ಮನೀಶ್ ಸಿಸೋಡಿಯಾ ನ್ಯಾಯಾಂಗ ಬಂಧನ ಮೇ 30ರವರೆಗೆ ವಿಸ್ತರಣೆ

Update: 2024-05-15 11:51 GMT

ದೆಹಲಿಯ ಎಎಪಿ ನಾಯಕ ಮತ್ತು ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನ್ಯಾಯಾಂಗ ಬಂಧನವನ್ನು ನ್ಯಾಯಾಲಯ ಮೇ 30 ರವರೆಗೆ ವಿಸ್ತರಿಸಿದೆ. 

ಸಿಬಿಐ ಮತ್ತು ಇಡಿ ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು ಪ್ರಕರಣದ ಆರೋಪಗಳನ್ನು ರೂಪಿಸುವ ಕುರಿತು ಹೆಚ್ಚಿನ ವಾದಗಳನ್ನು ಮೇ 30 ಕ್ಕೆ ನಿಗದಿಪಡಿಸಿದ್ದಾರೆ. ಆರೋಪದ ಮೇಲಿನ ವಾದವನ್ನು ಮುಂದೂಡುವ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ಬಾಕಿ ಉಳಿದಿದೆ ಎಂಬುದನ್ನು ನ್ಯಾಯಾಧೀಶರು ಗಮನಿಸಿದರು. ಸಿಸೋಡಿಯಾ ಮತ್ತು ಬಂಧಿತ ಆರೋಪಿಗಳನ್ನು ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸ ಲಾಯಿತು.

ಸಿಬಿಐ ಮತ್ತು ಇಡಿ ಸಲ್ಲಿಸಿದ್ದ ಭ್ರಷ್ಟಾಚಾರ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಸಿಸೋಡಿಯಾ ಅವರ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ಏಪ್ರಿಲ್ 30 ರಂದು ವಜಾಗೊಳಿಸಿತ್ತು. ಎರಡೂ ಪಕ್ಷಗಳ ವಕೀಲರ ವಾದ ಆಲಿಸಿದ ಬಳಿಕ ಕೋರ್ಟ್ ಆದೇಶವನ್ನು ಕಾಯ್ದಿರಿಸಿತ್ತು.

Tags:    

Similar News