ಟೀಂ ಇಂಡಿಯಾ ಕೋಚ್‌: ಅರ್ಜಿ ಸಲ್ಲಿಸಿದವರಲ್ಲಿ 'ತೆಂಡೂಲ್ಕರ್', 'ಮೋದಿ', 'ಅಮಿತ್ ಶಾ'!

ಮುಖ್ಯ ಕೋಚ್‌ ಹುದ್ದೆಗೆ ಬಿಸಿಸಿಐ 3,000 ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದೆ. ಇದರಲ್ಲಿ ಹೆಚ್ಚಿನ ಅರ್ಜಿಗಳು ನಕಲಿ ಮೇಲ್ ಐಡಿಯಿಂದ ಬಂದಿವೆ.

Update: 2024-05-28 13:41 GMT
ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗೆ ನಾಯಕ ರೋಹಿತ್ ಶರ್ಮಾ ಟಿ20 ವಿಶ್ವಕಪ್‌ಗೆ ಹೊರಟಿದ್ದಾರೆ.

ಟೀಂ ಇಂಡಿಯಾದ ಮುಖ್ಯ ಕೋಚ್‌ ಸ್ಥಾನಕ್ಕೆ ಅರ್ಜಿ ಸಲ್ಲಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿಗದಿಪಡಿಸಿದ ಗಡುವು ಮಂಗಳವಾರ (ಮೇ 27) ಕೊನೆಗೊಂಡಿದೆ. ೩,000 ಕ್ಕೂ ಅಧಿಕ ಅರ್ಜಿ ಸಲ್ಲಿಕೆಯಾಗಿದೆ. ಸಚಿನ್ ತೆಂಡೂಲ್ಕರ್, ಎಂ.ಎಸ್. ಧೋನಿ, ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಹೆಸರಿನಲ್ಲೂ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ವರದಿಯೊಂದು ತಿಳಿಸಿದೆ. 

ಆದರೆ, ಈ ಅರ್ಜಿಗಳನ್ನು ನಕಲಿ ಮೇಲ್ ಐಡಿಗಳ ಮೂಲಕ ಮಂಡಳಿಗೆ ಕಳುಹಿಸಲಾಗಿದೆ. ಬಿಸಿಸಿಐಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅರ್ಜಿಗಳು ಬರುತ್ತಿರುವುದು ಇದೇ ಮೊದಲಲ್ಲ. 

ಜೂನ್‌ನಲ್ಲಿ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಆಯೋಜಿಸಿರುವ ಐಸಿಸಿ ಟಿ20 ವಿಶ್ವಕಪ್‌ನೊಂದಿಗೆ ಟೀಮ್ ಇಂಡಿಯದ ಮುಖ್ಯ ಕೋಚ್ ಆದ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಕೊನೆಗೊಳ್ಳಲಿದೆ. ಮೇ 13 ರಂದು ಬಿಸಿಸಿಐ ಅರ್ಜಿ ಕರೆಯಿತು.ಅಂದಿನಿಂದ ಪ್ರತಿಕ್ರಿಯೆಗಳ ಮಹಾಪೂರ ಹರಿದುಬರುತ್ತಿದೆ.

ಹೊಸ ವಿದ್ಯಮಾನವಲ್ಲ: ʻಕಳೆದ ವರ್ಷವೂ ಬಿಸಿಸಿಐಗೆ ಇಂತಹ ಪ್ರತಿಕ್ರಿಯೆ ಬಂದಿತ್ತು. ಈ ಬಾರಿಯೂ ಅದೇ ಕಥೆ. ಬಿಸಿಸಿಐ ಗೂಗಲ್ ಫಾರ್ಮ್‌ಗಳಲ್ಲಿ ಅರ್ಜಿ ಆಹ್ವಾನಿಸಲು ಕಾರಣವೆಂದರೆ, ಒಂದೇ ಹಾಳೆಯಲ್ಲಿರುವ ಅರ್ಜಿಗಳ ಪರಿಶೀಲನೆ ಸುಲಭ ಎನ್ನುವುದು,ʼಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ. 

