ವಾಟ್ಸಾಪ್‌ನಲ್ಲಿ 'ವಿಕಸಿತ ಭಾರತ್' ಸಂದೇಶ ನಿಲ್ಲಿಸಿ: ಇಸಿ

Update: 2024-03-21 12:29 GMT

ʻವಿಕಸಿತ ಭಾರತ್ ಸಂಪರ್ಕʼ ದಡಿ ಸಾರಾಸಗಟು ವಾಟ್ಸಾಪ್‌ ಸಂದೇಶ ಕಳುಹಿಸುವುದನ್ನುತಕ್ಷಣ ನಿಲ್ಲಿಸಬೇಕೆಂದು ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ಗುರುವಾರ ನಿರ್ದೇಶನ ನೀಡಿದೆ. 

ಈ ಬಗ್ಗೆ ದೂರು ಸ್ವೀಕರಿಸಿದ್ದ ಆಯೋಗ, ತಕ್ಷಣವೇ ಸಂದೇಶ ರವಾನೆ ಸ್ಥಗಿತಗೊಳಿಸಬೇಕೆಂದು ದೂರಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ. ಮತ್ತು, ಸಚಿವಾಲಯದಿಂದ ಅನುಸರಣೆ ವರದಿಯನ್ನುಕೇಳಿದೆ. ಮಾ. 16 ರಂದು ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಗೆ ಬರುವ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರ ಪತ್ರದೊಂದಿಗೆ ಸಂದೇಶ ಕಳುಹಿಸಲಾಗಿದೆ ಎಂದು ಸಚಿವಾಲಯವು ಆಯೋಗಕ್ಕೆ ತಿಳಿಸಿತ್ತು. 

ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಸಮೂಹ ಸಂದೇಶ ರವಾನೆಗೆ ಆಕ್ಷೇಪಣೆ ಎತ್ತಿದ್ದವು. ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ವಿನಂತಿಸಿದ್ದವು. 

ಸಾರ್ವತ್ರಿಕ ಚುನಾವಣೆಗಳು ಘೋಷಣೆಯಾಗಿ, ನೀತಿ ಸಂಹಿತೆ ಜಾರಿಗೆ ಬಂದರೂ ಸರ್ಕಾರದ ಉಪಕ್ರಮಗಳನ್ನುಪ್ರಚುರಪಡಿಸುವ ಇಂತಹ ಸಂದೇಶಗಳನ್ನು ನಾಗರಿಕರಿಗೆ ಫೋನ್‌ ಮೂಲಕ ತಲುಪಿಸಲಾಗುತ್ತಿದೆ ಎಂದು ಚುನಾವಣಾ ಪ್ರಾಧಿಕಾರಕ್ಕೆ ಹಲವಾರು ದೂರುಗಳು ಬಂದಿವೆ.

Tags:    

Similar News