RINL Revival | ವೈಜಾಗ್ ಸ್ಟೀಲ್ ಕಾರ್ಖಾನೆ ಪುನಚ್ಚೇತನ ಪ್ಯಾಕೇಜ್ ಅನುಮೋದನೆ

Update: 2025-01-17 17:39 GMT
ನವದೆಹಲಿ ಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದರು

ತೀವ್ರ ಆರ್ಥಿಕ ನಷ್ಟಕ್ಕೆ ಸಿಲುಕಿ ಖಾಸಗೀಕರಣದ ಹೊಸ್ತಿಲಲ್ಲಿದ್ದ ಆಂಧ್ರ ಪ್ರದೇಶ ವಿಶಾಖಪಟ್ಟಣದ ರಾಷ್ಟ್ರೀಯ ಉಕ್ಕು ಕಾರ್ಖಾನೆಯನ್ನು (RNIL) ₹11,440 ಕೋಟಿ ವೆಚ್ಚದಲ್ಲಿ ಪುನಚ್ಚೇತನಗೊಳಿಸಲು ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಅನುಮೋದನೆ ನೀಡಿದೆ.

ವಾರ್ಷಿಕ 7.3 ದಶಲಕ್ಷ ಟನ್ ಉಕ್ಕು ಉತ್ಪಾದನೆ

ಕಾರ್ಖಾನೆಯ ಪುನಚ್ಚೆತನ ಪ್ಯಾಕೇಜ್ ಪೂರ್ಣ ವಿವರಗಳನ್ನು ಶೀಘ್ರದಲ್ಲಿಯೇ ಉಕ್ಕು ಸಚಿವಾಲಯ ಪ್ರಕಟಿಸಲಿದೆ.  ಮೂರೂ ಬ್ಲಾಸ್ಟ್ ಪರ್ನೆಸ್ ಗಳಿಗೆ ಚಾಲನೆ ಕೊಟ್ಟ ಬಳಿಕ ಪೂರ್ಣ ಪ್ರಮಾಣದ ಉಕ್ಕು ಉತ್ಪಾದನೆಗೆ ಅಗತ್ಯ ಕ್ರಮ ಕೈಗೊಳ್ಳಲಿದೆ.

;ಕಾರ್ಖಾನೆ ಹೊಂದಿರುವ ಸಾಲ ಗಮನದಲ್ಲಿಟ್ಟುಕೊಂಡು ಉತ್ಪಾದನೆಯ ದಕ್ಷತೆ, ಕ್ಷಮತೆ ಹೆಚ್ಚಿಸಲು ನಿರ್ಧರಿಸಲಾಗಿದೆ . ವಾರ್ಷಿಕ 7.3 ದಶಲಕ್ಷ ಟನ್ ಉಕ್ಕು ಉತ್ಪಾದನೆ ಗುರಿ ಮುಟ್ಟಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಶುಕ್ರವಾರ ನವದೆಹಲಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಹೇಳಿದ್ದಾರೆ.

ಎಷ್ಟು ಹೂಡಿಕೆ? ಏನು, ಎತ್ತ?

ವೈಜಾಗ್ ಸ್ಟೀಲ್ ಕಾರ್ಖಾನೆಗೆ ಈ ಪ್ಯಾಕೇಜ್ ನಲ್ಲಿ 10,300 ಕೋಟಿ ಹೂಡಿಕೆ ಮಾಡಲಾಗುವುದು ಹಾಗೂ 1,140 ಕೋಟಿಯನ್ನು ಷೇರು ರೂಪದಲ್ಲಿ ನಿರ್ವಹಣಾ ಬಂಡವಾಳವಾಗಿ ತೊಡಗಿಸಲಾಗುವುದು. ಈ 1,140 ಕೋಟಿಯನ್ನು ಹತ್ತು ವರ್ಷಗಳ ವರೆಗೂ ವಾಪಸ್ ಪಡೆಯಲು ಅವಕಾಶ ಇರುವುದಿಲ್ಲ.

 ಸಮುದ್ರ ದಂಡೆಯಲ್ಲಿರುವ ದೇಶದ ಅತ್ಯಂತ ವ್ಯೂಹಾತ್ಮಕ ಉಕ್ಕು ಸ್ಥಾವರವನ್ನು ರಕ್ಷಿಸಿಕೊಳ್ಳಲು ಹಾಗೂ ನಿರೀಕ್ಷಿತ ಗುರಿಗಳನ್ನು ಮುಟ್ಟಲು ಸಚಿವಾಲಯ ನಿರ್ಧರಿಸಿದೆ.

2025 ಜನವರಿ ವೇಳೆಗೆ ಎರಡು ಬ್ಲಾಸ್ಟ್ ಫರ್ನೇಸ್‌ಗಳೊಂದಿಗೆ ಮತ್ತು ಆಗಸ್ಟ್ 2025 ರ ವೇಳೆಗೆ ಮೂರು ಬ್ಲಾಸ್ಟ್ ಫರ್ನೇಸ್‌ಗಳೊಂದಿಗೆ ಕಾರ್ಯಾಚರಣೆ ಪುನರಾರಂಭಿಸಲು ಯೋಜಿಸಲಾಗಿದೆ .

