ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನ ತೊರೆಯಲಿರುವ ಅಣ್ಣಾಮಲೈ?
ಅಣ್ಣಾಮಲೈ ಅವರನ್ನು ಬದಲಿಸುವ ಪಕ್ಷದ ಕ್ರಮವನ್ನು 'ಶಿಕ್ಷೆ' ಅಥವಾ ಪದಚ್ಯುತಿ ಎಂದು ಪರಿಗಣಿಸಬಾರದು, ಆದರೆ ಇದು 'ಜಾತಿ ಸಮೀಕರಣಗಳಿಂದ' ಪ್ರೇರಿತವಾಗಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.;
ಮುಂದಿನ ವರ್ಷ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಹಳೆಯ ಮಿತ್ರ ಎಐಎಡಿಎಂಕೆ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧವಾಗಿರುವುದರಿಂದ, ಕೆ. ಅಣ್ಣಾಮಲೈ ಅವರು ಬಿಜೆಪಿ ತಮಿಳುನಾಡು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬಹುದು ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಅಣ್ಣಾಮಲೈ ಅವರನ್ನು ಬದಲಿಸುವ ಪಕ್ಷದ ಕ್ರಮವನ್ನು 'ಶಿಕ್ಷೆ' ಅಥವಾ ಪದಚ್ಯುತಿ ಎಂದು ಪರಿಗಣಿಸಬಾರದು, ಆದರೆ ಇದು 'ಜಾತಿ ಸಮೀಕರಣಗಳಿಂದ' ಪ್ರೇರಿತವಾಗಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಅಣ್ಣಾಮಲೈ ಅವರು ಸಿ. ಎನ್. ಅಣ್ಣಾದೊರೈ ಮತ್ತು ಜೆ. ಜಯಲಲಿತಾ ಅವರಂತಹ ನಾಯಕರ ಬಗ್ಗೆ ನಿರಂತರವಾಗಿ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವುದರಿಂದ ಎಐಎಡಿಎಂಕೆ ಕೇಸರಿ ಪಕ್ಷದೊಂದಿಗಿನ ಸಂಬಂಧವನ್ನು ಕಡಿದುಕೊಂಡಿತ್ತು. ಹೀಗಾಗಿ ಪುನರ್ಮೈತ್ರಿಗೆ ಅಧ್ಯಕ್ಷ ಸ್ಥಾನ ಬದಲಾವಣೆ ಬಿಜೆಪಿ ಯೋಜನೆಯಾಗಿದೆ.
2026ರ ತಮಿಳುನಾಡು ಚುನಾವಣೆಗೆ ಎರಡು ಪಕ್ಷಗಳ ನಡುವಿನ ಮೈತ್ರಿ ಕುದುರುತ್ತಿದ್ದು. ಗೌಂಡರ್ ಸಮುದಾಯಕ್ಕೆ ಸೇರಿರುವ ಅಣ್ಣಾಮಲೈ ಅವರನ್ನು ಪಕ್ಷದ ಮುಖವಾಗಿರಿಸಲು ಬಿಜೆಪಿ ಸಿದ್ಧವಾಗಿಲ್ಲ. ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ಕೂಡ ಇದೇ ಪ್ರಬಲ ಹಿಂದುಳಿದ ವರ್ಗಕ್ಕೆ ಸೇರಿದವರು ಮತ್ತು ಇಬ್ಬರೂ ಪಶ್ಚಿಮ ಕೊಂಗು ಪ್ರದೇಶದವರು.
ಎಐಎಡಿಎಂಕೆ ಮತ್ತು ಬಿಜೆಪಿ ನಡುವಿನ ಹೊಸ ಮೈತ್ರಿಯ ಬಗ್ಗೆ ಊಹಾಪೋಹಗಳು ಹೆಚ್ಚಾಗಿದ್ದು, ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರೇ, ''ಚರ್ಚೆಗಳು ನಡೆಯುತ್ತಿವೆ,'' ಎಂದು ಸುಳಿವು ನೀಡಿದ್ದಾರೆ.
ಕೇಸರಿ ಬಣ್ಣದಲ್ಲಿ ಸಿಂಗಂ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಇತ್ತೀಚೆಗೆ ಅಣ್ಣಾಮಲೈ ಭೇಟಿಯಾಗಿದ್ದು., ಈ ವೇಳೆ ರಾಜ್ಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕಾಗಬಹುದು ಎಂಬ ಸೂಚನೆಯನ್ನು ಅವರಿಗೆ ನೀಡಲಾಗಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
'ಕೇಸರಿ ಬಣ್ಣದ ಸಿಂಗಂ' ಎಂದು ಕರೆಯು 40 ವರ್ಷದ ಮಾಜಿ ಐಪಿಎಸ್ ಅಧಿಕಾರಿ, ಎರಡು ದ್ರಾವಿಡ ಪಕ್ಷಗಳ ರಾಜಕೀಯ ಪ್ರಾಬಲ್ಯವಿರುವ ರಾಜ್ಯದಲ್ಲಿ ಬಿಜೆಪಿಯನ್ನು ಮುನ್ನೆಲೆಗೆ ಪ್ರಯತ್ನದ ನೇತೃತ್ವ ವಹಿಸಿದ್ದಾರೆ. ತಮಿಳುನಾಡಿನಲ್ಲಿ ಕೇಸರಿ ಪಕ್ಷದ ದೀರ್ಘಕಾಲೀನ ಕಾರ್ಯತಂತ್ರದಲ್ಲಿಅವರು ಪ್ರಮುಖ ವ್ಯಕ್ತಿಯಾಗಿ ಮುಂದುವರಿಯಲಿದ್ದಾರೆ. ಅವರು ರಾಷ್ಟ್ರ ರಾಜಕಾರಣದ ನೇತೃತ್ವ ವಹಿಸಬಹುದು ಎಂದೂ ಹೇಳಲಾಗಿದೆ.
