'ದೆಹಲಿ ಚಲೋ': ಖಾನೌರಿ ಗಡಿಯಲ್ಲಿ ಹೃದಯಾಘಾತದಿಂದ 62 ವರ್ಷದ ರೈತ ಸಾವು

ಪಂಜಾಬ್-ಹರಿಯಾಣ ಗಡಿಯಲ್ಲಿರುವ ಖಾನೌರಿಯಲ್ಲಿ 'ದೆಹಲಿ ಚಲೋ' ಆಂದೋಲನದ ಭಾಗವಾಗಿದ್ದ 62 ವರ್ಷದ ರೈತ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.;

Update: 2024-02-23 14:17 GMT
ಪ್ರತಿಭಟನಾಕಾರರ ಸಾವಿನ ಹಿನ್ನಲೆಯಲ್ಲಿ ರೈತ ಮುಖಂಡರು ಬುಧವಾರ 'ದೆಹಲಿ ಚಲೋ' ಪಾದಯಾತ್ರೆಯನ್ನು ಎರಡು ದಿನಗಳ ಕಾಲ ತಡೆಹಿಡಿದು ಮುಂದಿನ ಕ್ರಮವನ್ನು ಶುಕ್ರವಾರ ಸಂಜೆ ನಿರ್ಧರಿಸುವುದಾಗಿ ಹೇಳಿದರು.

ಪಂಜಾಬ್-ಹರಿಯಾಣ ಗಡಿ ಖಾನೌರಿಯಲ್ಲಿ 'ದೆಹಲಿ ಚಲೋ' ಆಂದೋಲನದ ಭಾಗವಾಗಿದ್ದ 62 ವರ್ಷದ ರೈತ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ರೈತ ಮುಖಂಡರೊಬ್ಬರು ಶುಕ್ರವಾರ (ಫೆಬ್ರವರಿ 23) ತಿಳಿಸಿದ್ದಾರೆ.

ಬಟಿಂಡಾ ಜಿಲ್ಲೆಯ ಅಮರ್‌ಗಡ ಗ್ರಾಮದ ದರ್ಶನ್ ಸಿಂಗ್ ಮೃತಪಟ್ಟವರು ಎಂದು ಸರ್ವಾನ್ ಸಿಂಗ್ ಪಂಧೇರ್ ಹೇಳಿದ್ದಾರೆ.

ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ಪಂಜಾಬ್ ಮತ್ತು ಹರಿಯಾಣದ ಶಂಭು ಮತ್ತು ಖಾನೌರಿ ಗಡಿಗಳಲ್ಲಿ ಎಂಎಸ್ಪಿ ಕಾನೂನು ಸೇರಿದಂತೆ ತಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಆಂದೋಲನವನ್ನು ನಡೆಸುತ್ತಿದ್ದರು.

ಇದೇ ಆಂದೋಲನದ ಭಾಗವಾಗಿದ್ದ 72 ವರ್ಷದ ರೈತ ಈ ಹಿಂದೆ ಹೃದಯಘಾತದಿಂದ ಸಾವನ್ನಪ್ಪಿದ್ದರು. ಇದೀಗ ಶಂಭು ಗಡಿಯಲ್ಲಿ 62 ವರ್ಷದ ಮತ್ತೊಬ್ಬ ರೈತ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಬುಧವಾರ, ಹರಿಯಾಣ ಪೊಲೀಸರು ಮತ್ತು ಪಂಜಾಬ್ ರೈತರ ನಡುವಿನ ಘರ್ಷಣೆಯಲ್ಲಿ ಬಟಿಂಡಾ ನಿವಾಸಿ 21 ವರ್ಷದ ಶುಭಕರನ್ ಸಿಂಗ್ ಕೊಲ್ಲಲ್ಪಟ್ಟಿದ್ದರು. ರೈತ ಪ್ರತಿನಿಧಿಗಳು ಮತ್ತು ಸರ್ಕಾರದ ನಡುವಿನ ಮಾತುಕತೆ ಯಾವುದೇ ಪ್ರಗತಿಯಾಗದ ಹಿನ್ನೆಲೆಯಲ್ಲಿ ಖಾನೌರಿಯಲ್ಲಿ ಕೆಲವು ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳತ್ತ ಧಾವಿಸಿದ ಘಟನೆ ನಡೆಯಿತು. ಘರ್ಷಣೆಯಲ್ಲಿ 12 ಪೊಲೀಸ್ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ.

ಸಾವಿನ ಹಿನ್ನಲೆಯಲ್ಲಿ ರೈತ ಮುಖಂಡರು ಬುಧವಾರ (ಫೆ.22) ಶುಕ್ರವಾರ ಸಂಜೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿ ಎರಡು ದಿನಗಳ ಕಾಲ 'ದೆಹಲಿ ಚಲೋ' ಪಾದಯಾತ್ರೆಯನ್ನು ಸ್ಥಗಿತಗೊಳಿಸಿದ್ದರು.

ಸಾವಿರಾರು ರೈತರು ತಮ್ಮ ಟ್ರಾಕ್ಟರ್-ಟ್ರಾಲಿಗಳು ಮತ್ತು ಟ್ರಕ್‌ಗಳೊಂದಿಗೆ ಇನ್ನೂ ರಸ್ತೆಗಳನ್ನು ನಿರ್ಬಂಧಿಸುವುದರೊಂದಿಗೆ ಖಾನೌರಿ ಮತ್ತು ಶಂಭುಗಳಲ್ಲಿ ಧರಣಿ ಕೂರಿದ್ದಾರೆ.

MSP ಮೇಲಿನ ಕಾನೂನಿನ ಜೊತೆಗೆ, ಪಂಜಾಬ್ ರೈತರು ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ, ರೈತರು ಮತ್ತು ಕೃಷಿ ಕಾರ್ಮಿಕರಿಗೆ ಪಿಂಚಣಿ, ವಿದ್ಯುತ್ ದರದಲ್ಲಿ ಯಾವುದೇ ಹೆಚ್ಚಳ, ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುವುದು ಮತ್ತು 2021 ರ ಲಖಿಂಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ "ನ್ಯಾಯ" ಕ್ಕಾಗಿ ಒತ್ತಾಯಿಸುತ್ತಿದ್ದಾರೆ.

2013ರ ಭೂಸ್ವಾಧೀನ ಕಾಯಿದೆಯನ್ನು ಮರುಸ್ಥಾಪಿಸುವುದು ಮತ್ತು 2020-21ರಲ್ಲಿ ಹಿಂದಿನ ಆಂದೋಲನದ ವೇಳೆ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಪರಿಹಾರ ನೀಡುವುದು ಅವರ ಬೇಡಿಕೆಗಳಲ್ಲಿ ಒಂದಾಗಿದೆ.

Tags:    

Similar News