2021ರಲ್ಲಿ ರವಿಶಾಸ್ತ್ರಿ ಅವರ ಅಧಿಕಾರಾವಧಿ ಅಂತ್ಯಗೊಂಡಾಗ, ಬಿಸಿಸಿಐ 5,000 ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿತ್ತು. ಇದರಲ್ಲಿ ಹೆಚ್ಚಿನವು ನಕಲಿ ಮೇಲ್ ಐಡಿಗಳ ಮೂಲಕ ಬಂದಿದ್ದವು. ಆದರೆ, ಅದು ಬೇರೆಯದೇ ಜಮಾನ. ಶಾಸ್ತ್ರಿ ಮತ್ತೆ ಕೋಚ್‌ ಆಗುವುದಿಲ್ಲ ಮತ್ತು ವಿರಾಟ್ ಕೊಹ್ಲಿ ಟಿ 20 ನಾಯಕನಾಗಿ ಯಶಸ್ವಿಯಾಗಿದ್ದರು. ನಂತರ, ದ್ರಾವಿಡ್ ಅವರು ಭಾರತ ಎ ಮತ್ತು ಅಂಡರ್ 19 ತಂಡವನ್ನು ಅನೇಕ ಯಶಸ್ಸಿನತ್ತ ಮುನ್ನಡೆಸಿದರು. ಅವರು ಟೀಮ್ ಇಂಡಿಯಾ ದ ಮುಖ್ಯ ಕೋಚ್ ಆಗುವುದು ಖಚಿತವಾಗಿತ್ತು.

ಇಕ್ಕಟ್ಟಿನಲ್ಲಿ ಬಿಸಿಸಿಐ: ಆದರೆ, ಬಿಸಿಸಿಐ ಈ ಬಾರಿ ಸಂಕಷ್ಟಕ್ಕೆ ಸಿಲುಕಿದೆ. 10 ವರ್ಷಗಳ ನಂತರ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮೂರನೇ ಐಪಿಎಲ್ ಪ್ರಶಸ್ತಿ ಗೆಲುವಿಗೆ ಕಾರಣರಾದ ಗೌತಮ್ ಗಂಭೀರ್ ಸ್ಪರ್ಧಿ ಆಗಬಹುದು. ಆದರೆ, ಅವರ ಉಮೇದುವಾರಿಕೆ ಬಗ್ಗೆ ಬಿಸಿಸಿಐ ಇನ್ನೂ ನಿರ್ಧರಿಸಿಲ್ಲ. ಮತ್ತೊಂದೆಡೆ, ವಿ.ವಿ.ಎಸ್. ಲಕ್ಷ್ಮಣ್ ತಮ್ಮ ಎನ್‌ಸಿಎ ಬದ್ಧತೆಗಳಿಂದಾಗಿ ಕೋಚ್‌ ಆಗಲು ಆಸಕ್ತಿ ಹೊಂದಿಲ್ಲ. ನ್ಯೂಜಿಲೆಂಡ್ ಆಟಗಾರ ಸ್ಟೀಫನ್ ಫ್ಲೆಮಿಂಗ್ ಕೂಡ ಹೊರಗುಳಿ ದಿದ್ದಾರೆ. ಮಂಡಳಿ ತಮ್ಮನ್ನು ಸಂಪರ್ಕಿಸಿದೆ ಎಂಬ ಆಸ್ಟ್ರೇಲಿಯದ ಜಸ್ಟಿನ್ ಲ್ಯಾಂಗರ್ ಮತ್ತು ರಿಕಿ ಪಾಂಟಿಂಗ್ ಅವರ ಹೇಳಿಕೆಗಳನ್ನು ಬಿಸಿಸಿಐ ತಳ್ಳಿಹಾಕಿದೆ.

ಜುಲೈನಲ್ಲಿ ಟೀಮ್ ಇಂಡಿಯಾದ ಶ್ರೀಲಂಕಾ ಪ್ರವಾಸದೊಂದಿಗೆ ಮುಂದಿನ ಮುಖ್ಯ ಕೋಚ್ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ.

Tags:    

Similar News