ತಾನು ಪಕ್ಷ ಹಾಗೂ ಹೈಕಮಾಂಡ್ಗೆ ನಿಷ್ಠಾವಂತರಾಗಿ ಉಳಿದಿದ್ದೇನೆ ಮತ್ತು ಸಂಪೂರ್ಣವಾಗಿ ಬದ್ಧನಾಗಿದ್ದೇನೆ ಎಂದು ಅಣ್ಣಾಮಲೈ ಹೇಳಿಕೊಂಡಿದ್ದಾರೆ. ಕೇವಲ ಕಾರ್ಯಕರ್ತನಾಗಿಯೂ ಕೆಲಸ ಮಾಡಲು ಸಿದ್ಧನಿದ್ದೇನೆ ಎಂದೂ ಅವರು ಹೇಳಿದ್ದಾರೆ.
ತಮಿಳುನಾಡಿನ ಹೊಸ ಬಿಜೆಪಿ ಮುಖ್ಯಸ್ಥ ಯಾರು?
ವರದಿಗಳ ಪ್ರಕಾರ, ಮಾಜಿ ಎಐಎಡಿಎಂಕೆ ನಾಯಕ ತೇವರ್ ಸಮುದಾಯಕ್ಕೆ ಸೇರಿರುವ ನೈನಾರ್ ನಾಗೇಂದ್ರನ್ ಅವರು ಅಣ್ಣಾಮಲೈ ಅವರಿಂದ ಅಧ್ಯಕ್ಷಗಿರಿಯನ್ನು ಪಡೆಯಬಹುದು ಎನ್ನಲಾಗಿದೆ.
ಪಶ್ಚಿಮ ತಮಿಳುನಾಡು ಮೀರಿ ತನ್ನ ಹಿಡಿತ ಬಲಪಡಿಸಿಕೊಳ್ಳಲು ಬಿಜೆಪಿ ಉತ್ಸುಕವಾಗಿದೆ ಮತ್ತು ಅವರು ನಾಗೇಂದ್ರನ್ ಅವರಂತಹ ತೇವರ್ ನಾಯಕನನ್ನು ಕರೆತರವುದಕ್ಕೆ ಸಿದ್ಧವಾಗಿದೆ.
ಭಾನುವಾರ (ಮಾರ್ಚ್ 31) ಕೊಯಮತ್ತೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಣ್ಣಾಮಲೈ, ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಈ ವಿಷಯದ ಬಗ್ಗೆ ಅಮಿತ್ ಶಾ ಅವರ ಹೇಳಿಕೆಗಳು ಅಂತಿಮ ಎಂದು ಹೇಳಿದ್ದಾರೆ.
ಎಐಡಿಎಂಕೆಗೆ ಅನಿವಾರ್ಯ
2023ರಲ್ಲಿ ಎನ್ಡಿಎಯಿಂದ ಹೊರನಡೆದ ನಂತರ, ಎಐಎಡಿಎಂಕೆ ಕೇಂದ್ರ ಸರ್ಕಾರವನ್ನು, ವಿಶೇಷವಾಗಿ ಎನ್ಇಪಿ, ತ್ರಿಭಾಷಾ ನೀತಿ ಮತ್ತು ಡಿಲಿಮಿಟೇಶನ್ ಮುಂತಾದ ವಿವಾದಾತ್ಮಕ ವಿಷಯಗಳ ಬಗ್ಗೆ ಬಹಿರಂಗವಾಗಿ ಟೀಕಿಸಿದೆ. ಡಿಲಿಮಿಟೇಶನ್ ಅನ್ನು ವಿರೋಧಿಸಲು ಡಿಎಂಕೆ ಕರೆದ ಸರ್ವಪಕ್ಷ ಸಭೆಯಲ್ಲಿ ಎಐಎಡಿಎಂಕೆ ನಾಯಕ ಜಯಕುಮಾರ್ ಪಕ್ಷವನ್ನು ಪ್ರತಿನಿಧಿಸಿದ್ದರು.
2024 ರ ಲೋಕಸಭಾ ಚುನಾವಣೆಯಲ್ಲಿ ಅದರ ಕಳಪೆ ಪ್ರದರ್ಶನ, ವಿಜಯ್ ಅವರ ಟಿವಿಕೆ ಜೊತೆಗಿನ ಮೈತ್ರಿ ಮಾತುಕತೆ ವೈಫಲ್ಯ ಮತ್ತು ವಿಶೇಷವಾಗಿ ಪಶ್ಚಿಮ ಪ್ರದೇಶದ ಎಐಎಡಿಎಂಕೆ ನಾಯಕರ ಒತ್ತಡದಿಂದಾಗಿ ಮತ್ತೆ ಬಿಜೆಪಿ ಕಡೆಗೆ ಕೈಚಾಚಿದೆ.