Kisan Mahapanchayat: ಜನವರಿಗೆ 4ರಂದು ರೈತರಿಂದ ಕಿಸಾನ್‌ ಮಹಾಪಂಚಾಯತ್‌

Kisan Mahapanchayat : ಎಸ್‌ಎಸ್‌ಕೆ (ರಾಜಕೀಯೇತರ) ನಾಯಕ ಕಾಕಾ ಸಿಂಗ್ ಕೊಟ್ರಾ ಮಾತನಾಡಿ, 70 ವರ್ಷದ ಅವರು ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಇದು ಶನಿವಾರ 33 ನೇ ದಿನಕ್ಕೆ ಕಾಲಿಟ್ಟಿದೆ.

Update: 2024-12-29 08:13 GMT
ಉಪವಾಸ ಸತ್ಯಾಗ್ರಹ ಮಾಡುತ್ತಿರುವ ದಲ್ಲೇವಾಲ್‌

ಕೇಂದ್ರ ಸರಕಾರದ ವಿರುದ್ಧ ಹೋರಾಟ ನಡೆಸುತ್ತಿರುವ ರೈತರು ಶನಿವಾರ ಜನವರಿ 4ರಂದು ಖಾನೌರಿ ಪ್ರತಿಭಟನಾ ಸ್ಥಳದಲ್ಲಿ 'ಕಿಸಾನ್ ಮಹಾಪಂಚಾಯತ್'ಗೆ ಕರೆ ನೀಡಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಈ ಹಿಂದೆ ಡಿಸೆಂಬರ್ 30 ರಂದು ಪಂಜಾಬ್ ಬಂದ್‌ಗೆ ಕರೆ ನೀಡಿದ್ದವು.

ಒಂದು ತಿಂಗಳಿನಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸದ ಪಂಜಾಬ್ ಸರ್ಕಾರವನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ಎಸ್‌ಎಸ್‌ಕೆ (ರಾಜಕೀಯೇತರ) ನಾಯಕ ಕಾಕಾ ಸಿಂಗ್ ಕೊಟ್ರಾ ಮಾತನಾಡಿ, 70 ವರ್ಷದ ಅವರು ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಇದು ಶನಿವಾರ 33 ನೇ ದಿನಕ್ಕೆ ಕಾಲಿಟ್ಟಿದೆ.

"ಜನವರಿ 4 ರಂದು ಖನೌರಿಯಲ್ಲಿ, ನಾವು ದೊಡ್ಡ ಕಿಸಾನ್ ಮಹಾಪಂಚಾಯತ್ ನಡೆಸುತ್ತೇವೆ. ಇದರಲ್ಲಿ ವಿವಿಧ ರಾಜ್ಯಗಳ ರೈತರು ಭಾಗವಹಿಸಲಿದ್ದಾರೆ" ಎಂದು ಕೊಟ್ರಾ ಖನೌರಿ ಪ್ರತಿಭಟನಾ ಸ್ಥಳದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಇದೇ ವೇಳೆ ದಲ್ಲೆವಾಲ್ ಅವರನ್ನು ಇತರ ರೈತ ಮುಖಂಡರು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗದ ಪಂಜಾಬ್‌ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ದಲ್ಲೆವಾಲ್ ವೀಡಿಯೊ ಸಂದೇಶದಲ್ಲಿ ಮಾತನಾಡಿ, "ನಾನು ಉಪವಾಸ ಕುಳಿತಿದ್ದೇನೆ. ಸುಪ್ರೀಂ ಕೋರ್ಟ್‌ಗೆ ಈ ವರದಿಯನ್ನು ಯಾರು ನೀಡಿದರು. ನನ್ನನ್ನು ಒತ್ತೆಯಾಳಾಗಿ ಇರಿಸಲಾಗಿದೆ ಎಂಬ ತಪ್ಪು ಕಲ್ಪನೆ ಯಾರು ಹರಡಿದರು. ಅಂತಹ ವಿಷಯ ಎಲ್ಲಿಂದ ಬಂತು? "ಈ ದೇಶದಲ್ಲಿ ಏಳು ಲಕ್ಷ ರೈತರು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರನ್ನು ಉಳಿಸುವುದು ಅವಶ್ಯಕ, ಆದ್ದರಿಂದ, ನಾನು ಇಲ್ಲಿ ಕುಳಿತಿದ್ದೇನೆ, ನಾನು ಯಾರ ಒತ್ತಡಕ್ಕೂ ಒಳಗಾಗಿಲ್ಲ" ಎಂದು ಅವರು ಹೇಳಿದರು.

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಕಾನೂನು ಖಾತರಿ ಸೇರಿದಂತೆ ರೈತರ ಬೇಡಿಕೆಗಳನ್ನು ಸ್ವೀಕರಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಪತ್ರ ಬರೆದಿದ್ದೇನೆ ಎಂದು ದಲ್ಲೆವಾಲ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

"ಬಹುಶಃ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುತ್ತದೆ ಎಂದು ನಾವು ಭಾವಿಸಿದ್ದೆವು" ಎಂದು ಅವರು ಹೇಳಿದರು. ನ್ಯಾಯಾಲಯ ಮಧ್ಯಪ್ರವೇಶಿಸಿದ್ದಕ್ಕೆ ಅವರು ಸಂತೋಷಪಟ್ಟರು.

ಮಹಾಪಂಚಾಯತ್ನಲ್ಲಿ ದಲ್ಲೆವಾಲ್ ಮಾತನಾಡಬಹುದು ಎಂದು ರೈತ ಮುಖಂಡ ಅಭಿಮನ್ಯು ಕೊಹಾರ್ ಹೇಳಿದ್ದಾರೆ. ರೈತರ ಬೇಡಿಕೆಗಳಿಗೆ ಸರ್ಕಾರ ಒಪ್ಪುವವರೆಗೂ ಉಪವಾಸ ನಿಲ್ಲಿಸುವುದಿಲ್ಲ ಎಂದು ದಲ್ಲೆವಾಲ್ ಈ ಹಿಂದೆ ಹೇಳಿದ್ದರು.

ಕೋರ್ಟ್‌ ಸೂಚನೆ

ಶನಿವಾರ, ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಸುಧಾಂಶು ಧುಲಿಯಾ ಅವರ ರಜಾಕಾಲದ ಪೀಠವು, ದಲ್ಲೆವಾಲ್ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಡಿಸೆಂಬರ್ 31 ರವರೆಗೆ ಪಂಜಾಬ್ ಸರ್ಕಾರಕ್ಕೆ ನಿಗದಿ ಮಾಡಿದೆ. .

ಅಸಹಾಯಕತೆ ವ್ಯಕ್ತಪಡಿಸಿದ ಪಂಜಾಬ್ ಸರ್ಕಾರ, ದಲ್ಲೆವಾಲ್ ಅವರನ್ನು ಸುತ್ತುವರಿದಿರುವ ಪ್ರತಿಭಟನಾ ನಿರತ ರೈತರಿಂದ ಭಾರಿ ಪ್ರತಿರೋಧ ಎದುರಿಸುತ್ತಿದ್ದೇವೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯದಂತೆ ತಡೆಯುತ್ತಿದೆ ಎಂದು ಹೇಳಿದೆ. 

Tags:    

Similar News