ರೈತರ ಪ್ರತಿಭಟನಾ ಪೋಸ್ಟ್ ನಿರ್ಬಂಧ ಆದೇಶಕ್ಕೆ ನೋ ಎಂದ "ಎಕ್ಸ್" !
ರೈತರ ಹೋರಾಟವನ್ನು ಕೇಂದ್ರ ಸರ್ಕಾರ ಹತ್ತಿಕ್ಕುತ್ತಿದೆ ಎನ್ನುವ ಆರೋಪದ ನಡುವೆಯೇ ಆದೇಶ;
ದೇಶದಲ್ಲಿ ರೈತರ "ದೆಹಲಿ ಚಲೋ" ಆಂದೋಲನ ಇದೀಗ ತೀವ್ರ ಸ್ವರೂಪವನ್ನು ಪಡೆದುಕೊಂಡಿದ್ದು, ಯವ ರೈತರೊಬ್ಬರು ಪ್ರತಿಭಟನೆಯಲ್ಲಿ ಸಾವನ್ನಪ್ಪಿದ್ದಾರೆ.
ರೈತರ ಹೋರಾಟವನ್ನು ಕೇಂದ್ರ ಸರ್ಕಾರ ಹತ್ತಿಕ್ಕುತ್ತಿದೆ ಎನ್ನುವ ಆರೋಪದ ನಡುವೆಯೇ ರೈತರ ಪ್ರತಿಭಟನೆಗಳಿಗೆ ಸಂಬಂಧಿಸಿದ ಖಾತೆಗಳು ಹಾಗೂ ಪೋಸ್ಟ್‌ಗಳನ್ನು ನಿರ್ಬಂಧಿಸುವಂತೆ ಕೇಂದ್ರ ಸರ್ಕಾರ ಸಮಾಜಿಕ ಮಾಧ್ಯಮ ಎಕ್ಸ್‌ಗೆ (ಟ್ವಿಟ್ಟರ್) ಆದೇಶ ನೀಡಿತ್ತು.
ಆದರೆ, ಎಕ್ಸ್ ಈ ಆದೇಶಕ್ಕೆ ಅಸಮ್ಮತಿ ಸೂಚಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುವುದಾಗಿ ಎಕ್ಸ್ ಹೇಳಿದೆ.
ಗೃಹ ಸಚಿವಾಲಯದ ಕೋರಿಕೆಯ ಮೇರೆಗೆ ರೈತರ ಪ್ರತಿಭಟನೆಗೆ ಸಂಬಂಧಿಸಿದ 177 ಖಾತೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲು ದೃಶ್ಯ ಮತ್ತು ಐಟಿ ಸಚಿವಾಲಯವು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ನಿರ್ದೇಶನ ನೀಡಿದ್ದು ವರದಿಯಾಗಿತ್ತು.
ಕೇಂದ್ರ ಸರ್ಕಾರವು ಎಕ್ಸ್‌ನ ಕೆಲವು ನಿರ್ದಿಷ್ಟ ಖಾತೆಗಳು ಮತ್ತು ಪೋಸ್ಟ್‌ಗಳ ಮೇಲೆ ತಾತ್ಕಾಲಿಕ ನಿರ್ಬಂಧಕ್ಕೆ ವಿಧಿಸುವಂತೆ ಆದೇಶ ನೀಡಿತ್ತು. ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಲು ನಿರ್ದೇಶನ ನೀಡಿದ್ದ ಎಕ್ಸ್ ಖಾತೆದಾರರ ಮೇಲೆ ಕೆಲವು ಪ್ರಕರಣಗಳಿವೆ.
ಆರೋಪಗಳೂ ಕೇಳಿ ಬಂದಿವೆ ಎನ್ನಲಾಗಿದೆ. ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಎಕ್ಸ್ ನಾವು ಭಾರತದಲ್ಲಿ ಮಾತ್ರ ಈ ಖಾತೆಗಳು ಮತ್ತು ಪೋಸ್ಟ್‌ಗಳನ್ನು ತಡೆಹಿಡಿಯುತ್ತೇವೆ.
ಆದಾಗ್ಯೂ, ನಾವು ಇದನ್ನು ಒಪ್ಪುವುದಿಲ್ಲ ಈ ಕ್ರಮಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ದೃಷ್ಟಿಯನ್ನು ಒಳಗೊಂಡಿದೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ಹೇಳಿದೆ.
ಸಾಮಾಜಿಕ ಮಾಧ್ಯಮಗಳ ಮೇಲೆ ನಿಯಂತ್ರಣ ಸಾಧಿಸುವ ಭಾರತ ಸರ್ಕಾರದ ಆದೇಶಗಳನ್ನು ಪ್ರಶ್ನಿಸಿ ರಿಟ್ ಮೇಲ್ಮನವಿ ಬಾಕಿ ಉಳಿದಿದೆ.
ಅಲ್ಲದೇ ಪಾರದರ್ಶಕತೆಯನ್ನು ಕಾಪಾಡುವ ಉದ್ದೇಶದಿಂದ ಈ ಆದೇಶವನ್ನು ಸಾರ್ವಜನಿಕಗೊಳಿಸುವಂತೆ ಕರೆ ನೀಡಿದೆ.