ಹಿಮಾಚಲ ಪ್ರದೇಶ ವಿಧಾನಸಭೆ ಉಪಚುನಾವಣೆ: 6 ಸ್ಥಾನಗಳಲ್ಲಿ 3ರಲ್ಲಿ ಬಿಜೆಪಿ ಮುನ್ನಡೆ

Update: 2024-06-04 07:10 GMT
ಹಿಮಾಚಲ ಪ್ರದೇಶದ ಸೆರಾಜ್‌ನಲ್ಲಿ ಏಳನೇ ಮತ್ತು ಕೊನೆಯ ಹಂತದ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಿದ ಬಿಜೆಪಿ ನಾಯಕ ಜೈ ರಾಮ್ ಠಾಕೂರ್.

ಶಿಮ್ಲಾ, ಜೂನ್ 4 : ಹಿಮಾಚಲ ಪ್ರದೇಶದ ವಿಧಾನಸಭೆ ಉಪ ಚುನಾವಣೆಯಲ್ಲಿ ಈಗ ಬಿಜೆಪಿ ಅಭ್ಯರ್ಥಿಗಳಾಗಿರುವ ಆರು ಕಾಂಗ್ರೆಸ್ ಬಂಡಾಯಗಾರರ ಪೈಕಿ ಮೂವರು ಮುನ್ನಡೆಯಲ್ಲಿದ್ದಾರೆ. 

ಬಿಜೆಪಿಯ ಮಾಜಿ ಸಚಿವ ಸುಧೀರ್ ಶರ್ಮಾ ಅವರು ಧರ್ಮಶಾಲಾದಲ್ಲಿ 615, ಕಟ್ಲೆಹಾರ್‌ನ ಪಕ್ಷದ ಅಭ್ಯರ್ಥಿ ದವೀಂದರ್ ಭುಟ್ಟೊ 397 ಮತ, ಬರ್ಸಾರ್‌ ಕ್ಷೇತ್ರದಿಂದ ಇಂದರ್ ದತ್ ಲಖನ್‌ಪಾಲ್ 1,031 ಹಾಗೂ ಲಹೌಲ್ ಮತ್ತು ಸ್ಪಿತಿ ಕ್ಷೇತ್ರದಲ್ಲಿ ಮಾಜಿ ಸಚಿವ ರಾಮ್ ಲಾಲ್ ಮಾರ್ಕಂಡ 1,354 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. 

2017 ರ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್ ಅವರನ್ನು ಸೋಲಿಸಿದ್ದ ಬಿಜೆಪಿ ನಾಯಕ ರಾಜಿಂದರ್ ರಾಣಾ ಅವರು ಸುಜಾನ್‌ಪುರದಿಂದ 1,351 ಮತ್ತು ಬಿಜೆಪಿಯ ಚೇತನ್ಯ ಶರ್ಮಾ (ಬಿಜೆಪಿ) ಗ್ಯಾಗ್ರೆಟ್‌ನಿಂದ 851 ಮತಗಳಿಂದ ಹಿಂದುಳಿದಿದ್ದಾರೆ. 

ಜೂನ್ 1 ರಂದು ಉಪಚುನಾವಣೆ ನಡೆಯಿತು. ಬಜೆಟ್‌ನಲ್ಲಿ ಕಾಂಗ್ರೆಸ್‌ನ ರಾಜ್ಯ ಸರ್ಕಾರದ ಪರವಾಗಿ ಮತ ಚಲಾಯಿಸಲು ವಿಪ್ ಧಿಕ್ಕರಿಸಿದ ಕಾಂಗ್ರೆಸ್ ಬಂಡಾಯಗಾರರನ್ನು ಅನರ್ಹಗೊಳಿಸಿದ್ದರಿಂದ, ಆರು ವಿಧಾನಸಭಾ ಸ್ಥಾನಗಳು ತೆರವಾದವು.

Tags:    

Similar News