ʻಪ್ರಧಾನಿ ಮೋದಿ ಅವರಿಂದ ಅಂಬೇಡ್ಕರ್‌ಗೆ ಅವಮಾನʼ: ಕಾಂಗ್ರೆಸ್ ಖಂಡನೆ

ಅಸ್ತಿತ್ವದಲ್ಲಿರುವ ಕಾನೂನುಗಳು "ಕೋಮು ನಾಗರಿಕ ಸಂಹಿತೆ" ಮತ್ತು ತಾರತಮ್ಯದಿಂದ ಕೂಡಿರುವುದರಿಂದ "ಜಾತ್ಯತೀತ ನಾಗರಿಕ ಸಂಹಿತೆ" ಈ ಸಮಯದ ಅಗತ್ಯವಾಗಿದೆ ಎಂದು ಮೋದಿ ಹೇಳಿದ ಹಿನ್ನೆಲೆಯಲ್ಲಿ ಕಾಂಗ್ರೆನ್‌ ಖಂಡಿಸಿದೆ.;

Update: 2024-08-15 10:55 GMT

ಪ್ರಧಾನಿ ನರೇಂದ್ರ ಮೋದಿಯವರ "ಕೋಮು ನಾಗರಿಕ ಸಂಹಿತೆ" ಹೇಳಿಕೆಗೆ ಕಾಂಗ್ರೆಸ್ ಗುರುವಾರ ಖಂಡಿಸಿದ್ದು, ʻʻಇದು ಬಿಆರ್ ಅಂಬೇಡ್ಕರ್ ಅವರಿಗೆ ಮಾಡಿದ "ಘೋರ ಅವಮಾನ" ಮತ್ತು ಪ್ರಧಾನಿಯ ದುರುದ್ದೇಶ, ಕಿಡಿಗೇಡಿತನʼʼ ಎಂದು ಆರೋಪಿಸಿದೆ.

ಅಸ್ತಿತ್ವದಲ್ಲಿರುವ ಕಾನೂನುಗಳು "ಕೋಮು ನಾಗರಿಕ ಸಂಹಿತೆ" ಮತ್ತು ತಾರತಮ್ಯದಿಂದ ಕೂಡಿರುವುದರಿಂದ "ಜಾತ್ಯತೀತ ನಾಗರಿಕ ಸಂಹಿತೆ"ಯ ಅಗತ್ಯತೆ ಇದೆ ಎಂದು ಮೋದಿ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಖಂಡನೆ ವ್ಯಕ್ತವಾಗಿದೆ.

ಸ್ವಾತಂತ್ಯ ದಿನಾಚರಣೆ ಅಂಗವಾಗಿ ಕೆಂಪು ಕೋಟೆಯ ಆವರಣದಲ್ಲಿ ಧ್ವಜಾರೋಹಣ ಮಾಡಿ, ಬಳಿಕ ಭಾಷಣ ಮಾಡಿದ ಪ್ರಧಾನಿ ಮೋದಿ ಅವರು, ʻʻನಾಗರಿಕ ಸಂಹಿತೆಯು ಒಂದು ರೀತಿಯಲ್ಲಿ ಕೋಮು ನಾಗರಿಕ ಸಂಹಿತೆಯಾಗಿದೆ. ಅದು (ಜನರ ನಡುವೆ ತಾರತಮ್ಯ ಉಂಟುಮಾಡುತ್ತದೆ. ) ದೇಶದ ಜನರು ಇದನ್ನು ಒಪ್ಪುತ್ತಾರೆ, ಇದು ನಿಜವೂ ಹೌದುʼʼ ಎಂದು ಹೇಳಿದರು.

ಪ್ರಧಾನಿಯ ಈ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂವಹನದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ʻʻದುರುದ್ದೇಶ, ಕಿಡಿಗೇಡಿತನಕ್ಕೆ ಜೈವಿಕವಲ್ಲದ ಪ್ರಧಾನಿಗೆ ಯಾವುದೇ ಮಿತಿಯಿಲ್ಲ. ಇಂದು ಅವರ ಮನಸ್ಥಿತಿಯನ್ನು ಪ್ರದೃಶಿಸುತ್ತದೆ. ನಾವು ಇಲ್ಲಿಯವರೆಗೆ 'ಕೋಮು ನಾಗರಿಕ ಸಂಹಿತೆ'ಯನ್ನು ಹೊಂದಿದ್ದೇವೆ ಎಂದು ಹೇಳುವುದು ಡಾ ಅಂಬೇಡ್ಕರ್ ಅವರಿಗೆ ಮಾಡಿದ ಘೋರ ಅವಮಾನವಾಗಿದೆ. 1950 ರ ದಶಕದ ಮಧ್ಯಭಾಗದಲ್ಲಿ ವಾಸ್ತವವಾದ ಹಿಂದೂ ವೈಯಕ್ತಿಕ ಕಾನೂನುಗಳಲ್ಲಿ ಸುಧಾರಣೆಗಳನ್ನು ಮಹಾನ್‌ ವ್ಯಕ್ತಿ ಅಂಬೇಡ್ಕರ್.‌ ಅವರ ಈ ಸುಧಾರಣೆಗಳನ್ನು ಆರ್‌ಎಸ್‌ಎಸ್ ಮತ್ತು ಜನಸಂಘದಿಂದ ಕಟುವಾಗಿ ವಿರೋಧಿಸಲಾಯಿತುʼʼ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.


Tags:    

Similar News