ಬಿಹಾರ: ವಿಕಾಸಶೀಲ್ ಇನ್ಸಾನ್ ಪಾರ್ಟಿ ಮುಖ್ಯಸ್ಥನ ತಂದೆ ಹತ್ಯೆ
ಜಿತನ್ ಸಹಾನಿ ಅವರ ಎದೆ, ಹೊಟ್ಟೆ ಮೇಲೆ ಕತ್ತರಿಸಿದ ಗುರುತು ಸೇರಿದಂತೆ ಇರಿತದ ಗಾಯಗಳಿವೆ ಎಂದು ವರದಿಯಾಗಿದೆ.
By : The Federal
Update: 2024-07-16 06:06 GMT
ಬಿಹಾರದ ವಿಕಾಸಶೀಲ್ ಇನ್ಸಾನ್ ಪಾರ್ಟಿ (ವಿಐಪಿ) ಮುಖ್ಯಸ್ಥ ಮುಖೇಶ್ ಸಹಾನಿ ಅವರ ತಂದೆ ಜಿತನ್ ಸಹಾನಿ ಅವರನ್ನು ಮಂಗಳವಾರ (ಜುಲೈ 16) ಬೆಳಗ್ಗೆ ದರ್ಬಂಗಾ ಜಿಲ್ಲೆಯ ಅವರ ಪೂರ್ವಜರ ಮನೆಯಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿದೆ.
ಬಿಹಾರ ಸರ್ಕಾರದ ಮಾಜಿ ಸಚಿವ ಮುಕೇಶ್ ಸಹಾನಿ ಅವರು ಇಂಡಿಯಾ ಒಕೂಟದ ಮೈತ್ರಿ ಪಾಲುದಾರ ಪಕ್ಷ ವಿಐಪಿಯ ಮುಖ್ಯಸ್ಥರು. ಘಟನೆಯನ್ನು ದರ್ಭಾಂಗ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಜಗುನಾಥ ರೆಡ್ಡಿ ಖಚಿತಪಡಿಸಿದ್ದಾರೆ.
ಜಿತನ್ ಸಹಾನಿ ಅವರ ದೇಹವು ಎದೆ, ಹೊಟ್ಟೆ ಮೇಲೆ ಕತ್ತರಿಸಿದ ಗುರುತು ಸೇರಿದಂತೆ ಹಲವು ಇರಿತದ ಗಾಯಗಳೊಂದಿಗೆ ಬಿರಾವುಲ್ ಪ್ರದೇಶದ ಅವರ ಮನೆಯ ಕೊಠಡಿಯಲ್ಲಿ ಪತ್ತೆಯಾಗಿದೆ. ಹಿರಿಯ ಅಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸಿ, ತನಿಖೆ ನಡೆಸುತ್ತಿದೆ.
ಮೂವರು ಸದಸ್ಯರ ವಿಶೇಷ ತನಿಖಾ ತಂಡವು ಹತ್ಯೆಯ ತನಿಖೆ ನಡೆಸಲಿದೆ ಎಂದು ವರದಿಯಾಗಿದೆ.