ಕವಿತಾಗೆ ಜಾಮೀನು ನಿರಾಕರಣೆ

Update: 2024-04-08 08:00 GMT

ದೆಹಲಿಯ ಅಬಕಾರಿ ನೀತಿಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಬಿಆರ್‌ಎಸ್ ನಾಯಕಿ ಕೆ. ಕವಿತಾ ಅವರಿಗೆ ಮಧ್ಯಂತರ ಜಾಮೀನು ನೀಡಲು ದೆಹಲಿಯ ನ್ಯಾಯಾಲಯ ಸೋಮವಾರ ನಿರಾಕರಿಸಿದೆ. 

ತಮ್ಮ 16 ವರ್ಷದ ಮಗನಿಗೆ ಪರೀಕ್ಷೆಯಿದ್ದು,ಆತನಿಗೆ ನೈತಿಕ ಮತ್ತು ಭಾವನಾತ್ಮಕ ಬೆಂಬಲ ಕೊಡಬೇಕು ಎಂದು ಕವಿತಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು ʻಸಮಯ ಸರಿಯಿಲ್ಲʼ ಎಂದು ಹೇಳಿ, ಜಾಮೀನು ನಿರಾಕರಿಸಿದರು. ಜಾರಿ ನಿರ್ದೇಶನಾಲಯ (ಇಡಿ) ಜಾಮೀನು ಮನವಿಯನ್ನು ವಿರೋಧಿಸಿತ್ತು. ಕವಿತಾ ಅವರು ಸಾಕ್ಷ್ಯಗಳನ್ನು ನಾಶಪಡಿಸಿದ್ದಾರೆ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಆರೋಪಿಸಿತ್ತು. 

ಇಡಿ ಆರೋಪ: ಕವಿತಾ ಅವರು ದೆಹಲಿಯಲ್ಲಿ ಮದ್ಯ ಮಾರಾಟ ಪರವಾನಗಿಯಲ್ಲಿ ದೊಡ್ಡ ಪಾಲು ಪಡೆದ ʼಸೌತ್ ಗ್ರೂಪ್ʼ ನ ಪ್ರಮುಖ ಸದಸ್ಯೆ ಎಂದು ಇಡಿ ಆರೋಪಿಸಿದೆ. ಕವಿತಾ(46) ಅವರನ್ನು ಮಾರ್ಚ್ 15 ರಂದು ಬಂಧಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು.

Tags:    

Similar News