Andhra pradesh | ಪಟಾಕಿ ಸ್ಫೋಟಿಸಿ ಬೈಕ್ ಸವಾರ ಸಾವು; ಮೂವರಿಗೆ ಗಂಭೀರ ಗಾಯ
ಹೆಚ್ಚು ಸದ್ದು ಮಾಡುವ ಪಟಾಕಿಗಳಿದ್ದ ಬ್ಯಾಗ್ ರಸ್ತೆ ಮೇಲೆ ಬಿದ್ದು ಸ್ಫೋಟಿಸಿವೆ. ಸ್ಫೋಟದ ತೀವ್ರತೆಗೆ ಬೈಕ್ ಸವಾರನ ಕಾಲುಗಳು ಹಾಗೂ ದೇಹದ ಭಾಗಗಳು ಛಿದ್ರಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.;
By : The Federal
Update: 2024-10-31 16:41 GMT
ದ್ವಿಚಕ್ರ ವಾಹನದಲ್ಲಿ ಪಟಾಕಿ ಸಾಗಿಸುವಾಗ ಸ್ಫೋಟಗೊಂಡ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಏಲೂರು ಪಟ್ಟಣದಲ್ಲಿ ಗುರುವಾರ ನಡೆದಿದೆ.
ದೀಪಾವಳಿ ಆಚರಿಸಲು ಖರೀದಿಸಿದ ಪಟಾಕಿಗಳ ಚೀಲದೊಂದಿಗೆ ತೆರಳುವಾಗ ಈ ಘಟನೆ ಸಂಭವಿಸಿದೆ.
ಹೆಚ್ಚು ಸದ್ದು ಮಾಡುವ ಪಟಾಕಿಗಳಿದ್ದ ಬ್ಯಾಗ್ ರಸ್ತೆ ಮೇಲೆ ಬಿದ್ದು ಸ್ಫೋಟಿಸಿವೆ. ಸ್ಫೋಟದ ತೀವ್ರತೆಗೆ ಬೈಕ್ ಸವಾರನ ಕಾಲುಗಳು ಹಾಗೂ ದೇಹದ ಭಾಗಗಳು ಛಿದ್ರಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿಂಬದಿ ಸವಾರ ಹಾಗೂ ರಸ್ತೆ ಬದಿ ನಿಂತಿದ್ದ ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಫೋಟ ಸಂಭವಿಸಿದ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿ, ಕೆಲವರು ಓಡಿ ಹೋಗುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.