

ಸಾವಿತ್ರಿ ಜಿಂದಾಲ್ ಯಾರು?: ಖ್ಯಾತ ಕೈಗಾರಿಕೋದ್ಯಮಿ ದಿವಂಗತ ಒ.ಪಿ. ಜಿಂದಾಲ್ ಅವರ ಪತ್ನಿ ಸಾವಿತ್ರಿ ಅವರನ್ನು ಫೋರ್ಬ್ಸ್ ಇಂಡಿಯಾ ದೇಶದ ಅತ್ಯಂತ ಶ್ರೀಮಂತ ಮಹಿಳೆ ಎಂದು ಹೇಳಿದೆ. ಅವರ ನಿವ್ವಳ ಮೌಲ್ಯ 39.5 ಬಿಲಿಯನ್ ಅಮೆರಿಕನ್ ಡಾಲರ್.‌‌ ಅವರು ಒ.ಪಿ. ಜಿಂದಾಲ್ ಗ್ರೂಪ್‌ನ ಮುಖ್ಯಸ್ಥೆ.

ಅವರು ನಾಮಪತ್ರದಲ್ಲಿ ತಮ್ಮ ಒಟ್ಟು ಆಸ್ತಿ 270.66 ಕೋಟಿ ರೂ. ಎಂದು ಘೋಷಿಸಿದ್ದಾರೆ. 2009 ರಲ್ಲಿ 43.68 ಕೋಟಿ ರೂ. ಹಾಗೂ 2014 ರಲ್ಲಿ 113 ಕೋಟಿ ರೂ. ಎಂದು ಹೇಳಿದ್ದರು. 

ರಾಜಕೀಯ ಜೀವನ: 2005 ರಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಪತಿ ಒ.ಪಿ. ಜಿಂದಾಲ್ ಅವರ ಹಠಾತ್ ಮರಣದ ನಂತರ ಸಾವಿತ್ರಿ ಅವರು ರಾಜಕೀಯ ಪ್ರವೇಶಿಸಿದರು. ಅವರ ಪತಿ ಕಾಂಗ್ರೆಸ್‌ ನಿಂದ 1991, 2000 ಮತ್ತು 2005ರಲ್ಲಿ ಸ್ಪರ್ಧಿಸಿದ್ದರು. ನಿಧನರಾದಾಗ ಅವರು ಭೂಪಿಂದರ್ ಸಿಂಗ್ ಹೂಡಾ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದರು.

ಸಾವಿತ್ರಿ ಅವರು 2005 ರಲ್ಲಿ ಹಿಸಾರ್ ಉಪ ಚುನಾವಣೆಯಲ್ಲಿ ಗೆದ್ದರು ಮತ್ತು 2009 ರಲ್ಲಿ ಮರು ಆಯ್ಕೆಯಾದರು. 2013 ರಲ್ಲಿ ಭೂಪಿಂದರ್ ಸಿಂಗ್ ಹೂಡಾ ಸರ್ಕಾರದಲ್ಲಿ ಸಚಿವರಾದರು. ಆದರೆ, 2014 ರಲ್ಲಿ ಸೋತರು. 2019ರಲ್ಲಿ ಸ್ಪರ್ಧಿಸಿರಲಿಲ್ಲ. 2024ರ ಮಾರ್ಚ್‌ನಲ್ಲಿ ಪುತ್ರ ನವೀನ್ ಜಿಂದಾಲ್ ಬಿಜೆಪಿಗೆ ಪಕ್ಷಾಂತರ ಮಾಡಿದಾಗ, ಸಾವಿತ್ರಿ ಅವರು ಕೂಡ ಕಾಂಗ್ರೆಸ್ ತೊರೆದರು. 

ಬಿಜೆಪಿ ಸದಸ್ಯತ್ವ ತೆಗೆದುಕೊಂಡಿಲ್ಲ: ನಾಮಪತ್ರ ಸಲ್ಲಿಕೆ ವೇಳೆ, ಇದು ಬಂಡಾಯವೇ ಎಂದು ಪತ್ರಕರ್ತರು ಅವರನ್ನು ಕೇಳಿದರು. ಪ್ರತಿಕ್ರಿಯಿಸಿದ್ದ ಸಾವಿತ್ರಿ ಅವರು, ತಾವು ಬಿಜೆಪಿ ಸದಸ್ಯತ್ವ ತೆಗೆದುಕೊಂಡಿಲ್ಲ. ಲೋಕಸಭೆ ಚುನಾವಣೆಯಲ್ಲಿ ಪುತ್ರ ನವೀನ್ ಜಿಂದಾಲ್ ಪರ ಪ್ರಚಾರ ಮಾಡಿದ್ದೇನೆ,ʼ ಎಂದು ತಿಳಿಸಿದರು. 

ಕುರುಕ್ಷೇತ್ರದ ಹಾಲಿ ಬಿಜೆಪಿ ಸಂಸದ ನವೀನ್ ಜಿಂದಾಲ್, ಮಾರ್ಚ್‌ ನಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರ ಮಾಡಿದರು. ಹಿಸಾರ್‌ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಮತ್ತು ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಸಮ್ಮುಖದಲ್ಲಿ ಅವರು ಬಿಜೆಪಿಗೆ ಸೇರಿದ್ದರು.

ʻತಾವು 20 ವರ್ಷದಿಂದ ಸಾರ್ವಜನಿಕ ಸೇವೆ ಮಾಡುತ್ತಿದ್ದು, ತಮಗೆ ಮತ್ತೊಮ್ಮೆ ಅವಕಾಶ ನೀಡಬೇಕು. ಇದು ನನ್ನ ಕೊನೆಯ ಚುನಾವಣೆ. ಹಿಸಾರ್‌ನಲ್ಲಿ ಅಪೂರ್ಣವಾಗಿರುವ ಕೆಲಸಗಳನ್ನು ಪೂರ್ಣಗೊಳಿಸುತ್ತೇನೆ,ʼ ಎಂದು ಸಾವಿತ್ರಿ ಹೇಳಿದರು. 

ಕಾಂಗ್ರೆಸ್‌ ತೊರೆದಿಲ್ಲ: ತಾವು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಯಾವುದೇ ಪಕ್ಷದ ಜೊತೆ ಮಾತುಕತೆ ಇಲ್ಲ. ಹೂಡಾ ಸಾಹಿಬ್ ತಮ್ಮ ಹಿರಿಯ ಸಹೋದರ. ತನಗೆ ರಾಜಕೀಯವನ್ನು ಕಲಿಸಿದ್ದು ಅವರೇ,ʼ ಎಂದು ಹೇಳಿದ್ದಾರೆ.

2014ರಲ್ಲಿ ಕಾಂಗ್ರೆಸ್ಸಿನಿಂದ ಕಣಕ್ಕಿಳಿದಿದ್ದ ಕಮಲ್ ಗುಪ್ತಾ ವಿರುದ್ಧ ಸಾವಿತ್ರಿ ಸೋಲು ಅನುಭವಿಸಿದ್ದರು. ಗುಪ್ತಾ ಈಗ ಬಿಜೆಪಿ ಯಲ್ಲಿದ್ದಾರೆ. ಕಾಂಗ್ರೆಸ್ ರಾಮ್ ನಿವಾಸ್ ರಾರ ಅವರನ್ನು ಕಣಕ್ಕಿಳಿಸಿದೆ.

Tags:    

Similar News