ದೀಪಾ ಕರ್ಮಾರ್ಕರ್‌ ಗೆ ಏಷ್ಯನ್ ಸೀನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ

Update: 2024-05-27 09:51 GMT

ತಾಷ್ಕೆಂಟ್, ಮೇ 26- ಅಗ್ರ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅವರು ಏಷ್ಯನ್ ಸೀನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಉಜ್ಬೇಕಿಸ್ತಾನದ ರಾಜಧಾನಿಯಲ್ಲಿ ನಡೆದ ಸ್ಪರ್ಧೆಯಲ್ಲಿ ದೀಪಾ(30) ಅವರು ಜಿಗಿತ(ವಾಲ್ಟ್)‌ದಲ್ಲಿ ಸರಾಸರಿ 13.566 ಅಂಕ ಗಳಿಸಿದರು. ಉತ್ತ ರ ಕೊರಿಯದ ಕಿಮ್ ಸನ್ ಹಯಾಂಗ್ (13.466) ಬೆಳ್ಳಿ ಮತ್ತು ಜೋ ಕ್ಯೊಂಗ್ ಬಯೋಲ್ (12.966) ಕಂಚಿನ ಪದಕ ಪಡೆದುಕೊಂಡರು. 

2015ರಲ್ಲಿ ಕಂಚಿನ ಪದಕ ಗೆದ್ದಿದ್ದ ಅವರು, 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು. ಈ ಮುನ್ನ 2015ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಆಶಿಶ್ ಕುಮಾರ್ ಹಾಗೂ ಪ್ರಣತಿ ನಾಯಕ್ 2019 ಮತ್ತು 2022 ರಲ್ಲಿ ಕಂಚಿನ ಪದಕ ಗೆದ್ದಿದ್ದರು.

ʻಏಷ್ಯನ್ ಜಿಮ್ನಾಸ್ಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಇತಿಹಾಸ ರಚಿಸಲಾಗಿದೆ. ಚಿನ್ನ ಗಳಿಸಿದ ನಿಮಗೆ ಅಭಿನಂದನೆ,ʼ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ ಟ್ವೀಟ್ ಮಾಡಿದೆ. 

ತ್ರಿಪುರಾದ ಜಿಮ್ನಾಸ್ಟ್ ಮತ್ತೊಂದು ಅತಿ ಅಪರೂಪದ ಸಾಧನೆ ಮಾಡಿದ್ದು, ಟರ್ಕಿಯ ಮರ್ಸಿನ್‌ನಲ್ಲಿ ನಡೆದ 2018 ರ ಎಫ್‌ಐಜಿ ವಿಶ್ವ ಕಪ್‌ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಆದರೆ, ಉದ್ದೀಪನ ವಸ್ತು ಸೇವನೆ ಅಪರಾಧಕ್ಕೆ 21 ತಿಂಗಳ ಅಮಾನತುಗೊಂಡಿದ್ದ ಅವರು ಕಳೆದ ವರ್ಷ ಆಟಕ್ಕೆ ಮರಳಿದ್ದರು.ದೋಹಾದಲ್ಲಿ ಏಪ್ರಿಲ್‌ನಲ್ಲಿ ನಡೆದ ಎಫ್‌ಐಜಿ ಅಪ್ಪರೇಟಸ್‌ ವಿಶ್ವ ಕಪ್‌ ನಲ್ಲಿ 4ನೆಯವರಾಗಿದ್ದರು. ಕೈರೋ (ಫೆಬ್ರವರಿ 15-18) ವಿಶ್ವ ಕಪ್‌ನಲ್ಲಿ ಐದನೇ ಸ್ಥಾನ ಗಳಿಸಿ ದ್ದರು.

ಏಷ್ಯನ್ ಚಾಂಪಿಯನ್‌ಶಿಪ್ ಅಂತಿಮ ಒಲಿಂಪಿಕ್ ಅರ್ಹತಾ ಪಂದ್ಯವಾಗಿದೆ. ಶುಕ್ರವಾರ 46.166 ಅಂಕಗಳೊಂದಿಗೆ ಆಲ್ ರೌಂಡ್ ವಿಭಾಗದಲ್ಲಿ 16ನೇ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ ಗೆ ಅರ್ಹತೆ ಪಡೆದಿಲ್ಲ.


Tags:    

Similar News