ದೆಹಲಿ ಮೆಟ್ರೋ ಟಿಕೆಟ್ ದರ 8 ವರ್ಷಗಳ ನಂತರ ಏರಿಕೆ

ಭಾನುವಾರ ಮತ್ತು ರಾಷ್ಟ್ರೀಯ ರಜಾದಿನಗಳಂದು 32 ಕಿಲೋಮೀಟರ್‌ಗಿಂತ ಹೆಚ್ಚಿನ ಪ್ರಯಾಣಕ್ಕೆ ಈ ಹಿಂದೆ 50 ಇದ್ದ ದರವನ್ನು 54 ರೂ.ಗೆ ಪರಿಷ್ಕರಿಸಲಾಗಿದೆ.;

Update: 2025-08-25 04:25 GMT

ದೆಹಲಿ ಮೆಟ್ರೋ ಪ್ರಯಾಣಿಕರು ಸೋಮವಾರದಿಂದ (ಆಗಸ್ಟ್ 25, 2025) ತಮ್ಮ ದೈನಂದಿನ ಪ್ರಯಾಣಕ್ಕೆ ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ದೆಹಲಿ ಮೆಟ್ರೋ ರೈಲು ನಿಗಮವು (DMRC) ಎಂಟು ವರ್ಷಗಳ ನಂತರ ಮೊದಲ ಬಾರಿಗೆ ದರ ಏರಿಕೆಯನ್ನು ಪ್ರಕಟಿಸಿದೆ. ಈ ದರ ಹೆಚ್ಚಳವು ಪ್ರಯಾಣದ ದೂರವನ್ನು ಅವಲಂಬಿಸಿ 1 ರಿಂದ 4 ರೂಪಾಯಿ ಏರಿಕೆಯಾಗಿದ್ದು. ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಲೈನ್‌ನಲ್ಲಿ 5 ರೂ.ವರೆಗೆ ಹೆಚ್ಚಳವಾಗಿದೆ.

ಪರಿಷ್ಕೃತ ದರಗಳ ಪ್ರಕಾರ, 2 ಕಿಲೋಮೀಟರ್‌ವರೆಗಿನ ಅಲ್ಪ ದೂರದ ಪ್ರಯಾಣಕ್ಕೆ ಈ ಹಿಂದೆ ಇದ್ದ 10 ದರವು ಈಗ 11 ರೂ. ಆಗಿದೆ. 12 ರಿಂದ 21 ಕಿಲೋಮೀಟರ್ ಪ್ರಯಾಣಿಸುವವರು ಇನ್ನು ಮುಂದೆ 40 ಬದಲಿಗೆ 43 ರೂ. ಪಾವತಿಸಬೇಕು. ಹಾಗೆಯೇ, 21 ರಿಂದ 32 ಕಿಲೋಮೀಟರ್ ದೂರದ ಪ್ರಯಾಣದ ದರವನ್ನು 50 ರಿಂದ 54 ರೂ. ಕ್ಕೆ ಮತ್ತು 32 ಕಿಲೋಮೀಟರ್‌ಗಿಂತ ಹೆಚ್ಚಿನ ದೂರದ ಪ್ರಯಾಣಕ್ಕೆ ಗರಿಷ್ಠ ದರವನ್ನು 60 ರಿಂದ 64 ರೂ.ಗೆ ಏರಿಸಲಾಗಿದೆ.

ಭಾನುವಾರ ಮತ್ತು ರಾಷ್ಟ್ರೀಯ ರಜಾದಿನಗಳಂದು 32 ಕಿಲೋಮೀಟರ್‌ಗಿಂತ ಹೆಚ್ಚಿನ ಪ್ರಯಾಣಕ್ಕೆ ಈ ಹಿಂದೆ 50 ಇದ್ದ ದರವನ್ನು 54 ರೂ.ಗೆ ಪರಿಷ್ಕರಿಸಲಾಗಿದೆ.

ಹೆಚ್ಚುತ್ತಿರುವ ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚಗಳನ್ನು ಸರಿದೂಗಿಸಲು ಈ "ಕನಿಷ್ಠ" ದರ ಏರಿಕೆ ಅಗತ್ಯವಾಗಿದೆ ಎಂದು ಡಿಎಂಆರ್‌ಸಿ ಅಧಿಕಾರಿಗಳು ತಿಳಿಸಿದ್ದಾರೆ. 2017ರಲ್ಲಿ ಕೊನೆಯ ಬಾರಿಗೆ ಮೆಟ್ರೋ ದರಗಳನ್ನು ಹೆಚ್ಚಿಸಲಾಗಿತ್ತು. ಸೇವೆಯ ಗುಣಮಟ್ಟ, ಸುರಕ್ಷತೆ ಮತ್ತು ಭವಿಷ್ಯದ ಜಾಲ ವಿಸ್ತರಣೆಯನ್ನು ಕಾಪಾಡಿಕೊಳ್ಳಲು ಈ ಪರಿಷ್ಕರಣೆ ಅಗತ್ಯ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಾಂಕ್ರಾಮಿಕ ರೋಗಕ್ಕೂ ಮುನ್ನ ದೆಹಲಿ ಮೆಟ್ರೋದಲ್ಲಿ ಪ್ರತಿದಿನ 6 ದಶಲಕ್ಷಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು.

Tags:    

Similar News