5 ವರ್ಷದಲ್ಲಿ 300 ದಶಲಕ್ಷ ಟನ್ ಉಕ್ಕು ಉತ್ಪಾದನೆ 

ಪ್ರಧಾನಿ ನರೇಂದ್ರ ಮೋದಿ ಅವರು 2030ರ ಹೊತ್ತಿಗೆ ದೇಶೀಯವಾಗಿ 300 ದಶಲಕ್ಷ ಟನ್ ಉಕ್ಕು ಉತ್ಪಾದನೆ ಗುರಿಯನ್ನು ನಿಗದಿ ಮಾಡಿದ್ದಾರೆ. ಈ ಗುರಿ ಮುಟ್ಟಲು ಅನೇಕ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. 

ವಿಶಾಪಟ್ಟಣ ಉಕ್ಕು ಕಾರ್ಖಾನೆಯನ್ನು ಪುನಚ್ಚೆತನ ಮಾಡಬೇಕು ಎಂಬುದು ಆಂಧ್ರ ಪ್ರದೇಶ ಜನರ ಬಹುಕಾಲದ ಬೇಡಿಕೆ ಆಗಿತ್ತು. ನಾನು ಉಕ್ಕು ಸಚಿವನಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ನನ್ನ ಮೊದಲ ಅಧಿಕೃತ ಭೇಟಿಯನ್ನು ಈ ಕಾರ್ಖಾನೆಗೆ ನೀಡಿದೆ. ಇಡೀ ಕಾರ್ಖಾನೆ ವೀಕ್ಷಣೆ ಜತೆಗೆ ಆಡಳಿತ ಮಂಡಳಿ ಹಾಗೂ ಕಾರ್ಮಿಕ ಸಂಘಟನೆಗಳ ಜತೆ ಸಭೆ ನಡೆಸಿದ್ದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ವೈಜಾಗ್ ಸ್ಟೀಲ್ ಪುನಚ್ಚೇತನದ ಹೆಜ್ಜೆಗಳು

•2024 ಜೂನ್ ತಿಂಗಳಲ್ಲಿ ಸಾಲ ಪಾವತಿ ಮಾಡಲಾಗದೆ ಕಾರ್ಖಾನೆ ಸುಸ್ತಿ

•2024 ಜುಲೈ 11ರಂದು ವೈಜಾಗ್ ಸ್ಟೀಲ್ ಗೆ ಭೇಟಿ. ಆಗ ಕೇವಲ 3 ಬ್ಲಾಸ್ಟ್ ಪರ್ನ್ ನೇಸ್ ಗಳ ಪೈಕಿ ಕೇವಲ ಒಂದು ಚಾಲನೆಯಲ್ಲಿತ್ತು

•2024 ಜುಲೈನಲ್ಲಿ ಎಸ್ ಬಿಐ ಸೇರಿ ಸಾಲ ನೀಡಿದ್ದ ಬ್ಯಾಂಕ್ ಗಳ ಜತೆ ಸಭೆ

•2024 ಆಗಸ್ಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಪ್ರಧಾನಿ ಮೋದಿ ಅವರ ಜತೆ ವೈಜಾಗ್ ಸ್ಟೀಲ್ ಪುನಚ್ಚೆತನ ಬಗ್ಗೆ ಮಾತುಕತೆ

•2024 ಸೆಪ್ಟೆಂಬರ್ ನಲ್ಲಿ 500 ಕೋಟಿ ಬಿಡುಗಡೆ

•2024 ಸೆಪ್ಟೆಂಬರ್ 29ರಂದು ವಜಾ ಆಗಿದ್ದ 48 ಗಂಟೆಗಳ ಒಳಗಾಗಿ 4,200 ಗುತ್ತಿಗೆ ಕಾರ್ಮಿಕರ ಮರು ನೇಮಕ

•2024 ಸೆಪ್ಟೆಂಬರ್ ನಲ್ಲಿ ಎರಡು ಬ್ಲಾಸ್ಟ್ ಪರ್ನ್ ನೇಸ್ ಗಳ ಮರು ಕಾರ್ಯಾರಂಭ

•2024 ಅಕ್ಟೋಬರ್ 9ರಂದು ಆಂಧ್ರ ಪ್ರದೇಶ ಸಿಎಂ, ಕೇಂದ್ರ ವಿತ್ತ ಸಚಿವರ ಜತೆ ಮಹತ್ವದ ಸಭೆ

•ಎಸ್ ಬಿಐ, ಮಿಕಾನ್ ಗಳಿಂದ ಕಾರ್ಖಾನೆ ಪುನಚ್ಚೆತನ ಯೋಜನೆಗೆ ಸಾಧ್ಯತಾ ವರದಿ ಸ್ವೀಕರಿಸಿದ ಸಚಿವರು

•2024 ಡಿಸೆಂಬರ್ ನಲ್ಲಿ ಮತ್ತೆ ಆಂಧ್ರ ಸಿಎಂ ಜತೆ ಸಭೆ, ಅದಾಗಲೇ 2 ಬ್ಲಾಸ್ಟ್ ಪರ್ನ್ ನೇಸ್ ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಣೆ

•2025 ಜನವರಿ 16ರಂದು ಕೇಂದ್ರದಿಂದ ವೈಜಾಗ್ ಸ್ಟೀಲ್ ಪುನಚ್ಚೆತನ ಪ್ಯಾಕೇಜ್

Tags:    

Similar News